Asianet Suvarna News Asianet Suvarna News

Tumakuru: ಹಫ್ತಾ ವಸೂಲಿ ಆರೋಪ : ಪುಂಡರಿಂದ ವ್ಯಾಪಾರಿ ಮೇಲೆ ಹಲ್ಲೆ

ಹಫ್ತಾ ವಸೂಲಿ ಆಗಮಿಸಿದ್ದ ಪುಂಡರು ಹಣ್ಣಿನ ಅಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ತುಮಕೂರಿನಲ್ಲಿ ವರದಿಯಾಗಿದೆ.

Allegation of hafta collection Attack on Tumakur trader sat
Author
First Published Feb 8, 2023, 6:25 PM IST

ವರದಿ : ಮಹಂತೇಶ್ ಕುಮಾರ್, ಏಷ್ಯನೆಟ್ ಸುವರ್ಣ ನ್ಯೂಸ್
ತುಮಕೂರು (ಫೆ.08): ಹಫ್ತಾ ವಸೂಲಿ ಆಗಮಿಸಿದ್ದ ಪುಂಡರು ಹಣ್ಣಿನ ಅಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ ಹಲ್ಲೆಯ ದೃಶ್ಯ ಸಹ ಸ್ಥಳೀಯರು ಮೊಬೈಲ್ ನಲ್ಲಿ ಸೆರೆಹಿಡಿದಿದ್ದು ಸದ್ಯ ಪುಂಡರು ಹಲ್ಲೆ ಮಾಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ತುಮಕೂರು ನಗರದ ಸದಾಶಿವನಗರದಿಂದ ಇಸ್ಮಾಯಿಲ್ ನಗರಕ್ಕೆ ತೆರಳುವ ರಸ್ತೆಯಲ್ಲಿ ಹಾಡುವಾಗಲೇ ಯುವಕರು ಹಣ ವಸೂಲಿಗಾಗಿ ತೆರಳಿ ಹಣ ನೀಡಲು ನಿರಾಕರಿಸಿದ ಹಣ್ಣಿನ ಅಂಗಡಿ ಕಾರ್ಮಿಕನ ಮೇಲೆ ಹಲ್ಲೆ ಮಾಡಿರುವ ಆರೋಪವನ್ನ ಸ್ಥಳೀಯ ವರ್ತಕರು ಮಾಡಿದ್ದಾರೆ . ಇನ್ನು ಘಟನೆಯಲ್ಲೇ ಗಾಯಗೊಂಡಿರುವ ಯುವಕ ಸುಲ್ತಾನ್ ಘಟನೆಯ ಬಗ್ಗೆ ಮಾಹಿತಿ ನೀಡಿದ್ದು ವ್ಯಾಪಾರ ನಡೆಸುತ್ತಿದ್ದ ವೇಳೆ ಅಂಗಡಿಗೆ ಆಗಮಿಸಿದ ಯುವಕರು ಸೋಮವಾರ ಸಂಜೆ ಹಣ ನೀಡುವಂತೆ ಒತ್ತಾಯಿಸಿದ್ದು ತನ್ನ ಮೇಲೆ ಏಕಾಏಕಿ ಹಲ್ಲೇ ನಡೆಸಿದ್ದಾರೆ ಹಾಗಾಗಿ ಇಂತಹ ಪುಂಡರ ಮೇಲೆ ಸಂಬಂಧ ಪಟ್ಟ ಇಲಾಖೆಗಳು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. 

ಸ್ಲಮ್‌ ಜನರ ಅಭಿವೃದ್ಧಿಗೆ ಬಜೆಟ್‌ನಲ್ಲಿ 2 ಸಾವಿರ ಕೋಟಿಗೆ ಮನವಿ

ಮೈ ಜುಂ ಎನಿಸುವ ಅಪಘಾತ- ದೃಶ್ಯಾವಳಿ ಸಿಸಿ ಟಿವಿಯಲ್ಲಿ ಸೆರೆ: ತುಮಕೂರು (ಫೆ.08): ಎರಡು ಪ್ರತ್ಯೇಕ ಭೀಕರ ಅಪಘಾತದಲ್ಲಿ ಐವರು ಆಶ್ಚರ್ಯಕರ ರೀತಿಯಲ್ಲಿ ಪ್ರಾಣಪಾಯದಿಂದ ಪಾರಾದ ಘಟನೆ ಕುಣಿಗಲ್ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75 ಅಂಚೇಪಾಳ್ಯ ಸಮೀಪ ನಡೆದಿದೆ.ಈ ಎರಡೂ ಅಪಘಾತ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು ಮೈ ಜುಂ ಎನಿಸುವಂತಿದೆ. 

ಮೊದಲ ಪ್ರಕರಣದಲ್ಲಿ  ಮನು ಎಂಬ ಯುವಕ ಕೆಲಸದ ನಿಮತ ಬೈಕ್‌ನಲ್ಲಿ ಅಂಚೇಪಾಳ್ಯಕ್ಕೆ ಬಂದು ಹೋಟೆಲ್ ಮುಂಭಾದದ ರಸ್ತೆ ಬದಿಯಲ್ಲಿ ಬೈಕ್ ಮೇಲೆ ಕುಳಿತುಕೊಂಡಿದ್ದ. ಈ ವೇಳೆ ಹಾಸನ ಕಡೆಯಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಕ್ಯಾಂಟರ್ ಚಾಲಕನ ನಿಯಂತ್ರಣ ತಪ್ಪಿ ಏಕಾಏಕಿ ರಸ್ತೆಯ ಎಡ ಬದಿಗೆ  ಅತಿ ವೇಗವಾಗಿ ನುಗ್ಗಿತು, ಇದನ್ನು ಗಮನಿಸಿದ ಮನು ಕ್ಷರ್ಣಾದದಲ್ಲಿ ಬೈಕ್  ಬಿಟ್ಟು ಓಡಿ ಹೋಗಿದ್ದಾನೆ. ಕ್ಯಾಂಟರ್ ಬೈಕ್ ಮೇಲೆ ಹರಿದು ಬೈಕ್ ಸಂಪೂರ್ಣ ನಜ್ಜು ನುಜ್ಜಾಯಿತು, ಮನು ಎಚ್ಚರಗೊಳ್ಳದಿದ್ದಲ್ಲಿ ಆತನ ಸಾವು ಕಟ್ಟಿಟ್ಟ ಬುತ್ತಿಯಾಗಿತ್ತು, ಕ್ಷಣಾರ್ಧಲ್ಲಿ ಪ್ರಾಣಪಾಯದಿಂದ ಪಾರಾಗಿದ್ದಾನೆ.

ಹೆಚ್‌ಎಎಲ್ ಹೆಲಿಕಾಪ್ಟರ್ ಘಟಕದ ಬಗ್ಗೆ ನಿಮಗೆಷ್ಟು ಗೊತ್ತು?: ಇಲ್ಲಿದೆ ಇಂಟ್ರೆಸ್ಟಿಂಗ್ ಸೀಕ್ರೆಟ್ಸ್

ಇನ್ನೋವಾ ಕಾರು ಪಲ್ಟಿ: ಮತ್ತೋಂದು ಘಟನೆಯಲ್ಲಿ ಬೆಂಗಳೂರಿನಿಂದ ಕುಣಿಗಲ್ ತಾಲೂಕಿನ ಅಮೃತೂರಿಗೆ ಹೋಗುತಿದ್ದ ಇನ್ನೋವಾ ಕಾರು ಪಲ್ಟಿಯಾಗಿದೆ. ರಸ್ತೆ ಮೇಲಿನ ಹಂಪ್ಸ್ ಅರಿಯೇ ಚಾಲಕ ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ ಇನ್ನೋವಾ ಕಾರು ಹೊಟೆಲ್ ಮುಂದೆ ನಿಂತಿದ್ದ ಸ್ಕಾರ್ಪಿಯೋಗೆ ಡಿಕ್ಕಿ ಹೊಡೆದು ಪಲ್ಟಿಹೊಡೆದಿದೆ. ಕಾರಿನಲ್ಲಿದ್ದ ನಾಲ್ವರು ಅದೃಷ್ಟವಶಾತ್ ಬಚಾವ್ ಆಗಿದ್ದಾರೆ. ಈ ದೃಶ್ಯ ಕೂಡ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

Follow Us:
Download App:
  • android
  • ios