ಸಂಸದ ತೇಜಸ್ವಿ ಸೂರ್ಯ ಹೆಸರಲ್ಲಿ ಅನಾಮಧೇಯ ಕರೆ: ವಜ್ರ, ಹಣಕ್ಕೆ ಬೇಡಿಕೆ
ಜನ ಸಂಪರ್ಕಕ್ಕೆ ಮೀಸಲಾಗಿಟ್ಟಿದ್ದ ತಮ್ಮ ಮೊಬೈಲ್ ಸಂಖ್ಯೆಯನ್ನು ಅಕ್ರಮವಾಗಿ ಬಳಸಿ ಗುಜರಾತ್ ರಾಜ್ಯದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಿಗೆ ಕರೆ ಮಾಡಿ ವಜ್ರ ಹಾಗೂ ಹಣಕ್ಕೆ ಕಿಡಿಗೇಡಿ ಬೇಡಿಕೆ ಇಟ್ಟಿದ್ದ ಎಂದು ಆರೋಪಿಸಿ ದಕ್ಷಿಣ ವಿಭಾಗದ ಸಿಇಎನ್ ಠಾಣೆಯಲ್ಲಿ ಸಂಸದರೂ ಆಗಿರುವ ಬಿಜೆಪಿ ರಾಷ್ಟ್ರೀಯ ಯುವಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ದೂರು ನೀಡಿದ್ದಾರೆ.
ಬೆಂಗಳೂರು (ಜು.06): ಜನ ಸಂಪರ್ಕಕ್ಕೆ ಮೀಸಲಾಗಿಟ್ಟಿದ್ದ ತಮ್ಮ ಮೊಬೈಲ್ ಸಂಖ್ಯೆಯನ್ನು ಅಕ್ರಮವಾಗಿ ಬಳಸಿ ಗುಜರಾತ್ ರಾಜ್ಯದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಿಗೆ ಕರೆ ಮಾಡಿ ವಜ್ರ ಹಾಗೂ ಹಣಕ್ಕೆ ಕಿಡಿಗೇಡಿ ಬೇಡಿಕೆ ಇಟ್ಟಿದ್ದ ಎಂದು ಆರೋಪಿಸಿ ದಕ್ಷಿಣ ವಿಭಾಗದ ಸಿಇಎನ್ ಠಾಣೆಯಲ್ಲಿ ಸಂಸದರೂ ಆಗಿರುವ ಬಿಜೆಪಿ ರಾಷ್ಟ್ರೀಯ ಯುವಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ದೂರು ನೀಡಿದ್ದಾರೆ.
ನಾಲ್ಕು ದಿನಗಳ ಹಿಂದೆ ಗುಜರಾತ್ ರಾಜ್ಯದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪ್ರಶಾಂತ್ ಕೊರಟೆಗೆ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಸಂಸದ ತೇಜಸ್ವಿ ಸೂರ್ಯ ಹೆಸರಿನಲ್ಲಿ ಕರೆ ಹೋಗಿದೆ. ಈ ಕರೆ ಬಗ್ಗೆ ಅನುಮಾನಗೊಂಡು ಸಂಸದರನ್ನು ಪ್ರಶಾಂತ್ ಸಂಪರ್ಕಿಸಿದಾಗ ಸತ್ಯ ಗೊತ್ತಾಗಿದೆ. ಬಳಿಕ ಸಿಇಎನ್ ಠಾಣೆಗೆ ಸಂಸದರ ಪರವಾಗಿ ಅವರ ಆಪ್ತ ಕಾರ್ಯದರ್ಶಿ ವಿ.ಭಾನುಪ್ರಕಾಶ್ ದೂರು ನೀಡಿದ್ದು, ಅದನ್ವಯ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ವಿಪಕ್ಷ ನಾಯಕನ ಆಯ್ಕೆ ಮಾಡದೆ ಬುರುಡೆ ಬಿಡ್ತೀರಾ?: ಸಿಎಂ ಸಿದ್ದರಾಮಯ್ಯ ತರಾಟೆ
ಕೆಲಸದ ಒತ್ತಡ ಹಿನ್ನಲೆಯಲ್ಲಿ ಸಂಸದ ತೇಜಸ್ವಿ ಸೂರ್ಯ ಅವರ ಅಧಿಕೃತ ಸಂವಹನಕ್ಕೆ ಬಳಸುವ ಮೊಬೈಲ್ ನಂಬರ್‌ನ್ನು ಆಪ್ತ ಕಾರ್ಯದರ್ಶಿ ಭಾನುಪ್ರಕಾಶ್‌ರವರ ಬಳಿ ಇರಲಿದೆ. ಈ ಮೊಬೈಲ್‌ಗೆ ಬರುವ ಕರೆಗಳನ್ನು ಸ್ವೀಕರಿಸಿ ಅದರ ಬಗ್ಗೆ ಸಂಸದರಿಗೆ ನಿಯಮಿತವಾಗಿ ಅವರು ಮಾಹಿತಿ ನೀಡಲಿದ್ದಾರೆ. ಜುಲೈ 1ರಂದು ಗುಜರಾತ್ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಅಧ್ಯಕ್ಷ ಪ್ರಶಾಂತ್ ಕೊರಟ್ ಮೊಬೈಲ್‌ಗೆ ಸಂಸದರ ಮೊಬೈಲ್‌ನಿಂದ ಕರೆ ಹೋಗಿದೆ. ಹಣ ಮತ್ತು ವಜ್ರವನ್ನು ನೀಡುವಂತೆ ಕಿಡಿಗೇಡಿ ಬೇಡಿಕೆ ಇಟ್ಟಿದ್ದಾನೆ.
ಮಾಜಿ ಸಚಿವ ಸೋಮಣ್ಣ ದೂರಿನ ಹಿನ್ನೆಲೆ: ವಿಜಯೇಂದ್ರ ಆಪ್ತ ರುದ್ರೇಶ್ ಸೇರಿದಂತೆ 15 ಜನರಿಗೆ ಬಿಜೆಪಿ ನೋಟಿಸ್
ಕೂಡಲೇ ಸಂಸದ ತೇಜಸ್ವಿ ಸೂರ್ಯ ಅವರನ್ನು ಪ್ರಶಾಂತ್ ಕೊರಟ್ ಸಂಪರ್ಕಿಸಿದ್ದಾರೆ. ಆಗ ತಮ್ಮ ಆಪ್ತ ಕಾರ್ಯದರ್ಶಿಯಿಂದ ಅಂತಹ ಯಾವುದೇ ಕರೆ ಮಾಡಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಭಾನುಪ್ರಕಾಶ್, ಸಂಸದರ ಮೊಬೈಲ್ ನಂಬರ್‌ನ್ನು ದುರ್ಬಳಕೆ ಮಾಡಿಕೊಂಡಿರುವ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ದೂರಿನಲ್ಲಿ ಮನವಿ ಮಾಡಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖವಾಗಿದೆ.