ಕೆಜಿಎಫ್‌ನಲ್ಲಿ ಮತ್ತೆ ಹೆಚ್ಚಿದ ಗಾಂಜಾ ಮಾರಾಟ ದಂಧೆ..!
* ಗಾಂಜಾ ವ್ಯಸನಿಗಳಾಗ್ತಿದ್ದಾರೆ ಯುವಕರು
* ತಮಿಳುನಾಡು ಹಾಗೂ ಆಂಧ್ರ ಪ್ರದೇಶದಿಂದ ಸರಬರಾಜು
* ರಾಜ್ಯದ ಯುವಕರನ್ನು ದಾರಿ ತಪ್ಪಿಸುವ ಕೆಲಸ ಸದ್ದಿಲದೇ ನಡೀತಿದೆ
ವರದಿ : ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ
ಕೋಲಾರ(ಜೂ.01): ಜಿಲ್ಲೆಗೆ ಚಿನ್ನದ ಗಣಿ ಅನ್ನೋ ಹೆಸರು ತಂದುಕೊಟ್ಟಿರೋದು ಕೆಜಿಎಫ್‌ನಿಂದ ಒಂದು ಕಾಲದಲ್ಲಿ ಇಡೀ ದೇಶಕ್ಕೆ ಚಿನ್ನ ಸರಬರಾಜು ಮಾಡ್ತಿದ್ದ ಹೆಗ್ಗಳಿಗೆ ಸಹ ಇದೆ. ಕೆಜಿಎಫ್‌ನಲ್ಲಿ ವಿದ್ಯಾಭ್ಯಾಸ ಮಾಡಿರುವ ಅದೆಷ್ಟೋ ಜನರು ಐಎಎಸ್, ಐಪಿಎಸ್ ಸೇರಿದಂತೆ ವಿವಿಧ ಸರ್ಕಾರಿ ಉದ್ಯೋಗಗಳಲ್ಲಿದ್ದಾರೆ. ಬ್ಯೂಸಿನೆಸ್‌ಮ್ಯಾನ್‌ಗಳು ಇದ್ದಾರೆ. ಈಗಿರುವ ಇವರ ನಡುವೆ ಅದೆಷ್ಟೋ ಜನ ದುಷ್ಕರ್ಮಿಗಳು ಸೇರಿಕೊಂಡಿದ್ದು, ಕೆಜಿಎಫ್‌ಗೆ ಇರುವ ಒಳ್ಳೆಯ ಹೆಸರನ್ನು ಹಾಳು ಮಾಡ್ತಿದ್ದಾರೆ.
ಹೌದು, ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಬಂದಾಗಿನಿಂದ ಇಲ್ಲಿ ಸಾಕಷ್ಟು ಹೆಸರು ಬಂದಿದ್ದೆ ಅಂತ ಜನರು ಅಂದುಕೊಂಡಿದ್ದಾರೆ. ಆದ್ರೆ ಮುಂಚೆ ಇಂದಲೂ ಕೆಜಿಎಫ್ ತನ್ನದೇ ಆದ ಹೆಸರು, ಹೆಗ್ಗಳಿಗೆ, ಪ್ರಖ್ಯಾತಿ ಇದೆ. ಒಂದು ಕಡೆ ಇಡೀ ದೇಶಕ್ಕೆ ಚಿನ್ನಕೊಟ್ಟು ಕೆಜಿಎಫ್ ಹೆಸರುವಾಸಿಯಾಗಿದ್ರೆ, ಮತ್ತೊಂದು ಕಡೆ ಇಲ್ಲಿನ ಶಾಲೆ ಹಾಗೂ ಕಾಲೇಜುಗಳಲ್ಲಿ ಓದಿರುವ ಸಾವಿರಾರು ಸಂಖ್ಯೆಯಲ್ಲಿ ಸರ್ಕಾರಿ ಉದ್ಯೋಗಗಳನ್ನು ಪಡೆದುಕೊಂಡು ಕೆಲಸ ಮಾಡ್ತಿದ್ದಾರೆ. ಇದರ ನಡುವೆ ಐಎಎಸ್, ಐಪಿಎಸ್ ಜೊತೆ ಇನ್ನಿತರ ದೊಡ್ಡ ದೊಡ್ಡ ಸರ್ಕಾರಿ ಉದ್ಯೋಗಗಳನ್ನು ಗಿಟ್ಟಿಸಿಕೊಂಡು ಸೇವೆ ಸಲ್ಲಿಸುತ್ತಿದ್ದಾರೆ. ಬ್ಯೂಸಿನೆಸ್ ಕ್ಷೇತ್ರದಲ್ಲೂ ಹೆಸರು ಮಾಡಿರುವವರು ಸಹ ಇಲ್ಲಿ ಸಿಗ್ತಾರೆ. ಇಷ್ಟೆಲ್ಲಾ ಹೆಸರು ಮಾಡಿರೋ ಕೆಜಿಎಫ್‌ನಲ್ಲಿ ಇದಕ್ಕೆ ವಿರುದ್ಧವಾಗಿ ಸಮಾಜವನ್ನು ಹಾಳು ಮಾಡುವ ಯುವಕರನ್ನು ದಾರಿ ತಪ್ಪಿಸುವ ಕೆಲಸಕ್ಕೆ ಕೈ ಹಾಕಿದ್ದು, ಪೋಷಕರಿಗೆ ಹಾಗೂ ಪೊಲೀಸರಿಗೂ ತಲೆನೋವು ತಂದಿಟ್ಟಿದ್ದಾರೆ.
Chitradurga ಶಿರಡಿಯಲ್ಲಿ ಭಕ್ತರ ವೇಷದಲ್ಲಿದ್ದ ಗಾಂಜಾ ಕಿಂಗ್ ಪಿನ್ ಅರೆಸ್ಟ್
ಕೋಲಾರ ಜಿಲ್ಲೆಗೆ ಸೇರಿರುವ ಕೆಜಿಎಫ್ ತಾಲೂಕಿಗೆ ನೆರೆಯ ಆಂಧ್ರ ಹಾಗೂ ತಮಿಳುನಾಡು ರಾಜ್ಯಗಳು ಕಂಠಕವಾಗಿದ್ದು, ನಮ್ಮ ರಾಜ್ಯದ ಯುವಕರನ್ನು ದಾರಿ ತಪ್ಪಿಸುವ ಕೆಲಸ ಸದ್ದಿಲದೆ ಮಾಡ್ತಿದ್ದು, ಕೆಜಿಎಫ್‌ನ ಗಡಿ ಪ್ರದೇಶಗಳಲ್ಲಿ ಸರಿಯಾದ ತಪಾಸಣೆ ಇಲ್ಲದನ್ನೇ ಬಂಡವಾಳ ಮಾಡಿಕೊಂಡಿರುವ ಗಾಂಜಾ ಸಾಗಿಸುವ ಪೆಡ್ಲರ್‌ಗಳು ಆಯಾಸವಿಲ್ಲದೆ ಕೆಜಿಎಫ್‌ಗೆ ಅವಶ್ಯಕತೆ ತಕ್ಕಂತೆ ಗಾಂಜಾ ಸರಬರಾಜು ಮಾಡ್ತಿದ್ದಾರೆ. ಒಂದು ವೇಳೆ ಚೆಕ್ಪೋಸ್ಟ್ ಗಳಲ್ಲಿ ಏನಾದ್ರು ತಪಾಸಣೆ ನಡೆದ್ರು ಸಹ ತಲೆಕೆಡಿಸಿಕೊಳ್ಳದೆ ಹಳ್ಳಿ ರಸ್ತೆಗಳ ಮೂಲಕ ಕೆಜಿಎಫ್‌ಸಗೆ ತಲುಪಿ ಮಾರಾಟ ಮಾಡಿ ಲಕ್ಷಾಂತರ ರುಪಾಯಿ ಸಂಪಾದನೆ ಮಾಡ್ತಿದ್ದಾರೆ. ಮೊದಲು ಕೆಜಿಎಫ್‌ನ ಗಡಿ ಊರುಗಳಲ್ಲಿ ಗಾಂಜಾ ಬೆಳೆದು ಮಾರಾಟ ಮಾಡ್ತಿದ್ರು, ಆದ್ರೇ ವರ್ಷಗಳ ಹಿಂದೆ ರಾಜ್ಯ ಸರ್ಕಾರ ಗಾಂಜಾ ಮಾರಾಟಗಾರರಿಗೆ ಕಾನೂನಿನ ಮೂಲಕ ಸರಿಯಾಗಿ ಬಿಸಿ ಮುಟ್ಟಿಸಿದ ಪರಿಣಾಮ ನಮ್ಮ ರಾಜ್ಯದ ಗಡಿ ಗ್ರಾಮಗಳ ಹೊಲಗಳಲ್ಲಿ ಬೆಳೆದು ಮಾರಾಟ ಮಾಡುವುದು ಬಹುತೇಕ ನಿಂತಿದೆ. ಆದ್ರೇ ಆಂಧ್ರ ಮತ್ತು ತಮಿಳುನಾಡು ರಾಜ್ಯಗಳಿಂದ ಸರಾಗವಾಗಿ ಗಾಂಜಾ ಸರಬರಾಜು ಹಾಗ್ತಿದ್ದು, ಕೆಜಿಎಫ್ ಪೊಲೀಸರಿಗೆ ಮತ್ತೆ ತಲೆನೋವು ಶುರುವಾಗಿದೆ.
ಕೋಲಾರ ಜಿಲ್ಲೆಯ ಕೆಜಿಎಫ್‌ನಲ್ಲಿ ಹೆಚ್ಚಿನ ಕ್ರಿಮಿನಲ್ ಚಟುವಟಿಕೆ ಹಾಗೂ ಗಣಿ ಪ್ರದೇಶ ಆಗಿರೋದ್ರಿಂದ ಇಲ್ಲಿ ಪ್ರತ್ಯೇಕವಾಗಿ ಎಸ್ಪಿ ಸಹ ಕಚೇರಿ ಇದೆ. ಕೆಜಿಎಫ್ ಎಸ್ಪಿ ಕಚೇರಿ ವ್ಯಾಪ್ತಿಗೆ ಸಾಕಷ್ಟೂ ಪೊಲೀಸ್ ಠಾಣೆಗಳು ಒಳಪಡುತ್ತೆ. ಈಗಿದ್ರು ಸಹ ಆಂಧ್ರ ಹಾಗೂ ತಮಿಳುನಾಡು ಕಡೆಗಳಿಂದ ಬರುತ್ತಿರುವ ಗಾಂಜಾ ಸರಬರಾಜನ್ನು ಸಂಪೂರ್ಣವಾಗಿ ನಿಲ್ಲಿಸಲು ಸಾಧ್ಯವಾಗ್ತಿಲ್ಲ. ಗಾಂಜಾ ಪೆಡ್ಲರ್‌ಗಳು ಪ್ರಮುಖವಾಗಿ ಕಾಲೇಜು ಯುವಕರನ್ನು ಟಾಗೆ೯ಟ್ ಮಾಡ್ತಿದ್ದು, ಮಾರಾಟ ಮಾಡಿ ಶ್ರಮವಹಿಸದೇ ಲಕ್ಷಾಂತರ ರುಪಾಯಿ ಸಂಪಾದನೆ ಮಾಡ್ತಿದ್ದಾರೆ. ಯುವಕರು ಸಹ ದಾರಿ ತಪ್ಪುತ್ತಿದ್ದು, ಪೋಷಕರು ಮಕ್ಕಳಿಂದ ನೋವು ಅನುಭವಿಸುತ್ತಿದ್ದಾರೆ .ಇನ್ನು ಗಾಂಜಾ ವ್ಯಸನಿಗಳಾಗಿರುವ ಯುವಕರು ಮತ್ತಿನಲ್ಲಿ ಹಲವಾರು ಕೊಲೆ ಕೇಸ್ ಗಳಲ್ಲೂ ಸಹ ಭಾಗಿಯಾಗಿ ಈ ತಮ್ಮ ಜೀವನವನ್ನೇ ಹಾಳು ಮಾಡಿಕೊಂಡಿರುವ ಉದಾಹರಣೆ ಸಹ ಇದೆ. ಇನ್ನು ಕೆಜಿಎಫ್ ನಿಂದ ಬೆಂಗಳೂರಿಗೂ ಸಹ ಟ್ರೈನ್ ನ ಮೂಲಕ ಗಾಂಜಾ ಸರಬರಾಜು ಹಾಕ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಇದ್ದು, ಒಂದೂ ಅಂತಹವರು ಸಿಕ್ಕಿಬಿದ್ರೆ ಅವರ ವಿರುದ್ಧ ಗೂಂಡಾ ಕಾಯ್ದೆ ಹಾಕಲು ತೀಮಾ೯ನ ಮಾಡಿದ್ದಾರೆ.
ಒಟ್ಟಾರೆ ಕೆಜಿಎಫ್ ನಲ್ಲಿ ಗಾಂಜಾ ಮಾರಾಟಗಾರರ ಹಾವಳಿ ಹೆಚ್ಚಾಗಿದ್ದು, ಪೊಲೀಸರು ಚಾಪೆ ಕೆಳಗೆ ನುಸುಳಿದ್ರೆ, ಗಾಂಜಾ ಮಾರಾಟಗಾರರು ರಂಗೋಲಿ ಕೆಳಗೆ ನುಸುಳುತ್ತಿದ್ದಾರೆ. ರಾಜ್ಯ ಸರ್ಕಾರ ಆದಷ್ಟೂ ಬೇಗ ಇದರ ಬಗ್ಗೆ ನಿಗಾ ವಹಸಿ ಯುವರನ್ನು ರಕ್ಷಿಸಬೇಕಾಗಿದೆ.