ಭೂಗತ ಪಾತಕಿ ಚೋಟಾ ರಾಜನ್ ಸಾವಿನ ಬಗ್ಗೆ ಏಮ್ಸ್ ಸ್ಪಷ್ಟನೆ

ಚೋಟಾ ರಾಜನ್ ಬಲಿ ಪಡೆದುಕೊಂಡ  ಕೊರೋನಾ/ ಚೋಟಾ ಸಾವಿನ ಬಗ್ಗೆ ನಿಖರ ಮಾಹಿತಿ ನೀಡದ ಏಮ್ಸ್ ಆಸ್ಪತ್ರೆ/ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಗ್ಯಾಂಗ್ ಸ್ಟರ್/ ಕೊರೋನಾ ಕಾರಣಕ್ಕೆ ಏಮ್ಸ್ ಗೆ ದಾಖಲಾಗಿದ್ದ ವರದಿ 

AIIMS Officials Delhi Police Deny Chhota Rajan Has Died Of Covid  mah

ನವದೆಹಲಿ(ಮೇ 07) ಭೂಗತ ಪಾತಕಿ ಚೋಟಾ ರಾಜನ್(61() ಕೊರೋನಾಕ್ಕೆ ಬಲಿಯಾಗಿದ್ದಾನೆ. ಅದೆಷ್ಟೋ ಬಲಿಗಳನ್ನು ಪಡೆದಿದ್ದ ಗ್ಯಾಂಗ್ ಸ್ಟರ್ ಪ್ರಾಣವನ್ನು ಕೊರೋನಾ ತನ್ನ ತೆಕ್ಕೆಗೆ ತೆಗೆದುಕೊಂಡಿದೆ  ಎಂಬ ವರದಿಗಳು ಬಂದಿವೆ. ಆದರೆ ದೆಹಲಿ ಏಮ್ಸ್ ಆಸ್ಪತ್ರೆ ಮೂಲಗಳು ಮತ್ತು ಪೊಲೀಸರು ಸುದ್ದಿಯನ್ನು ತಳ್ಳಿಹಾಕಿದ್ದಾರೆ.

ಕೊರೋನಾ ಸೋಂಕಿತನಾಗಿದ್ದ ಚೋಟಾ ರಾಜನ್‌ನನ್ನು ದಿಲ್ಲಿಯ ಏಮ್ಸ್‌ ಆಸ್ಪತ್ರೆ ದಾಖಲಿಸಲಾಗಿತ್ತು. ಭೂಗತ ಲೋಕದಲ್ಲಿ ಚೋಟಾ ರಾಜನ್ ಎಂದೇ ಕರೆಸಿಕೊಂಡಿದ್ದವನ ಅಸಲಿ ಹೆಸರು ರಾಜೇಂದ್ರ ನಿಕಾಲ್ಜೆ. ಏಪ್ರಿಲ್ 26ರಂದು ಚೋಟಾ ರಾಜನ್‌ಗೆ ಕೊರೊನಾ ಸೋಂಕು ದೃಢಪಟ್ಟಿದ್ದ  ಕಾರಣ ಚಿಕಿತ್ಸೆಗೆ ದಾಖಲಿಸಲಾಗಿತ್ತು ಎಂದು ವರದಿಯಾಗಿದ್ದವು.

ಕೊರೋನಾ ಗೆದ್ದವರ ಮೇಲೆ ಫಂಗಸ್ ಅಟ್ಯಾಕ್

ಭಾತರತದಲ್ಲಿ ಸರಣಿ ಅಪರಾಧ ಎಸಗಿದ್ದ ರಾಜನ್ ವಿದೇಶಗಳಲ್ಲಿ ತಲೆ ಮರೆಸಿಕೊಂಡಿದ್ದ.  ಗೃಹ ಇಲಾಖೆ, 2015ರಲ್ಲಿ ಇಂಡೋನೇಷ್ಯಾದಲ್ಲಿ ಈತನ ಬಂಧಿಸಿ ಕರೆತಂದಿತ್ತು. ವಿಚಾರಣೆ ಬಳಿಕ ದಿಲ್ಲಿಯ ತಿಹಾರ್ ಜೈಲಿನಲ್ಲಿಡಲಾಗಿತ್ತು.

ಕೊಲೆ ಸುಲಿಗೆ ಸೇರಿದಂತೆ 70ಕ್ಕೂ ಹೆಚ್ಚು ಕ್ರಿಮಿನಲ್ ಕೇಸ್‌ಗಳು ಚೋಟಾ ರಾಜನ್ ಮೇಲಿದ್ದವು.  ಏಪ್ರಿಲ್ 26ರಂದು ಈತ ಕೊರೊನಾ ಸೋಂಕಿತನಾಗಿದ್ದಾನೆ ಎಂದು ದೃಢಪಟ್ಟ ಕೂಡಲೇ ಜೈಲು ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸ್‌ ಮೂಲಕ ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದರು. ನ್ಯಾಯಾಲಯದ ನಿರ್ದೇಶನದ ಅನ್ವಯ ಚಿಕಿತ್ಸೆಗೆ ದಾಖಲಿಸಲಾಗಿತ್ತು ಎಂಬ ವರದಿಗಳು ಬಂದಿದ್ದವು.

ಚೋಟಾ ರಾಜನ್ ನೊಂದಿಗೆ ನರೇಂದ್ರ ಮೋದಿ.. ಪೋಟೋದ ಅಸಲಿ ಸತ್ಯ!

ಪತ್ರಕರ್ತ ಜ್ಯೋತಿರ್‌ಮಯೀ ಡೇ ಕೊಲೆ ಪ್ರಕರಣದಲ್ಲಿ ಅಪರಾಧಿ ಎಂದು ಘೋಷಣೆಯಾಗಿದ್ದ ಚೋಟಾಗೆ ಜೀವಾವಧಿ ಶಿಕ್ಷೆ(2018)  ವಿಧಿಸಲಾಗಿತ್ತು.  ಚೋಟಾ ರಾಜನ್ ಸಾವಿಗೀಡಾಗಿದ್ದಾನೆ ಎಂಬ ವರದಿಗಳು ಬಂದಿದ್ದರೂ ಆಸ್ಪತ್ರೆ ಮೂಲಗಳು ಮಾತ್ರ ಇನ್ನು ಸ್ಪಷ್ಟಮಾಡಿಲ್ಲ

Latest Videos
Follow Us:
Download App:
  • android
  • ios