ವಿಜಯಪುರ(ಡಿ.13): ಭೀಮಾತೀರದ ಮಹಾದೇವ ಸಾಹುಕಾರ ಬೈರಗೊಂಡ ಮೇಲೆ ನಗರದ ಹೊರವಲಯ ಕನ್ನಾಳ ಕ್ರಾಸ್‌ ಹತ್ತಿರದ ರಾಷ್ಟ್ರೀಯ ಹೆದ್ದಾರಿ ಹತ್ತಿರ ಗುಂಡಿನ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯನ್ನು ಶನಿವಾರ ಬಂಧಿಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದ ಇಲ್ಲಿಯವರೆಗೆ ಒಟ್ಟು 31 ಜನ ಆರೋಪಿಗಳನ್ನು ಬಂಧಿಸಿದ್ದಾರೆ.

ಮೂಲತಃ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮದ ಮುರಗೇಶ ಸುಭಾಸ ಉಳ್ಳಾಗಡ್ಡಿ (26) ಬಂಧಿತ ಆರೋಪಿ. ಈ ಆರೋಪಿಯಿಂದ ಕೃತ್ಯಕ್ಕೆ ಬಳಸಿದ ಎರಡು ಮೊಬೈಲ್‌ ಜಪ್ತಿ ಮಾಡಲಾಗಿದೆ. ಮಹಾದೇವ ಸಾಹುಕಾರ ಬೈರಗೊಂಡ ಕಾರಿಗೆ ನ.2ರಂದು ಟಿಪ್ಪರ್‌ ಡಿಕ್ಕಿ ಹೊಡಿಸಿ, ಗುಂಡಿನ ದಾಳಿ ನಡೆಸಲಾಗಿತ್ತು.

ವಿಜಯಪುರ: ಬೈರಗೊಂಡ ಪ್ರಕರಣ, ಮಲ್ಲಿಕಾರ್ಜುನ ಚಡಚಣ ಮೇಲೂ ಕೇಸ್‌

ಈ ಘಟನೆಯಲ್ಲಿ ಬೈರಗೊಂಡ ಸಹಚರ ಹಾಗೂ ಕಾರು ಚಾಲಕ ಸೇರಿ ಇಬ್ಬರು ಮೃತಪಟ್ಟಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಒಟ್ಟು 31 ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ಅನುಪಮ್‌ ಅಗರವಾಲ್‌ ತಿಳಿಸಿದ್ದಾರೆ.