ಮಾಜಿ ಶಾಸಕ ಅನಿಲ್ ಲಾಡ್ ಕಾರು ಅಪಘಾತ.. ಪತ್ನಿ ಚಲಾಯಿಸುತ್ತಿದ್ದರು
ಬಳ್ಳಾರಿ ಮೂಲದ ಮಾಜಿ ಶಾಸಕ ಅನೀಲ್ ಲಾಡ್ ಕಾರು ಅಪಘಾತ/ ಪ್ರಾಣಾಪಾಯದಿಂದ ಪಾರಾದ ಮಾಜಿ ಶಾಸಕ/ ಬೆಂಗಳೂರಿನ ಸಂಜಯ ನಗರದಲ್ಲಿ ನಡೆದ ಘಟನೆ/ ಸ್ನೇಹಿತರ ಮನೆಗೆ ಹೋಗಿ ವಾಪಸ್ ಬರುವಾಗ ಅಪಘಾತ/ ರಸ್ತೆಯಲ್ಲಿ ಅಡ್ಡ ಬಂದ ನಾಯಿ, ನಾಯಿ ತಪ್ಪಿಸಲು ಹೋಗಿ ಮರಕ್ಕೆ ಡಿಕ್ಕಿ ಹೊಡೆದ ಕಾರ್
ಬೆಂಗಳೂರು (ಜ. 18)ಮಾಜಿ ಶಾಸಕ ಅನಿಲ್ ಲಾಡ್ ಕಾರು ಅಪಘಾತಕ್ಕೆ ಗುರಿಯಾಗಿದೆ. ಮಾಜಿ ಶಾಸಕಕರು ಅಪಾಯದಿಂದ ಪಾರಾಗಿದ್ದಾರೆ.
ಬೆಂಗಳೂರಿನ ಸಂಜಯ ನಗರದಲ್ಲಿ ನಡೆದ ಘಟನೆ. ಸ್ನೇಹಿತರ ಮನೆಗೆ ಹೋಗಿ ವಾಪಸ್ ಬರುವಾಗ ಅಪಘಾತಕ್ಕೆ ವಾಹನ ಗುರಿಯಾಗಿದೆ. ರಸ್ತೆಯಲ್ಲಿ ಅಡ್ಡ ಬಂದ ನಾಯಿ ತಪ್ಪಿಸಲು ಹೋಗಿ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ.
ಬಾಲ್ಯದ ಗೆಳತಿಯರನ್ನು ಮಸಣಕ್ಕೆ ಸೇರಿಸಿದ ಘೋರ ಅಪಘಾತ..
ಅನೀಲ್ ಲಾಡ್ ಎರಡು ಕೈ ಗಳಿಗೆ ಗಾಯಗಳಾಗಿದ್ದು ವಿಕ್ರಮ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಭಾನುವಾರ ಮುಂಜಾನೆ 3 ಗಂಟೆ ಸಮಯದಲ್ಲಿ ನಡೆದ ಅವಘಡ ನಡೆದಿದೆ. ಅನಿಲ್ ಲಾಡ್ ಪತ್ನಿ ಕಾರು ಚಲಾಯಿಸುತ್ತಿದ್ದರು ಎನ್ನಲಾಗಿದೆ.