Chikkamagaluru: ನಗರಸಭೆ ಅಧ್ಯಕ್ಷ ಹಾಗೂ ಆಯುಕ್ತರ ವಿರುದ್ಧ ಜಾತಿ ನಿಂದನೆ ಆರೋಪ: ಎಫ್ಐಆರ್ ದಾಖಲು

ನಗರಸಭೆ ಚುನಾವಣೆ ನಡೆದು ಅಧ್ಯಕ್ಷರ ಆಯ್ಕೆಯ ಸಂದರ್ಭದಲ್ಲಿ ಬಿಜೆಪಿಗೆ ಬೇಷರತ್ತು ಬೆಂಬಲ ಘೋಷಿಸಿ ಒಂದೇ ವೇದಿಕೆ ಹಂಚಿಕೊಂಡಿದ್ದ ಜೆಡಿಎಸ್‌ನ ಇಬ್ಬರು ಸದಸ್ಯರು ಇದೀಗ ಆಡಳಿತಾರೂಢ ಬಿಜೆಪಿ ಪಕ್ಷದ ಅಧ್ಯಕ್ಷರು, ಆಯುಕ್ತರ ವಿರುದ್ಧ ಸೆಣಸಾಟಕ್ಕೆ ಆಖಾಡಕ್ಕಿಳಿದ್ದಾರೆ.

an fir has been lodged against chikkamagaluru municipal council chairman and commissioner gvd

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಮೇ.22): ನಗರಸಭೆ ಚುನಾವಣೆ ನಡೆದು ಅಧ್ಯಕ್ಷರ ಆಯ್ಕೆಯ ಸಂದರ್ಭದಲ್ಲಿ ಬಿಜೆಪಿಗೆ ಬೇಷರತ್ತು ಬೆಂಬಲ ಘೋಷಿಸಿ ಒಂದೇ ವೇದಿಕೆ ಹಂಚಿಕೊಂಡಿದ್ದ ಜೆಡಿಎಸ್‌ನ ಇಬ್ಬರು ಸದಸ್ಯರು ಇದೀಗ ಆಡಳಿತಾರೂಢ ಬಿಜೆಪಿ ಪಕ್ಷದ ಅಧ್ಯಕ್ಷರು, ಆಯುಕ್ತರ ವಿರುದ್ಧ ಸೆಣಸಾಟಕ್ಕೆ ಆಖಾಡಕ್ಕಿಳಿದ್ದಾರೆ. ಜಾತಿ ನಿಂದನೆ ಕಾಯ್ದೆ ಮೂಲಕ ನಗರಸಭೆ ಅಧ್ಯಕ್ಷರು, ಆಯುಕ್ತರು, ಸದಸ್ಯರ ನಡುವೆ ದೂರು ಪ್ರತಿದೂರು ದಾಖಲಾಗಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. 

ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರು ದಾಖಲು: ಮೊದಲಿನಿಂದಲೂ ಚಿಕ್ಕಮಗಳೂರು ನಗರಸಭೆಗಿದ್ದ ಆರೋಪ ದಲ್ಲಾಳಿಗಳ ದರ್ಬಾರ್ ಅನ್ನೋದು. ಆದರೆ ಅದನ್ನ ತಡೆಯೋಕೆ ಮಾಡಿದ ಪ್ಲಾನ್ ಮಾತ್ರ ಎಡವಟ್ಟಿಗೆ ಕಾರಣವಾಗಿದೆ. ದಲ್ಲಾಳಿಗಳನ್ನು ಬ್ರೇಕ್ ಹಾಕೋಕೆ ದ್ವಾರಪಾಲಕನ ನೇಮಕ ಮಾಡಲಾಗಿತ್ತು. ಆದ್ರೆ ದ್ವಾರಪಾಲಕ ಹಾಗೂ ನಗರಸಭೆಯ ಕೆಲ ಸದಸ್ಯರ ನಡುವಿನ ವಾಕ್ ಸಮರ ಎಲ್ಲೆಂದಿಲ್ಲೋ ಎಲ್ಲಿಗೋ ಹೋಗಿ ತಲುಪಿದಂತಾಗಿದೆ. ನಗರಸಭೆ ಅಧ್ಯಕ್ಷರು, ಆಯಕ್ತರು ದಲ್ಲಾಳಿಗಳ ನಿಯಂತ್ರಣಕ್ಕಾಗಿ ದ್ವಾರಪಾಲಕನನ್ನು ನೇಮಿಸಿದರು. 

Chikkamagaluru: ದತ್ತಪೀಠದಲ್ಲಿ ವಿವಾದದ ಮೇಲೆ ವಿವಾದ: ನಿಷೇಧ ಪ್ರದೇಶದಲ್ಲಿ ನಮಾಜ್!

ಅತ ನಗರಸಭ ಸದಸ್ಯರೊಬ್ಬರನ್ನು ತಡೆದರು. ಅದನ್ನು ಪ್ರಶ್ನಿಸಿಲು ಹೋಗಿದ್ವಿ. ನಂತರ ಸಿಎಂಸಿ ವಾಟ್ಸಾಪ್ ಗ್ರೂಪ್‌ನಿಂದ ಲೆಫ್ಟ್ ಮಾಡಿದ್ರು ಅಂತಾ ಕೇಳೋಕೆ ಹೋದಾಗ ನನ್ನ ಮೇಲೆ ಆವ್ಯಾಚ ಶಬ್ದ, ಜಾತಿ ನಿಂದನೆ ಮಾಡಿದ್ದಾರೆ ಅಂತಾ ಸದಸ್ಯ ಗೋಪಿ ಅರೋಪಿಸಿದರೆ ದಲ್ಲಾಳಿಗಳನ್ನು ತಡೆಯಲು ದ್ವಾರಪಾಲಕ ನೇಮಕ ಮಾಡಿದ್ವಿ. ಆಗ ಸದಸ್ಯ ಕುಮಾರ್ ಅನ್ನೋರು ದ್ವಾರಪಾಲಕನ ಕರ್ತವ್ಯಕ್ಕೆ ಅಡ್ಡಿಪಡಿಸಿದರು. ಅನ್ನೋದು ನಗರಸಭಾಧ್ಯಕ್ಷ ವರಸಿದ್ದ ವೇಣುಗೋಪಾಲ್ ಆರೋಪ.

ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸುವ ಹಂತಕ್ಕೆ: ನಗರಸಭೆ ಭದ್ರತಾ ಸಿಬ್ಬಂದಿಯಿಂದ ಹಕ್ಕುಚ್ಯುತಿಯಾಗಿದೆ ಎಂಬ ಕಾರಣಕ್ಕೆ ಜೆಡಿಎಸ್ ಸದಸ್ಯ ಕುಮಾರಗೌಡ ಆರಂಭಿಸಿದ ಪ್ರತಿಭಟನೆ ನಗರಸಭೆ ಅಧ್ಯಕ್ಷರು, ಆಯುಕ್ತರು, ಸದಸ್ಯರು, ನೌಕರರು ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸುವ ಹಂತಕ್ಕೆ ತಲುಪಿದೆ. ನಗರಸಭೆ ಚುನಾವಣೆ ನಡೆದು ಅಧ್ಯಕ್ಷರ ಆಯ್ಕೆಯ ಸಂದರ್ಭದಲ್ಲಿ ಬಿಜೆಪಿಗೆ ಬೇಷರತ್ತು ಬೆಂಬಲ ಘೋಷಿಸಿ ಒಂದೇ ವೇದಿಕೆ ಹಂಚಿಕೊಂಡಿದ್ದ ಜೆಡಿಎಸ್‌ನ ಇಬ್ಬರು ಸದಸ್ಯರು ಆಡಳಿತಾರೂಢ ಅಧ್ಯಕ್ಷರು, ಆಯುಕ್ತರ ವಿರುದ್ಧಸೆಣಸಾಟಕ್ಕೆ ಆಖಾಡಕ್ಕಿಳಿದ್ದಾರೆ.

ಸದಸ್ಯ ಕುಮಾರಗೌಡರನ್ನು ಕಛೇರಿಯೊಳಗೆ ಬಿಡಲು ನಿರ್ಬಂಧಿಸಿದ ಭದ್ರತಾ ಸಿಬ್ಬಂದಿಯ ಮೂಲಕ ಕುಮಾರಗೌಡರ ಮೇಲೆ ಜಾತಿ ನಿಂದನೆ ಪ್ರಕರಣ ದಾಖಲಿಸಿದರೆ ಅದಕ್ಕೆ ಪ್ರತಿಯಾಗಿ ಸದಸ್ಯ ಗೋಪಿ ನಗರಸಭೆ ಅಧ್ಯಕ್ಷರು ಮತ್ತು ಪೌರಾಯುಕ್ತರ ವಿರುದ್ಧ ಜಾತಿ ನಿಂದನೆ ದೂರು ದಾಖಲಿಸಿದ್ದಾರೆ. ನಗರದ ಅಭಿವೃದ್ಧಿಗೆ ಅಧ್ಯಕ್ಷರು, ಸದಸ್ಯರು, ಅಧಿಕಾರಿ ವರ್ಗ, ಸಿಬ್ಬಂದಿಗಳು ಎಲ್ಲರೂ ಒಗ್ಗೂಡಿ ಕಾರ್ಯನಿರ್ವಹಿಸಬೇಕಾದ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಜಾತಿ ನಿಂದನೆ ಕಾಯ್ದೆಯನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿರುವುದು ಸಾರ್ವಜನಿಕರ ನಡುವೆ ನಗೆಪಾಟಲಿಗೀಡಾಗಿದೆ.

Chikkamagaluru ರಸ್ತೆಗೆ ಬಂಡೆ ಹಾಕಿ ಬೀಗ ಜಡಿದಿದ್ದ ಪ್ರಕರಣ, ಸ್ಥಳಿಯರಿಂದ ಬಂಡೆ ತೆರವು

ನಗರಸಭಾ ಸದಸ್ಯ ಗೋಪಿ ಎಂಬುವವರಿಗೆ ನಗರಸಭಾಧ್ಯಕ್ಷ ವರಸಿದ್ದಿ ವೇಣುಗೋಪಾಲ್, ಅಯುಕ್ತ ಬಸವರಾಜು ಆವ್ಯಾಚ ಶಬ್ದದಿಂದ ನಿಂದಿಸಿ, ಜಾತಿ ನಿಂದನೆ ಮಾಡಿದ್ದಾರೆ ಅನ್ನೋ ಆರೋಪದಡಿಯಲ್ಲಿ ನಗರ ಠಾಣೆಯಲ್ಲಿ ಐಪಿಸಿ 506,504 ಹಾಗೂ ಎಸ್ಸಿ/ಎಸ್ಟಿ ಅಕ್ಟ್‌ನಲ್ಲಿ ಪ್ರಕರಣ ದಾಖಲಾಗಿದೆ. ಇನ್ನೂ ಪರಸ್ಪರ ಪ್ರಕರಣ ದಾಖಲಾಗಿದ್ದು. ಒಬ್ಬೊಬ್ಬರ ಆರೋಪ ಒಂದೊಂದು ರೀತಿ ಇದೆ. ಒಟ್ಟಾರೆ ದ್ವಾರಪಾಲಕನ ನೇಮಿಸಿದ ಕಿತ್ತಾಟ ನಗರಸಭೆಯ ಅವರಣದಿಂದ ನಗರಠಾಣೆಯ ಮೆಟ್ಟಿಲೇರಿದೆ. ಪರಸ್ಪರ ಕೇಸ್ ಬುಕ್ ಅಗಿದ್ದು ಎರಡು ಪ್ರಕರಣದ ತನಿಖೆಯನ್ನ ಒಬ್ಬರೇ ತನಿಖಾಧಿಕಾರಿ ನಡೆಸ್ತಾ ಇರೋದ್ರಿಂದ ಸತ್ಯಾಸತ್ಯತೇ ತನಿಖೆ ನಡೆಸ್ತೇವೆ ಅಂತಾರೇ ಪೊಲೀಸರು.

Latest Videos
Follow Us:
Download App:
  • android
  • ios