ಹಾವೇರಿಯಲ್ಲಿ ಮತ್ತೊಂದು ನೈತಿಕ ಪೊಲೀಸಗಿರಿ ! ಹಿಂದು ಯುವಕ ಮುಸ್ಲಿಂ ಯುವತಿಗೆ ಥಳಿತ!
ಹಾನಗಲ್ಲ ನಾಲ್ಕರ ಕ್ರಾಸ್ ನೈತಿಕ ಪೊಲೀಸ್ ಗಿರಿ ಮಾಸುವ ಮುನ್ನವೇ ಬ್ಯಾಡಗಿಯಲ್ಲಿ ಮತ್ತೊಂದು ನೈತಿಕ ಪೊಲೀಸ್ ಗಿರಿ ಪ್ರಕರಣ ಸಂಭವಿಸಿದೆ.
ಬ್ಯಾಡಗಿ ಜ.20 : ಹಾನಗಲ್ಲ ನಾಲ್ಕರ ಕ್ರಾಸ್ ನೈತಿಕ ಪೊಲೀಸ್ ಗಿರಿ ಮಾಸುವ ಮುನ್ನವೇ ಬ್ಯಾಡಗಿಯಲ್ಲಿ ಮತ್ತೊಂದು ನೈತಿಕ ಪೊಲೀಸ್ ಗಿರಿ ಪ್ರಕರಣ ಸಂಭವಿಸಿದೆ.
ಹಾವೇರಿಯಿಂದ ಬ್ಯಾಡಗಿಗೆ ತನ್ನ ಅಕ್ಕನ ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಪಟ್ಟಣದ ಪುರಸಭೆ ಬಳಿ ಇರುವ ಈಶ್ವರ ದೇವಸ್ಥಾನ ಬಳಿ ಮುಸ್ಲಿಂ ಯುವತಿ ಒಬ್ಬಳು ಹಿಂದೂ ಹುಡುಗನ ಜತೆಗೆ ಮಾತನಾಡುತ್ತಿದ್ದಾಳೆ ಎಂದು ಆರೋಪಿಸಿ7 ಜನ ಮುಸ್ಲಿಂ ಹುಡುಗರು ಹಿಂದು ಯುವಕ ಮತ್ತು ಮುಸ್ಲಿಂ ಯುವತಿಯ ಮೇಲೆ ಹಲ್ಲೆ ನಡೆಸಿ ಪರಾರಿಯಾಗುತ್ತಿದ್ದ ವೇಳೆ ಜನರ ಕೈಗೆ ಸಿಕ್ಕು ಅವರನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.
ಪೊಲೀಸ್ ಠಾಣೆಯಲ್ಲಿ ಈ ಕುರಿತಂತೆ ಎಸ್ಪಿ ಸಮ್ಮುಖದಲ್ಲಿ ವಿಚಾರಣೆ ನಡೆಯುತ್ತಿದೆ. ಹೆಚ್ಚಿನ ಮಾಹಿತಿ ಗೊತ್ತಾಗಬೇಕಿದೆ. ಹಾವೇರಿ ಹುಮ್ನಾಬಾದ್ ಓಣಿಯ ಯುವತಿ ಮತ್ತು ಹಾವೇರಿ ಮಾಚಾಪುರ ಗ್ರಾಮದ ಯುವಕ ಜಗದೀಶ ಕರೇಗೌಡ್ರ ಹಲ್ಲೆಗೋಳಗಾದವರು ಈ ಬಗ್ಗೆ ಪೊಲೀಸ್ ಪ್ರಕರಣ ದಾಖಲಾಗಿಲ್ಲ.
ಪ್ರಧಾನಿ ಮೋದಿ ಕಲಬುರಗಿಗೆ ಬಂದ್ರೂ ಸ್ವಾಗತಕ್ಕೆ ಬಾರದ ಪ್ರಿಯಾಂಕ್ ಖರ್ಗೆ!
ಹಾನಗಲ್‌ನ ಪ್ರಕರಣದಲ್ಲಿ ಪೊಲೀಸರು ಸಮರ್ಪಕವಾಗಿ ತನಿಖೆ ನಡೆಸುತ್ತಿಲ್ಲ ಎಂದು ಆರೋಪಿಸಿ ಬಿಜೆಪಿ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ನೇತೃತ್ವದಲ್ಲಿ ಶನಿವಾರ ಪ್ರತಿಭಟನೆ ಹಮ್ಮಿಕೊಂಡಿದ್ದು, ಈ ಸಂದರ್ಭದಲ್ಲಿಯೇ ಮತ್ತೊಂದು ನೈತಿಕ ಪೊಲೀಸ್‌ಗಿರಿ ನಡೆದಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.