Asianet Suvarna News Asianet Suvarna News

ಹಾಸ್ಟೆಲ್‌ ವಿದ್ಯಾರ್ಥಿನಿ ಬಾತ್ರೂಮ್ ವಿಡಿಯೋ ರೆಕಾರ್ಡ್: IIT ಬಾಂಬೆ ಕ್ಯಾಂಟೀನ್ ಸಿಬ್ಬಂದಿ ಅರೆಸ್ಟ್‌

Crime News: ಹಾಸ್ಟೆಲ್‌ನ ಬಾತ್‌ರೂಮಿನಿಂದ ವಿದ್ಯಾರ್ಥಿನಿಯರ ವೀಡಿಯೊಗಳನ್ನು ರೆಕಾರ್ಡ್ ಮಾಡಿದ ಆರೋಪದ ಮೇಲೆ ಐಐಟಿ ಬಾಂಬೆಯ ಕ್ಯಾಂಟೀನ್ ಸಿಬ್ಬಂದಿಯನ್ನು ಬಂಧಿಸಲಾಗಿದೆ

IIT Bombay Canteen worker arrested for recording videos of girl students from hostel bathroom mnj
Author
First Published Sep 20, 2022, 6:06 PM IST

ಮುಂಬೈ (ಸೆ. 20): ಹಾಸ್ಟೆಲ್‌ನ ಬಾತ್‌ರೂಮಿನಿಂದ ವಿದ್ಯಾರ್ಥಿನಿಯರ ವೀಡಿಯೊಗಳನ್ನು ರೆಕಾರ್ಡ್ ಮಾಡಿದ ಆರೋಪದ ಮೇಲೆ ಐಐಟಿ ಬಾಂಬೆಯ (IIT Bombay) ಕ್ಯಾಂಟೀನ್ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 354 ಸಿ ಪ್ರಕರಣ ದಾಖಲಾಗಿದೆ.  ಬಾತ್‌ರೂಮಿನಲ್ಲಿ ಯಾರೋ ರೆಕಾರ್ಡ್ ಮಾಡುತ್ತಿರುವುದನ್ನು ಗಮನಿಸಿದ ವಿದ್ಯಾರ್ಥಿನಿಯೊಬ್ಬಳು ಈ ಬಗ್ಗೆ ತಿಳಿಸಿದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಆರೋಪಿ H10 ನಲ್ಲಿನ ಸ್ನಾನಗೃಹವೊಂದರಲ್ಲಿ ಕಿಟಕಿಯಲ್ಲಿದ್ದ ಗ್ಯಾಪ್‌ ಮೂಲಕ ವೀಡಿಯೊವನ್ನು ರೆಕಾರ್ಡ್ ಮಾಡಿದ್ದಾನೆ.

ಈ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಐಐಟಿ ಬಾಂಬೆ "ಹಾಸ್ಟೆಲ್ ನೈಟ್ ಕ್ಯಾಂಟೀನ್‌ನ ಉದ್ಯೋಗಿಯೊಬ್ಬ ಮಹಿಳಾ ಹಾಸ್ಟೆಲ್‌ನ ವಿದ್ಯಾರ್ಥಿಗಳ ಖಾಸಗಿತನಕ್ಕೆ ಧಕ್ಕೆ ತರುವ ಪ್ರಯತ್ನ ಮಾಡಿದ್ದಾನೆ,  ಕ್ಯಾಂಟೀನ್ ಕೆಲಸಗಾರ ಪೈಪ್ ಡಕ್ಟ್ ಹತ್ತಿ ವಿಡಿಯೋ ರೆಕಾರ್ಡ್ ಮಾಡಲು ಯತ್ನಿಸಿದ್ದಾನೆ.  ಅಪರಾಧಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ" ಎಂದು ತಿಳಿಸಿದೆ.

ಮುಂಬೈ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಇದರಲ್ಲಿ ಸೈಬರ್ ತನಿಖೆಯೂ ನಡೆಸಲಾಗುತ್ತಿದೆ ಎಂದು ಐಐಟಿ ಬಾಂಬೆ ಹೇಳಿಕೆಯಲ್ಲಿ ತಿಳಿಸಿದೆ. ಆರಂಭಿಕ ವರದಿಯ ಪ್ರಕಾರ, ಅಪರಾಧಿಯಿಂದ ವಶಪಡಿಸಿಕೊಂಡ ಫೋನ್‌ನಿಂದ ಯಾವುದೇ ದೃಶ್ಯಗಳನ್ನು ಹಂಚಿಕೊಂಡಿದ್ದರ ಬಗ್ಗೆ  ಸಂಸ್ಥೆಗೆ ತಿಳಿದಿಲ್ಲ ಎಂದು ಅದು ಹೇಳಿದೆ. 

ಸದ್ಯ ಕ್ಯಾಂಟೀನನ್ನು ಮುಚ್ಚಲಾಗಿದ್ದು, ಶೀಘ್ರದಲ್ಲೇ ಅದನ್ನು ತೆರೆಯುತ್ತೇವೆ, ಆದರೆ ಕ್ಯಾಂಟಿನಲ್ಲಿ  ಮಹಿಳಾ ಸಿಬ್ಬಂದಿ ಮಾತ್ರ ಕಾರ್ಯನಿರ್ವಹಿಸಲಿದ್ದಾರೆ ಎಂದು ಎಂಜಿನಿಯರಿಂಗ್ ಕಾಲೇಜು ತಿಳಿಸಿದೆ.

ಹಾಸ್ಟೆಲ್‌ ವಿದ್ಯಾರ್ಥಿನಿಯರ ನಗ್ನ ವಿಡಿಯೋ ಲೀಕ್‌ ಪ್ರಕರಣ: ಬೆಳಕಿಗೆ ಬಂತು ಶಾಕಿಂಗ್‌ ಸತ್ಯ

"ಆರೋಪಿ ಬಳಸಿರುವ ಕೊಳವೆಗಳಲ್ಲಿನ ಡಕ್ಟ್‌ಗಳನ್ನು ಮುಚ್ಚಲಾಗಿದೆ. ನಾವು ಹಾಸ್ಟೇಲಿನ ಭದ್ರತೆ ಹೆಚ್ಚಿಸಲು ಯಾವೆಲ್ಲ ಕ್ರಮಗಳನ್ನು ತೆಗೆದುಕೊಳ್ಳಬಹುದೆಂದು ವಿದ್ಯಾರ್ಥಿಗಳೊಂದಿಗೆ ಚರ್ಚಿಸುತ್ತಿದ್ದೇವೆ" ಎಂದು ಐಐಟಿ ಬಾಂಬೆ ಹೇಳಿಕೆಯಲ್ಲಿ ಉಲ್ಲೇಖಿಸಿದೆ. 

ಐಐಟಿ ಬಾಂಬೆ ತನ್ನ ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಭದ್ರತೆಯ ಭರವಸೆ ನೀಡಿದ್ದು "ಐಐಟಿ ಬಾಂಬೆ ತನ್ನ ವಿದ್ಯಾರ್ಥಿಗಳೊಂದಿಗೆ ನಿಂತಿದೆ ಮತ್ತು ನಮ್ಮ ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ನಾವು ಬದ್ದರಾಗಿದ್ದೇವೆ"ಎಂದು ತಿಳಿಸಿದೆ

Follow Us:
Download App:
  • android
  • ios