Chikkamagaluru ರಸ್ತೆಗೆ ಬಂಡೆ ಹಾಕಿ ಬೀಗ ಜಡಿದಿದ್ದ ಪ್ರಕರಣ, ಸ್ಥಳಿಯರಿಂದ ಬಂಡೆ ತೆರವು
ಶಾಸಕರೇ ಉದ್ಘಾಟಿಸಬೇಕೆಂದು ರಸ್ತೆಗೆ ಬಂಡೆ ಇಟ್ಟು ಬ್ಲಾಕ್
ರಸ್ತೆಯಲ್ಲಿ ಇದ್ದ ಬಂಡೆ ತೆರೆವುಗೊಳಿಸಿದ ಸ್ಥಳಿಯರು
ಬಂಡೆ ಹಾಕಿದ್ದ ಗ್ರಾಮಪಂಚಾಯಿತಿ ಸದಸ್ಯರು
ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನಲ್ಲಿ ಘಟನೆ
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣನ್ಯೂಸ್
ಚಿಕ್ಕಮಗಳೂರು (ಮೇ.20): ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು ಆದರೆ ಕಾಫಿನಾಡು ಚಿಕ್ಕಮಗಳೂರಿನ (Chikkamagaluru) ಕಳಸದಲ್ಲಿ ಈ ಪದ ಅನ್ವಯ ಆಗುವುದಿಲ್ಲ ಎನ್ನುವಂತೆ ಜನಪ್ರತಿನಿಧಿಗಳ ವರ್ತನೆ ಮಾಡಿದ್ದಾರೆ. ಸರ್ಕಾರದ ಅನುದಾನದಲ್ಲಿ ನೂತನವಾಗಿ ನಿರ್ಮಾಣವಾಗಿದ್ದ ರಸ್ತೆಗೆ ಸ್ಥಳೀಯ ಗ್ರಾಮ ಪಂಚಾಯತಿ ಸದಸ್ಯರು ಶಾಸಕರು ರಸ್ತೆಯನ್ನು ಉದ್ಘಾಟನೆ ಮಾಡಬೇಕೆಂದು ರಸ್ತೆಗೆ ಬೇಲಿ, ಬೆಂಡೆ ಹಾಕಿದ್ದರು. ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ನಲ್ಲಿ ನಿರಂತರವಾಗಿ ಸುದ್ದಿ ಪ್ರಸಾರವಾದ ಬಳಿಕ ಎಚ್ಚೇತುಗೊಂಡು ಅಧಿಕಾರಿಗಳು ಬೇಲಿ ತೆರೆವುಗೊಳಿಸಿ ಬಂಡೆಯನ್ನು ಹಾಗೆಯೇ ಬಿಟ್ಟಿದ್ದರು. ಇದರಿಂದ ಆಕ್ರೋಶಗೊಂಡ ಸ್ಥಳೀಯರೇ ತುಂತುರು ಮಳೆ ನಡುವೆ ಬಂಡೆಯನ್ನು ತೆರೆವುಗೊಳಿಸಿದ್ದಾರೆ.
ಸ್ಥಳೀಯರಿಂದ ಬಂಡೆ ತೆರೆವು ಕಾರ್ಯ : ರಸ್ತೆಯನ್ನ ಶಾಸಕರೇ ಉದ್ಘಾಟಿಸಬೇಕು. ಅಲ್ಲಿವರೆಗೂ ಸಂಚಾರಕ್ಕೆ ಅವಕಾಶವಿಲ್ಲ ಎಂದು ಶಾಸಕರ ಬೆಂಬಲಿಗರು ರಸ್ತೆಗೆ ಹಾಕಿದ್ದ ಬಂಡೆಯನ್ನ ಸ್ಥಳಿಯರು ತೆರವುಗೊಳಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಂಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಮಾವಿನಹೊಲ ಗ್ರಾಮದ ಬಳಿ ಸುಮಾರು ಮೂರು ಕೋಟಿ ಮೌಲ್ಯದ ಕಾಂಕ್ರೀಟ್ ರಸ್ತೆ ಕಾಮಗಾರಿ ಪೂರ್ಣಗೊಂಡು ತಿಂಗಳೇ ಕಳೆದಿತ್ತು. ಆದರೆ, ಸ್ಥಳಿಯ ಗ್ರಾಮ ಪಂಚಾಯಿತಿ ಬಿಜೆಪಿ ಸದಸ್ಯರು ಶಾಸಕರೇ ಬಂದು ಉದ್ಘಾಟನೆ ಮಾಡಬೇಕು. ಅಲ್ಲಿವರೆಗೂ ಸಂಚಾರಕ್ಕೆ ಅವಕಾಶವಿಲ್ಲ ಎಂದು ರಸ್ತೆಗೆ ಬೇಲಿ ಹಾಕಿ, ಬಂಡೆ ಕಲ್ಲುಗಳನ್ನಿಟ್ಟು, ಬ್ಯಾರೀಕೇಡ್ ಜೋಡಿಸಿ ಬೀಗ ಹಾಕಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದರು.
ಪಠ್ಯದಿಂದ ಭಗತ್ ಸಿಂಗ್ NARAYANA GURU ಹೊರಗಿಟ್ಟಿರುವುದಕ್ಕೆ ಡಿಕೆಶಿ ಖಂಡನೆ
ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ನಲ್ಲಿ ಸವಿಸ್ತಾರವಾಗಿ ಸುದ್ದಿ ಮಾಡಿತ್ತು. ಸ್ಥಳಿಯರು ಸರ್ಕಾರದ ವಿರುದ್ಧ ಅಸಾಮಾಧಾನ ಹೊರಹಾಕಿದ್ದರು. ಆರು ಕಿ.ಮೀ. ದೂರವನ್ನ ಸುಮಾರು 15-20 ಕಿ.ಮೀ. ಸುತ್ತಿಕೊಂಡು ಬರಬೇಕಿತ್ತು. ರಸ್ತೆಗೆ ಬೀಗ ಹಾಕಿದ್ದರಿಂದ ಎರಡು ಕಿ.ಮೀ. ದೂರದ ಮದುವೆ ಮನೆಯವರು ಮದುವೆ ಸಾಮಾಗ್ರಿಗಳನ್ನ ಹೊತ್ತುಕೊಂಡೇ ಹೋಗಿದ್ದರು. ರೋಗಿಗಳನ್ನ ಆಸ್ಪತ್ರೆಗೆ ಕರೆದೊಯ್ಯಲು ಸಹ ಜನ ತೀವ್ರ ಸಂಕಷ್ಟ ಪಡುತ್ತಿದ್ದರು. ಸಾಲದಕ್ಕೆ ಕಳೆದ ನಾಲ್ಕೈದು ದಿನಗಳಿಂದ ಪಶ್ಚಿಮಘಟ್ಟಗಳ ಸಾಲು ಹಾಗೂ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಮಗ್ಗಲಿನ ಕಳಸ ಭಾಗದಲ್ಲಿ ಭಾರೀ ಮಳೆ ಸುರಿಯುತ್ತಿದೆ. ಹಾಗಾಗಿ, ಜನಸಾಮಾನ್ಯರು ತೀವ್ರ ಸಂಕಷ್ಟ ಎದುರಿಸುತ್ತಿದ್ದರು.
ಈ ಮಾರ್ಗ ಬಹುಪಯೋಗಿ ಮಾರ್ಗವಾಗಿದ್ದು ಈ ರಸ್ತೆಯ ಮೇಲೆ ಸ್ಥಳೀಯರು, ಪ್ರವಾಸಿಗರು ಅವಲಂಬಿತರಾಗಿದ್ದಾರೆ. ಈ ಮಾರ್ಗ ಬಸರೀಕಟ್ಟೆ ಹಾಗೂ ಬಾಳೆಹೊನ್ನೂರಿಗೂ ಸಂಪರ್ಕ ಕಲ್ಪಿಸಿದೆ. ಈ ಮಾರ್ಗ ಸುಮಾರು 10ಕ್ಕೂ ಹೆಚ್ಚು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಮಾರ್ಗವಾಗಿದೆ. ಈ ಮಾರ್ಗದಿಂದ ಶಾರ್ಟ್ ಕಟ್ ಎಂದು ಪ್ರವಾಸಿಗರು ಹೆಚ್ಚಾಗಿ ಓಡಾಡುತ್ತಾರೆ. ಹೊರನಾಡು ಅನ್ನಪೂರ್ಣೇಶ್ವರಿ ದೇಗುಲಕ್ಕೂ ಈ ಮಾರ್ಗ ಹತ್ತಿರದ ದಾರಿಯಾಗಿದೆ. ಆದರೆ, ನಿರ್ಮಾಣವಾಗಿ ಸಂಚಾರಕ್ಕೆ ರೆಡಿಯಾಗಿರುವ ಈ ರಸ್ತೆ ಉದ್ಘಾಟನೆಗೆ ಮೂಡಿಗೆರೆ ಶಾಸಕ ಕುಮಾರಸ್ವಾಮಿಯೇ ಬರಬೇಕು ಎಂದು ಪಟ್ಟು ಹಿಡಿದಿದ್ದರು.
15 ತಿಂಗಳಾದ್ರೂ ಫಲಿತಾಂಶವಿಲ್ಲ, ವಯಸ್ಸು ಮೀರುವ ಆತಂಕದಲ್ಲಿ ಕೆಎಎಸ್ ಆಕಾಂಕ್ಷಿಗಳು!
ಅಧಿಕಾರಿಗಳಿಂದ ಬೇಲಿ ತೆರವು, ಸ್ಥಳೀಯರಿಂದ ಬಂಡೆ ತೆರೆವು: ಇದೇ ತಿಂಗಳು 17 ರಂದು ಏಷ್ಯಾನೆಟ್ ಸುವರ್ಣ ನ್ಯೂಸ್ ನಲ್ಲಿ ಸುದ್ದಿ ಪ್ರಸಾರವಾದ ತಕ್ಷಣ ಎಚ್ಚೇತಗೊಂಡ ಅಧಿಕಾರಿಗಳು ರಸ್ತೆಗೆ ಹಾಕಿದ್ದ ಬ್ಯಾರಿಕೇಟ್ ,ಬೇಲಿಯನ್ನು ತೆರವುಗಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರು. ಆದರೆ ಬಂಡೆಯನ್ನು ಮಳೆಯ ಕಾರಣ ತೆರವು ಮಾಡದೇ ಆಗಿಬಿಟ್ಟಿದ್ದರು. ನಿನ್ನೆ ಸಂಜೆ ರಸ್ತೆಗೆ ಅಡ್ಡಲಾಗಿ ಇಟ್ಟಿದ್ದ ಬಂಡೆಯನ್ನ ರಸ್ತೆಯ ಮತ್ತೊಂದು ಬದಿಗೆ ಉರುಳಿಸಿ ತಮ್ಮ ದಾರಿಯನ್ನ ತಾವೇ ನಿರ್ಮಿಸಿಕೊಂಡಿದ್ದಾರೆ. ಬಿಜೆಪಿ ಸದಸ್ಯರ ವರ್ತನೆಗೆ ತಾಲೂಕು ಕಾಂಗ್ರೆಸ್ ಹಾಗೂ ಜೆಡಿಎಸ್ ಘಟಕ ಕೂಡ ಅಸಮಾಧಾನ ಹೊರಹಾಕಿ, ರಸ್ತೆ ದುರಸ್ತಿಗೆ ಹಣ ಕೊಟ್ಟವರು ಯಾರೆಂದು ಪ್ರಶ್ನಿಸಿದ್ದರು.