Voter ID Scam: ಚಿಲುಮೆ ಸಂಸ್ಥೆ ಮಾದರಿಯಲ್ಲಿ ಮತ್ತೊಂದು ಸಂಸ್ಥೆಯಿಂದ ಮತದಾರರ ಮಾಹಿತಿ ಕಳವು!
ಚುನಾವಣಾ ಕಣ ರಂಗೇರಿದೆ. ಪಕ್ಷಗಳು ಪ್ರಚಾರದ ಭರಾಟೆಯಲ್ಲಿ ಈ ನಡುವೆ ಸಂಸ್ಥೆಯೊಂದು ಮತದಾರರ ಮಾಹಿತಿಯನ್ನು 25 ಸಾವಿರರೂ ಮಾರಾಟ ಮಾಡುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ.
ಬೆಂಗಳೂರು (ಏ.27): ಚುನಾವಣಾ ಕಣ ರಂಗೇರಿದೆ. ಪಕ್ಷಗಳು ಪ್ರಚಾರದ ಭರಾಟೆಯಲ್ಲಿ ಈ ನಡುವೆ ಸಂಸ್ಥೆಯೊಂದು ಮತದಾರರ ಮಾಹಿತಿಯನ್ನು 25 ಸಾವಿರರೂ ಮಾರಾಟ ಮಾಡುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ. ಚಿಲುಮೆ ಸಂಸ್ಥೆಯಂತೆಯೇ ಸುಮಾರು 6 ಲಕ್ಷ ದಷ್ಟು ಮತದಾರರ ಮಾಹಿತಿ ಕಲೆ ಹಾಕಿದ ಕಂಪೆನಿಯ ವಿರುದ್ಧ ಎಫ್ಐಆರ್ ದಾಖಲಾಗಿದೆ. 25 ಸಾವಿರ ಕೊಟ್ರೆ ಸಾಕು ಮತದಾರರ ದತ್ತಾಂಶ ಮಾರಾಟವಾಗುತ್ತಿದೆ. ಹಣ ಪಡೆದು ಮತದಾರರ ಮಾಹಿತಿ ಮಾರಾಟ ಮಾಡುತ್ತಿರುವ ಅಂಶ ಬೆಳಕಿಗೆ ಬಂದಿದೆ. ಸದ್ಯ ಕಂಪನಿಯ ಹೆಸರನ್ನು ಬಹಿರಂಗ ಪಡೆಸದೆ ಪೊಲೀಸರು ಗೌಪತ್ಯೆ ಕಾಪಾಡಿಕೊಂಡಿದ್ದಾರೆ. ಚಿಲುಮೆ ಸಂಸ್ಥೆಯ ರೀತಿಯಲ್ಲಿಯೇ ಈ ಕಂಪನಿಯು ಕೂಡ ಕೆಲಸ ಮಾಡುತ್ತಿತ್ತು. ಮತದಾರರ ಸಂಪೂರ್ಣ ವಿವರವನ್ನು ಸಂಸ್ಥೆ ಸಂಗ್ರಹಿಸುತ್ತಿತ್ತು. ಪ್ರತ್ಯೇಕ ಆ್ಯಪ್ ಬಳಸಿ ಮತದಾರರ ಮಾಹಿತಿ, ಹೆಸರು, ವಿಳಾಸ, ಜಾತಿ, ಮತದಾರರು ಕಳೆದ ಬಾರಿ ಯಾವ ಪಕ್ಷಕ್ಕೆ ಬೆಂಬಲಿಸಿದ್ದರು, ಈ ಬಾರಿ ಯಾವ ಪಕ್ಷಕ್ಕೆ ಬೆಂಬಲಿಸಲಿದ್ದಾರೆ, ಎಂಬ ಮಾಹಿತಿಯನ್ನು ತಿಳಿದುಕೊಳ್ಳುತ್ತಿತ್ತು.
ಕಂಪನಿ ತನ್ನ ವೆಬ್ ಸೈಟ್‌ನಲ್ಲಿ ಮತದಾರರ ಮೊಬೈಲ್ ಸಂಖ್ಯೆ ಹಾಕುತ್ತಿತ್ತು, 25 ಸಾವಿರ ನೀಡಿದರೆ ಲಾಗ್ ಇನ್ ಐಡಿ ನೀಡುತ್ತಿತ್ತು. ಹೀಗೆ ಸುಮಾರು 6 ಲಕ್ಷ ದಷ್ಟು ಮತದಾರರ ಮಾಹಿತಿ ಈ ಸಂಸ್ಥೆಯ ಬಳಿ ಇತ್ತು ಎಂದು ತಿಳಿದುಬಂದಿದೆ.
ಇದು ನಿರ್ದಿಷ್ಟ ಕ್ಷೇತ್ರದ ಮತದಾರರ ಪಟ್ಟಿಯೇ ಅಥವಾ ಬೇರೆ ಬೇರೆ ಕ್ಷೇತ್ರದ್ದೇ ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ. ಅಭ್ಯರ್ಥಿಗಳಿಗೆ ಈ ವೆಬ್ ಸೈಟ್ ತೆಗೆದ ತಕ್ಷಣ ಸ್ವಾಗತ ಎಂಬ ಸಂದೇಶ ಬರುತ್ತಿತ್ತು. 25 ಸಾವಿರ ಜೊತೆಗೆ 500 ಸೇವಾ ಶುಲ್ಕ ನೀಡಿದರೆ ಕ್ಷೇತ್ರದ ಮತದಾರರ ಮಾಹಿತಿ ನೀಡುತ್ತಿತ್ತು. ಮಾಹಿತಿ ಪಡೆದು ನಿಮ್ಮ ಚುನಾವಣೆಯಲ್ಲಿ ಜಯಶಾಲಿಯಾಗಿ ಎಂದು ಹೇಳುತ್ತಿತ್ತು. ಒಂದು ವೇಳೆ ಸೋತರೆ ಹಣ ವಾಪಸ್ ಎಂಬ ಪ್ರಣಾಳಿಕೆ ಮಾಡಿಕೊಂಡಿತ್ತು. ಪಕ್ಷೇತರ ಅಭ್ಯರ್ಥಿ ನೀಡಿದ ದೂರಿನ ಮೇರೆಗೆ ಈ ಕೆಂಪೆನಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಆಗ್ನೇಯ ವಿಭಾಗದ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ 90 ಸಾವಿರ ಮತದಾರರ ಮಾಹಿತಿಯನ್ನು ಚಿಲುಮೆ ಸಂಸ್ಥೆ ಸಂಗ್ರಹಿಸಿತ್ತು ಎಂಬ ಮಹತ್ವದ ಸಂಗತಿ ಕೇಂದ್ರ ವಿಭಾಗದ ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.
ಕಳೆದ ವರ್ಷದ ಡಿಸೆಂಬರ್ ನಲ್ಲಿ ಸಿಕ್ಕಿಬಿದ್ದಿದ್ದ ಚಿಲುವೆ ಸಂಸ್ಥೆ:
ಇದೇ ವಿಚಾರವಾಗಿ 2022 ರ ಡಿಸೆಂಬರ್ ತಿಂಗಳಿನಲ್ಲಿ ಚಿಲುಮೆ ಸಂಸ್ಥೆ ಸಿಕ್ಕಿಬಿದ್ದಿತ್ತು. ಈ ವಿಧಾನಸಭಾ ಚುನಾವಣೆ ವೇಳೆ ಆಯಾ ಕ್ಷೇತ್ರಗಳ ಮತದಾರರ ದತ್ತಾಂಶವನ್ನು ರಾಜಕೀಯ ಪಕ್ಷಗಳಿಗೆ ಮಾರಾಟ ಮಾಡಿ ಹಣ ಸಂಪಾದಿಸುವುದು ಚಿಲುಮೆ ಸಂಸ್ಥೆಯ ಮುಖ್ಯಸ್ಥ ರವಿಕುಮಾರ್ ತಂಡದ ದುರಾಲೋಚನೆಯಾಗಿತ್ತು. ಆದರೆ ಆರೋಪಿಗಳ ಪೂರ್ವಯೋಜಿತ ಸಂಚು ಕಾರ್ಯರೂಪಕ್ಕೆ ಮುನ್ನವೇ ಬಯಲಾಯಿತು. ಹೀಗಾಗಿ ಮೂರು ತಿಂಗಳ ಅವಧಿಯಲ್ಲಿ 4 ವಿಧಾನಸಭಾ ಕ್ಷೇತ್ರಗಳಲ್ಲಿ ಮಾತ್ರ ಚಿಲುಮೆ ತಂಡ ಮಾಹಿತಿ ಸಂಗ್ರಹ ಮಾಡಿದ್ದು ಪತ್ತೆಯಾಗಿತ್ತು.
Bengaluru: ಸಾಯ್ತೀನಿ ಅಂತ ನಾಟಕ ಮಾಡ್ತಿದ್ದ ಪ್ರೇಯಸಿಯನ್ನು ಕೊಲೆಗೈದ
ಮತದಾರರ ಜಾಗೃತಿ ಸೋಗಿನಲ್ಲಿ ಚಿಕ್ಕಪೇಟೆ, ರಾಜರಾಜೇಶ್ವರಿ ನಗರ, ಶಿವಾಜಿನಗರ ಹಾಗೂ ಮಹದೇವಪುರ ಕ್ಷೇತ್ರಗಳ ಸರಹದ್ದಿನಲ್ಲಿ ಮತದಾರರ ಮನೆಗಳಿಗೆ ತೆರಳಿ ಚಿಲುಮೆ ತಂಡವು ಸ್ವವಿವರ ಕಲೆ ಹಾಕಿತ್ತು. ಇದಕ್ಕಾಗಿ ಚುನಾವಣಾ ಸಿಬ್ಬಂದಿ ಹೆಸರಿನಲ್ಲಿ ನಕಲಿ ಗುರುತಿನ ಪತ್ರಗಳನ್ನು ಕೂಡಾ ಚಿಲುಮೆ ಬಳಸಿತ್ತು. ಈ ಕೃತ್ಯಕ್ಕೆ ನೇರವಾಗಿ ಪಾಲ್ಗೊಳ್ಳದೆ ಹೋದರೂ ಸಮರ್ಪಕವಾಗಿ ಕರ್ತವ್ಯ ನಿರ್ವಹಿಸದೆ ಪರೋಕ್ಷವಾಗಿ ನೆರವಾದ ತಪ್ಪಿಗೆ ಮತದಾರರ ನೊಂದಣಾಧಿಕಾರಿಗಳಾದ (ಆರ್‌ಓ) ಚಿಕ್ಕಪೇಟೆಯ ವಿ.ಬಿ.ಭೀಮಾಶಂಕರ್, ಶಿವಾಜಿನಗರದ ಸುಹೇಲ್ ಅಹಮ್ಮದ್, ಮಹದೇವಪುರದ ಚಂದ್ರಶೇಖರ್ ಹಾಗೂ ರಾಜರಾಜೇಶ್ವರಿ ನಗರದ ಸಹಾಯಕ ಮತದಾರರ ನೊಂದಣಾಧಿಕಾರಿ (ಎಆರ್‌ಓ) ಮಹೇಶ್ ಅವರನ್ನು ಬಂಧಿಸಲಾಗಿತ್ತು.
ಪಿಯುಸಿ ಫೇಲ್ ಆಗಿದ್ದಕ್ಕೆ ಗೆಳತಿ ಸಾವು: ಸಾವಿನ ಸುದ್ದಿ ಕೇಳಿ ಇವಳೂ ಆತ್ಮಹತ್ಯೆಗೆ ಯತ್ನ!
ಕರ್ನಾಟಕ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.