Asianet Suvarna News Asianet Suvarna News

ಸಾಕಿದ ಶ್ವಾನವನ್ನು 'ನಾಯಿ' ಎಂದಿದ್ದಕ್ಕೆ 62 ವರ್ಷದ ವ್ಯಕ್ತಿ ಕೊಲೆ..!

ರಾಯಪ್ಪನ್‌ ಆ ಸಾಕುನಾಯಿಯನ್ನು ಹಗ್ಗದ ಸಹಾಯದಿಂದ ಕಟ್ಟಿಹಾಕಿ ಎಂದು ಕೇಳಿಕೊಂಡಿದ್ದರು. ಅಲ್ಲದೆ,  ಗುರುವಾರ ರಾಯಪ್ಪನ್ ಅವರು ತಮ್ಮ ಜಮೀನಿನಲ್ಲಿ ಚಾಲನೆಯಲ್ಲಿರುವ ನೀರಿನ ಪಂಪ್ ಅನ್ನು ಸ್ವಿಚ್ ಆಫ್ ಮಾಡಲು ಮೊಮ್ಮಗ ಕೆಲ್ವಿನ್ ಅವರನ್ನು ಕೇಳಿದ ಬಳಿಕ ಅವರನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ. 

angry neighbours kills man for calling his pet dog a dog in dindigul ash
Author
First Published Jan 21, 2023, 3:05 PM IST

ದಿಂಡಿಗಲ್‌ (ಜನವರಿ 21, 2023) : ಸಾಕು ನಾಯಿಯನ್ನು ಅದರ ಹೆಸರಿನಿಂದ ಕರೆಯದೆ ನಾಯಿ ಎಂದು ಕರೆದಿದ್ದಕ್ಕೆ 62 ವರ್ಷದ ವ್ಯಕ್ತಿಯನ್ನು ಕೊಲೆ ಮಾಡಲಾಗಿರುವ ಘಟನೆ ತಮಿಳುನಾಡಿನ ದಿಂಡಿಗಲ್‌ ಜಿಲ್ಲೆಯಲ್ಲಿ ಗುರುವಾರ ನಡೆದಿದೆ. ದಿಂಡಿಗಲ್‌ ಜಿಲ್ಲೆಯ ಥಡಿಕೊಂಬು ಪೊಲೀಸ್‌ ಠಾಣಾ ವ್ಯಾಪ್ತಿಯ ಉಲಗಂಪಟ್ಟಿಯಾರ್‌ಕೊಟ್ಟಂ ಗ್ರಾಮದಲ್ಲಿ ನಡೆದಿದೆ. ಸಾಕು ನಾಯಿಯ ಮಾಲೀಕರಾದ ನಿರ್ಮಲಾ ಫಾತಿಮಾ ರಾಣಿ ಹಾಗೂ ಅವರ ಮಕ್ಕಳಾದ ಡೇನಿಯೆಲ್ ಹಾಗೂ ವಿನ್ಸೆಂಟ್‌, ಈ ಹಿಂದೆಯೇ ತಮ್ಮ ಸಂಬಂಧಿಕರೂ ಆದ 62 ವರ್ಷದ ರಾಯಪ್ಪನ್‌ಗೆ ನಾಯಿ ಎಂದು ಕರೆಯಬೇಡಿ ಎಂದು ಹಲವು ಬಾರಿ ಎಚ್ಚರಿಕೆ ನೀಡಿದ್ದರು ಎಂದು ತಿಳಿದುಬಂದಿದೆ. 

ಇನ್ನೊಂದೆಡೆ, ರಾಯಪ್ಪನ್‌ ಆ ಸಾಕುನಾಯಿಯನ್ನು ಹಗ್ಗದ ಸಹಾಯದಿಂದ ಕಟ್ಟಿಹಾಕಿ ಎಂದು ಕೇಳಿಕೊಂಡಿದ್ದರು. ಅಲ್ಲದೆ,  ಗುರುವಾರ ರಾಯಪ್ಪನ್ ಅವರು ತಮ್ಮ ಜಮೀನಿನಲ್ಲಿ ಚಾಲನೆಯಲ್ಲಿರುವ ನೀರಿನ ಪಂಪ್ ಅನ್ನು ಸ್ವಿಚ್ ಆಫ್ ಮಾಡಲು ಮೊಮ್ಮಗ ಕೆಲ್ವಿನ್ ಅವರನ್ನು ಕೇಳಿದ ಬಳಿಕ ಅವರನ್ನು ಹತ್ಯೆ ಮಾಡಲಾಗಿದೆ ಎಂದೂ ತಿಳಿದುಬಂದಿದೆ. ನಾಯಿ ಸುತ್ತಲಿರುವ ಕಾರಣ ಕೋಲು ಒಯ್ಯುವಂತೆ ಕೆಲ್ವಿನ್‌ಗೆ ರಾಯಪ್ಪನ್‌ ಅವರು ಹೇಳಿದ್ದರು.

ಇದನ್ನು ಓದಿ: ನಾಯಿ ಕಡಿತಕ್ಕೆ ನೀಡುವ ಇಂಜೆಕ್ಷನ್‌ ವೆಚ್ಚ ಭರಸಿ :ಡಿಸಿ ಸೂಚನೆ

ಇದನ್ನು ಕೇಳಿದ ಡೇನಿಯಲ್ ಕೋಪಗೊಂಡು ರಾಯಪ್ಪನ್‌ ಅವರ ಜತೆಗೆ ಜಗಳವಾಡಿದ್ದಾರೆ. ಈ ವೇಳೆ ಅವರ ಎದೆಗೆ ಪಂಚ್‌ ಮಾಡಿದ್ದಾರೆ. ನಂತರ, ರಾಯಪ್ಪನ್‌ ಅವರು ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.  ಬಳಿಕ, ಡೇನಿಯಲ್ ಮತ್ತು ಕುಟುಂಬದವರು ಅರೆಸ್ಟ್‌ ಆಗುವ ಭೀತಿಯಿಂದ ಸ್ಥಳದಿಂದ ಓಡಿಹೋದರು ಎಂದು ತಿಳಿದುಬಂದಿದೆ. ಆದರೆ, ಈ ಘಟನೆ ಸಂಬಂಧ ತನಿಖೆ ನಡೆಸುತ್ತಿರುವ ಪೊಲೀಸರು, ಶುಕ್ರವಾರ ನಿರ್ಮಲಾ ಮತ್ತು ಅವರ ಪುತ್ರರನ್ನು ಬಂಧಿಸಿದ್ದಾರೆ. ಅಲ್ಲದೆ, ಐಪಿಸಿಯ ಹಲವು ಕಾಯ್ದೆಗಳಡಿ ಪೊಲೀಸರು ಆರೋಪಿಗಳ ವಿರುದ್ಧ ಕೇಸ್‌ ದಾಖಲಿಸಿದ್ದಾರೆ ಎಂದು ವರದಿಯಾಗಿದೆ. 

ಬೀದಿ ಬದಿ ನಾಯಿಗೆ ಆಹಾರ ತಿನ್ನಿಸುತ್ತಿದ್ದ ಯುವತಿಗೆ ಡಿಕ್ಕಿ ಹೊಡೆದಿದ್ದ ಕಾರು..!
ಕೆಲ ದಿನಗಳ ಹಿಮದೆ, ಬೀದಿ ಬದಿ ನಾಯಿಗೆ ಆಹಾರ ತಿನ್ನಿಸುತ್ತಿದ್ದ ಯುವತಿಗೆ ಕಾರೊಂದು ಡಿಕ್ಕಿ ಹೊಡೆದು ಯುವತಿ ಗಂಭೀರ ಗಾಯಗೊಂಡ ಘಟನೆ ಚಂಡೀಗಢದಲ್ಲಿ ನಡೆದಿತ್ತು. ಹಾಗೂ, ಈ ಅವಘಡದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿತ್ತು. ಇದೊಂದು ಹಿಟ್ & ರನ್ ಪ್ರಕರಣವಾಗಿದ್ದು, ವೇಗವಾಗಿ ಬಂದ ಕಾರೊಂದು ರಸ್ತೆ ಬದಿ ಬೀದಿನಾಯಿಗೆ ಆಹಾರ ತಿನ್ನಿಸುತ್ತಿದ್ದ ಯುವತಿಗೆ ಡಿಕ್ಕಿ ಹೊಡೆದು ಪರಾರಿಯಾಗಿತ್ತು. ಈ ಅಪಘಾತದಲ್ಲಿ ಗಾಯಗೊಂಡ ಯುವತಿಯನ್ನು ತೇಜಸ್ವಿತ ಎಂದು ಗುರುತಿಸಲಾಗಿದ್ದು, ಕಾರು ಡಿಕ್ಕಿ ಹೊಡೆದಿದ್ದರಿಂದ ಗಂಭೀರ ಗಾಯಗೊಂಡ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. 

ಇದನ್ನೂ ಓದಿ: ನಾಯಿಗೆ ಆಹಾರ ನೀಡುತ್ತಿದ್ದ ಯುವತಿಯನ್ನು ಗುದ್ದಿಕೊಂಡು ಹೋದ ಕಾರು: ವಿಡಿಯೋ

ಈಕೆ ಮನೆ ಮುಂದೆ ಬೀದಿ ನಾಯಿಗೆ ಆಹಾರ ನೀಡುತ್ತಿದ್ದಾಗ ಈ ಘಟನೆ ನಡೆದಿದೆ.  ಘಟನೆಯಿಂದ ಯವತಿಯ ತಲೆಗೆ ಗಂಭೀರ ಗಾಯವಾಗಿದ್ದು,  ಆಕೆಯ ತಲೆಯ ಎರಡು ಭಾಗಕ್ಕೂ ಸ್ಟಿಚ್ ಹಾಕಲಾಗಿದೆ ಎಂದು ತಿಳಿದು ಬಂದಿದೆ. ಪ್ರಸ್ತುತ ಆಕೆ ನಮ್ಮೊಂದಿಗೆ ಮಾತನಾಡಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ಕುಟುಂಬದವರು ತಿಳಿಸಿದ್ದರು. ಕುಟುಂಬದವರ ಪ್ರಕಾರ,  ಶನಿವಾರ ರಾತ್ರಿ ಈ ಘಟನೆ ನಡೆದಿದೆ.  

ಇದನ್ನೂ ಓದಿ: ಆಹಾರ ಪೂರೈಕೆಗೆ ಹೋದಾಗ ಮೈ ಮೇಲೆ ಹಾರಿದ ನಾಯಿ: ಕಟ್ಟಡದಿಂದ ಹಾರಿದ ಸ್ವಿಗ್ಗಿ ಬಾಯ್

Follow Us:
Download App:
  • android
  • ios