Asianet Suvarna News Asianet Suvarna News

ಗುದದ್ವಾರದಲ್ಲಿ ಕೋಟಿ ಕೋಟಿ ಮೌಲ್ಯದ ಚಿನ್ನ ಬಚ್ಚಿಟ್ಟುಕೊಂಡಿದ್ದ ದಂಪತಿ: ವಿಮಾನ ನಿಲ್ದಾಣದಲ್ಲಿ ಸೆರೆ

ಸೌದಿ ಅರೇಬಿಯಾದ ಜೆಡ್ಡಾದಿಂದ 1.3 ಕೋಟಿ ರೂಪಾಯಿ ಮೌಲ್ಯದ 2.6 ಕೆಜಿ ಚಿನ್ನವನ್ನು ಕಳ್ಳಸಾಗಣೆ ಮಾಡುತ್ತಿದ್ದ ಮೀರಾ ರೋಡ್ ದಂಪತಿಯನ್ನು ಕಸ್ಟಮ್ಸ್ ಅಧಿಕಾರಿಗಳು ಗುರುವಾರ ಬಂಧಿಸಿದ್ದಾರೆ.

mumbai couple hide rs 1 3 crore gold in rectum held at airport ash
Author
First Published Jan 20, 2024, 3:24 PM IST

ಮುಂಬೈ (ಜನವರಿ 20, 2024): ಅಕ್ರಮವಾಗಿ ಚಿನ್ನ ಸಾಗಿಸುವ ಪ್ರಕರಣಗಳು ಆಗಾಗ್ಗೆ ವರದಿಯಾಗುತ್ತಲೇ ಇರುತ್ತದೆ. ಅದರಲ್ಲೂ, ಏರ್‌ಪೋರ್ಟ್‌ನಲ್ಲಿ ಇಂತಹ ಹೆಚ್ಚಿನ ಪ್ರಕರಣಗಳು ಬೆಳಕಿಗೆ ಬರುತ್ತಿರುತ್ತದೆ. ಇದೇ ರೀತಿ, ದೇಶದ ವಾಣಿಜ್ಯ ರಾಜಧಾನಿ ಮುಂಬೈ ಏರ್‌ಪೋರ್ಟ್‌ನಲ್ಲಿ ಇಂತದ್ದೊಂದು ಪ್ರಕರಣ ಇತ್ತೀಚೆಗೆ ಮತ್ತೆ ವರದಿಯಾಗಿದೆ.

ಸೌದಿ ಅರೇಬಿಯಾದ ಜೆಡ್ಡಾದಿಂದ 1.3 ಕೋಟಿ ರೂಪಾಯಿ ಮೌಲ್ಯದ 2.6 ಕೆಜಿ ಚಿನ್ನವನ್ನು ಕಳ್ಳಸಾಗಣೆ ಮಾಡುತ್ತಿದ್ದ ಮೀರಾ ರೋಡ್ ದಂಪತಿಯನ್ನು ಕಸ್ಟಮ್ಸ್ ಅಧಿಕಾರಿಗಳು ಗುರುವಾರ ಬಂಧಿಸಿದ್ದಾರೆ. ಜಬಿನಾ ಮೊಯಿಜ್ ಆದನವಾಲಾ (49) ಮತ್ತು ಮೊಯಿಜ್ ಆದನ್‌ವಾಲಾ (53) ಎಂಬ ದಂಪತಿ ಬಗ್ಗೆ ಯಾರೋ ಸುಳಿವು ನೀಡಿದ ಕಾರಣ ಭದ್ರತಾ ತಪಾಸಣೆ ವೇಳೆ ಗ್ರೀನ್‌ ಚಾನಲ್ ದಾಟುತ್ತಿದ್ದಾಗ ದಂಪತಿಯನ್ನು ತಡೆಯಲಾಗಿದೆ ಎಂದು ತಿಳಿದುಬಂದಿದೆ.

ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಸ್ಕೂಟಿಯಲ್ಲಿ ಕೈದಿಯನ್ನು ಕರೆದೊಯ್ದ ಪತ್ನಿ!

ಈ ವೇಳೆ, ಕಸ್ಟಮ್ಸ್ ಅಧಿಕಾರಿಗಳು ಅವರನ್ನು ಬಂಧಿಸಿದರು ಮತ್ತು ಅವರ ಗುದದ್ವಾರದೊಳಗೆ ಅಡಗಿಸಿಟ್ಟಿದ್ದ 4 ಅಂಡಾಕಾರದ ಕ್ಯಾಪ್ಸೂಲ್‌ಗಳನ್ನು ವಶಪಡಿಸಿಕೊಂಡರು. ಕ್ಯಾಪ್ಸೂಲ್‌ಗಳು 24 ಕ್ಯಾರಟ್‌ ಚಿನ್ನವನ್ನು ಹೊಂದಿದ್ದು, ಒಟ್ಟು 2.6 ಕೆಜಿ ತೂಕವಿತ್ತು ಎಂದೂ ವರದಿಯಾಗಿದೆ.

ಇನ್ನು, ಆ ಚಿನ್ನ ತಮ್ಮದಲ್ಲ. ಅದು ಬೇರೆಯವರದ್ದು ಎಂದು ದಂಪತಿ ವಿಚಾರಣೆ ವೇಳೆ ತಿಳಿಸಿದ್ದಾರೆ ಎಂದೂ ಹೇಳಲಾಗಿದೆ. ಅಲ್ಲದೆ, ತಾವು 25,000 ರೂ. ಹಣಕ್ಕಾಗಿ ಈ ಕೆಲಸ ಮಾಡಿದ್ದೇವೆ ಎಂದೂ ದಂಪತಿ ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಸಚಿವ ರಾಮಲಿಂಗಾ ರೆಡ್ಡಿ ಹೆಸರಿನಲ್ಲಿ ಮೇಲ್ ಐಡಿ ಸೃಷ್ಟಿಸಿ ಲಕ್ಷಾಂತರ ರೂ. ಹಣಕ್ಕೆ ಬೇಡಿಕೆ: ಸೈಬರ್ ಠಾಣೆಗೆ ದೂರು

ಇದೇ ರೀತಿ, ನಾನಾ ಪ್ರಕರಣಗಳು ಆಗಾಗ್ಗೆ ವರದಿಯಾಗುತ್ತಲೇ ಇರುತ್ತದೆ. ಬೆಂಗಳೂರಿನಲ್ಲಿ ಇತ್ತೀಚೆಗೆ ಪ್ರಭಾಕರ ಲೇಔಟ್‌ನಲ್ಲಿ ನಡೆದ ಪೇಟಿಂಗ್ ಗುತ್ತಿಗೆದಾರನ ಪತ್ನಿಯ ಕೊಲೆ ಮಾಡಿದ ಆರೋಪಿಯನ್ನು ಎಲೆಕ್ಟ್ರಾನಿಕ್‌ ಸಿಟಿ ಠಾಣೆ ಪೊಲೀಸರು ಬಂಧಿಸಿದ್ದು, ಪರಿಚಿತ ವ್ಯಕ್ತಿಯೇ ಹಣ, ಚಿನ್ನಾಭರಣಕ್ಕೆ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.

ಜನವರಿ 4 ರಂದು ಪೆಂಟಿಂಗ್ ಗುತ್ತಿಗೆದಾರ ಪ್ರದ್ಯುಮ್ನ ಎಂಬುವರ ಪತ್ನಿ ನೀಲು ಅವರನ್ನು ಕೊಲೆ ಮಾಡಲಾಗಿತ್ತು. ಮನೆಗೆ ಬಂದು ಹಸಿವು ಎಂದ ಹಂತಕನಿಗೆ ಅನ್ನವಿಕ್ಕಲು ಹೋದ ವೇಳೆ ಆರೋಪಿ ಆಕೆಯನ್ನು ಕೊಲೆ ಮಾಡಿದ್ದಾನೆ. ಆರೋಪಿ ದೊಡ್ಡ ನಾಗಮಂಗಲದ ನಿವಾಸಿ ರಜನೀಶ್ ಕುಮಾರ್‌ನಿಂದ ದೋಚಿದ್ದ ಚಿನ್ನದ ಒಲೆಗಳು ಹಾಗೂ ಹಣ ಜಪ್ತಿ ಮಾಡಲಾಗಿದೆ. ಪ್ರಕರಣದ ತನಿಖೆಗಿಳಿದ ಇನ್‌ಸ್ಪೆಕ್ಟರ್ ಜಿ.ಆರ್. ನವೀನ್ ನೇತೃತ್ವದ ತಂಡ, ತಾಂತ್ರಿಕ ಮಾಹಿತಿ ಆಧರಿಸಿ ಹಂತಕನನ್ನು ಬಂಧಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Follow Us:
Download App:
  • android
  • ios