Asianet Suvarna News Asianet Suvarna News

Animal Brutality : ಸಂಭೋಗ ನಡೆಸ್ತಿದ್ದ ಶ್ವಾನದ ಶಿಶ್ನ ಕತ್ತರಿಸಿ ವಿಕೃತಿ... ಇಂಥವರಿಗೆ ಯಾವ ಶಿಕ್ಷೆ!

* ಮುಂಬೈನಿಂದ ದಾಖಲಾದ ಅತ್ಯಂತ ಹೇಯ ಕೃತ್ಯ
* ಶ್ವಾನದ ಶಿಶ್ನ ಕತ್ತರಿಸಿದ ವಿಕೃತ
* ಅಪರಿಚಿತನ ಪತ್ತೆಗೆ ಪೊಲೀಸ್ ಕಾರ್ಯಾಚರಣೆ
* ಕಾನೂನು ಬದಲಾವಣೆಗೆ ಸಂಘಟನೆಗಳ ಒತ್ತಾಯ

Animal brutality in Mumbai dog s penis chopped off by unidentified man mah
Author
Bengaluru, First Published Dec 29, 2021, 6:13 PM IST

ಮುಂಬೈ(ಡಿ. 29)  ಇದೊಂದು ಅತ್ಯಂತ ಕ್ರೂರ (Animal Brutality)ಪ್ರಕರಣ.  ಮಹಾರಾಷ್ಟ್ರದ ರಾಜಧಾನಿ ಮುಂಬೈನಿಂದ (Mumbai) ವರದಿಯಾಗಿದೆ. ಪ್ರಾಣಿ ಹಿಂಸೆಯ ಪ್ರಕರಣ. ಡಿಸೆಂಬರ್ 25   ರಾತ್ರಿ ಅಪರಿಚಿತ ವ್ಯಕ್ತಿಯೊಬ್ಬ ನಾಯಿಯ ಶಿಶ್ನ ಕತ್ತರಿಸಿ ವಿಕೃತಿ ಮೆರೆದಿದ್ದಾನೆ. ಅಂಧೇರಿ (ಪೂರ್ವ) ಕಪಾಸ್ವಾಡಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ.  ಶ್ವಾನಗಳು (Dog) ಸಂಭೋಗ ನಡೆಸುತ್ತಿದ್ದ ವೇಳೆ ಕ್ರೂರಿ ಇಂಥ ಕೆಲಸ ಮಾಡಿದ್ದಾನೆ.

ತೀವ್ರ ಗಾಯಗೊಂಡಿದ್ದ ಶ್ವಾನವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ  ನೀಡಲಾಗುತ್ತಿದೆ. ನಾಯಿಯನ್ನು ಪರೇಲ್‌ನಲ್ಲಿರುವ ಬಾಂಬೆ ಸೊಸೈಟಿ ಫಾರ್ ದಿ ಪ್ರಿವೆನ್ಶನ್ ಆಫ್ ಕ್ರೌಲ್ಟಿ ಟು ಅನಿಮಲ್ಸ್ (SPCA) ಗೆ ಕರೆದುಕೊಂಡು ಬರಲಾಯಿತು.

ಈ ನಡುವೆ ಪಶುಸಂಗೋಪನಾ ಇಲಾಖೆಯ ಉಪ ಆಯುಕ್ತ ಡಾ.ಶೈಲೇಶ್ ಪೇಠೆ ಅವರು ಡಿಎನ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ 1960 ರ ಅಡಿಯಲ್ಲಿ ದೂರು ದಾಖಲಿಸಲಾಗಿದೆ.

 ಘಟನೆಯ ಬಗ್ಗೆ ನಮಗೆ ತಿಳಿದ ತಕ್ಷಣ ನಾವು ಕಪಸ್ವಾಡಿಗೆ ತೆರಳಿದೆವು. ಗಂಭೀರ ಗಾಯಗೊಂಡಿದ್ದ ಶ್ವಾನಕ್ಕೆ ಚಿಕಿತ್ಸೆ  ನೀಡಿದೆವು ಎಂದು    ಸ್ಥಳೀಯ ಪಶು ಆಹಾರಾಧಿಕಾರಿ ಅಬಾನ್ ಮಿಸ್ತ್ರಿ ತಿಳಿಸಿದ್ದಾರೆ

Viral Video : ಆಮೆ  ಪ್ರಾಣ ಕಾಪಾಡಿದ ಎಮ್ಮೆ..ಮನುಷ್ಯರಿಗಿಂತ ಪ್ರಾಣಿಗಳೇ ಮೇಲು!

ಹೀನ ಕೃತ್ಯ ಎಸಗಿದ ಕಿರಾತಕನ ಹುಡುಕಾಟಕ್ಕೆ ಬಲೆ ಬೀಸಲಾಗಿದೆ. ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯ ಅಧಿಕಾರಿ ಮಿತೇಶ್ ಜೈನ್ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದ್ದಾರೆ. ಪ್ರಾಣಿ ಹಕ್ಕು ಸಂರಕ್ಷಣಾ ಸಮಿತಿಯವರು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರಿಗೂ ಪತ್ರ ಬರೆದು ಕ್ರಮಕ್ಕೆ ಆಗ್ರಹಿಸಿದ್ದಾರೆ. ಪ್ರಾಣಿ ಹಿಂಸೆಯ ಪ್ರಕರಣಗಳಲ್ಲಿ ಕಠಿಣ ಶಿಕ್ಷೆಯನ್ನು ಖಚಿತಪಡಿಸಿಕೊಳ್ಳಲು ಪಿಸಿಎ ಕಾಯಿದೆ 1960 ಗೆ ತಿದ್ದುಪಡಿ ಮಾಡಬೇಕೆಂದು ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಪ್ರಾಣಿ ಹಿಂಸೆ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ರುಜುವಾತಾದರೆ ಆತ ಕೇವಲ 50 ರೂ.ಗಳ ದಂಡ ಪಾವತಿಸಿ ಶಿಕ್ಷೆಯಿಂದ ಮುಕ್ತವಾಗಬಹುದು! ಇಂಥ ಕಾನೂನು ಬದಲಾವಣೆ ಮಾಡಿ   ಎಂಬ ಒತ್ತಾಯ ಕೇಳಿ ಬಂದಿದೆ. 

ಪ್ರಾಣಿ ಪ್ರೀತಿಗೆ ಅಕ್ಷರಗಳು ಸಾಕಾಗಲ್ಲ:  ಪ್ರಾಣಿಗಳಲ್ಲೇ ಅತ್ಯಂತ ಬುದ್ಧಿವಂತ ಪ್ರಾಣಿ ಆನೆ. ಪ್ರಾಣಿಗಳಿಗೆ ಬಾಯಿ ಬಾರದಿರಬಹುದು. ಆದರೆ ಅವು ಬುದ್ದಿವಂತಿಕೆ ಹಾಗೂ ಭಾವನೆಗಳನ್ನು ವ್ಯಕ್ತಪಡಿಸುವುದರಲ್ಲಿ ಮನುಷ್ಯನಿಗಿಂತ ಯಾವುದೇ ರೀತಿಯಲ್ಲೂ ಕಡಿಮೆ ಇಲ್ಲ. ಪ್ರಾಣಿಗಳ ಪ್ರೀತಿ ಹಾಗೂ ಭಾವುಕತೆ ಬಗ್ಗೆ ಈಗಾಗಲೇ ನಾವು ಹಲವು ನಿದರ್ಶನಗಳನ್ನು ನೋಡಿರಬಹುದು. ಈಗ ನಾವು ಹೇಳ ಹೊರಟಿರುವುದು ಆನೆಗಳ ಪ್ರೀತಿ ಬಗ್ಗೆ. ಆನೆಗಳು ತಮ್ಮನ್ನು ನೋಡಿಕೊಂಡಿದ್ದ ವ್ಯಕ್ತಿಯನ್ನು 14 ತಿಂಗಳ ಬಳಿಕ ಮೊದಲ ಬಾರಿಗೆ ನೋಡಿದಾಗ ಅವುಗಳ ಭಾವುಕ ಪುನರ್‌ಮಿಲನದ ವಿಡಿಯೋ ಇದಾಗಿದೆ. ತಮ್ಮನ್ನು ಸಾಕಿದವನನ್ನು  14 ತಿಂಗಳ ಬಳಿಕ ನೋಡುವ ಆನೆಗಳು ಆತನ ಸುತ್ತ ಸೇರಿ ಪ್ರೀತಿ ಮಾಡುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

Buitengebieden ಎಂಬ ಟ್ವಿಟ್ಟರ್‌ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಆಗಿದ್ದು,  3.7 ಮಿಲಿಯನ್‌ಗೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಈ ವಿಡಿಯೋದಲ್ಲಿ  ಆಳವಿಲ್ಲದ ಹರಿಯುವ ನೀರಿನಲ್ಲಿ ದೂರದಲ್ಲಿ ನಿಂತು, ಆನೆ ಸಾಕಿದ ಡೆರೆಕ್‌ (Derek)ಎಂಬವರು  ತಮ್ಮ ಬಾಯಿಯ ಮೂಲಕ ವಿಭಿನ್ನವಾದ ಶಬ್ಧವನ್ನು ಮಾಡುತ್ತಾರೆ. ಈ ಶಬ್ಧವನ್ನು ಕೇಳಿಸಿದ ಕೂಡಲೇ ಶಬ್ಧ ಬಂದ ಕಡೆಗೆ ಧಾವಿಸಿ ಬರುವ ನಾಲ್ಕು ಐದು ಆನೆಗಳ ಗುಂಪು  ಹರಿಯುವ ನೀರಿಗೆ ವಿರುದ್ಧವಾದ ದಿಕ್ಕಿನಲ್ಲಿ ನಿಂತಿರುವ ತಮ್ಮನ್ನು ಸಾಕಿದಾತನನ್ನು ನೋಡಲು ಬೇಗ ಬೇಗನೇ ಧಾವಿಸಿ ಬರುತ್ತವೆ. ಬಳಿಕ ಸಾಕಿದಾತನ ಸುತ್ತ ಸೇರಿ ತಮ್ಮ ಸೊಂಡಿಲಿನಲ್ಲಿ ಆತನನ್ನು ಮುದ್ದಾಡುತ್ತವೆ. 

ಆಮೆ ಕಾಪಾಡಿದ ಎಮ್ಮೆ: ಅದೆಷ್ಟೋ  ಸಂದರ್ಭದಲ್ಲಿ ಪ್ರಾಣಿಗಳೇ (Anima) ಮನುಷ್ಯನಿಗಿಂತ ಮೇಲು ಎನ್ನುವುದಕ್ಕೆ ಉದಾಹರಣೆಗಳು ಸಿಗುತ್ತಲೇ ಇರುತ್ತವೆ. ಇದು ಸಹ ಅಂಥದ್ದೇ ಒಂದು ನಿದರ್ಶನ.  ಎಮ್ಮೆಯೊಂದು (Buffalo)ಆಮೆಯ (Tortoise) ಪ್ರಾಣ ರಕ್ಷಣೆ ಮಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗಿದೆ. ಪ್ರಾಣಿಗಳನ್ನೇ ಕೊಂಡಾಡಬೇಕಿದೆ.

ರಸ್ತೆಯಲ್ಲಿ ಅಪಘಾತವಾಗಿ ಮನುಷ್ಯನೊಬ್ಬ ಬಿದ್ದುಕೊಂಡಿದ್ದರೆ ತಮಗೆ ಏನೂ ಸಂಬಂಧವೇ ಇಲ್ಲ ಎಂಬಂತೆ ನೋಡಿಕೊಂಡು ಹೋಗುವ ಅದೆಷ್ಟೋ ಜನರನ್ನು ಕಂಡಿದ್ದೇವೆ. ಒಮ್ಮೊಮ್ಮೆ ನಮ್ಮ ಸಮಾಜದ ವರ್ತನೆ ನಮಗೆ  ನಾಚಿಕೆ ತರಿಸುವಂತೆ ಇರುತ್ತದೆ.   ನೀರೆಮ್ಮೆ ಆಮೆಯ ಪ್ರಾಣ ರಕ್ಷಣೆ ಮಾಡಿದ ವಿಡಿಯೋ ಪ್ರಾಣಿ ಲೋಕವನ್ನು ನಮ್ಮ ಮುಂದೆ ತೆರೆದಿರಿಸುತ್ತದೆ.  ಕೇವಲ 15 ಸೆಕೆಂಡುಗಳ ವಿಡಿಯೋ ಪ್ರಾಣಿ ಲೋಕದ ಅಚ್ಚರಿಯನ್ನು ನಮ್ಮ ಮುಂದೆ ತೆರೆದಿರಿಸಿತ್ತು. 

 

Follow Us:
Download App:
  • android
  • ios