Asianet Suvarna News Asianet Suvarna News

ವಿಕೃತವಾಗಿ ರೇಣುಕಾಸ್ವಾಮಿ ಕೊಲೆ, ಬರೋಬ್ಬರಿ 15 ಕಡೆ ಗಾಯದ ಬಗ್ಗೆ ಮರಣೋತ್ತರ ಪರೀಕ್ಷೆಯಿಂದ ಬಹಿರಂಗ!

ರೇಣುಕಾ ಸ್ವಾಮಿಯನ್ನು ಯಾವ ರೀತಿ ಚಿತ್ರಹಿಂಸೆ ನೀಡಿ ವಿಕೃತವಾಗಿ ಕೊಲ್ಲಲಾಗಿದೆ ಎಂಬ ವಿಚಾರ ಮರಣೋತ್ತರ ಪರೀಕ್ಷೆಯಿಂದ ಬಯಲಾಗಿದೆ.

actor darshan arrested in murder case chitradurga renuka swamy  postmortem report details out gow
Author
First Published Jun 11, 2024, 4:13 PM IST

ಬೆಂಗಳೂರು (ಜೂ.11): ಬೆಂಗಳೂರಿನಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಆರೋಪದ ಹಿನ್ನೆಲೆ ನಟ ದರ್ಶನ್, ನಟಿ ಪವಿತ್ರಾ ಗೌಡ ಮತ್ತು ನಟನ ಆಪ್ತರು ಸೇರಿ 10ಕ್ಕೂ ಹೆಚ್ಚು ಮಂದಿ  ಅರೆಸ್ಟ್ ಆದ ಬೆನ್ನಲ್ಲೇ  ಕೊಲೆಯ ಬಗ್ಗೆ ಒಂದೊಂದೇ ವಿಚಾರ ಹೊರಗಡೆ ಬರುತ್ತಿದೆ.

ಇನ್ನು ರೇಣುಕಾ ಸ್ವಾಮಿಯನ್ನು ಯಾವ ರೀತಿ ಚಿತ್ರಹಿಂಸೆ ನೀಡಿ ವಿಕೃತವಾಗಿ ಕೊಲ್ಲಲಾಗಿದೆ ಎಂಬ ವಿಚಾರ ಮರಣೋತ್ತರ ಪರೀಕ್ಷೆಯಿಂದ ತಿಳಿದುಬಂದಿದೆ. ರೇಣುಕಾ ಸ್ವಾಮಿ ದೇಹದ ಮೇಲೆ ಬರೋಬ್ಬರಿ 15 ಕಡೆ ಗಾಯವಾಗಿದೆ. ದೇಹದ 15 ಭಾಗಗಳಲ್ಲಿ ಹಲ್ಲೆಯಾಗಿರೋದು ಪತ್ತೆಯಾಗಿದೆ ಎಂದು ಫಾರೆನ್ಸಿಕ್ ವೈದ್ಯರು ಮಾಹಿತಿ ನೀಡಿದ್ದಾರೆ.

ದರ್ಶನ್ ಬಂಧನ ಬೆನ್ನಲ್ಲೇ ಒಡೆದ ಹೃದಯ ಸ್ಟೇಟಸ್‌ ಹಾಕಿ ಡಿಲೀಟ್‌ ಮಾಡಿದ ನಟಿ ರಕ್ಷಿತಾ, ರಮ್ಯಾ ರೀಟ್ವೀಟ್!

ಮೂಗು, ಕಾಲು, ತಲೆ, ಬೆನ್ನು, ದವಡೆ ಸೇರಿದಂತೆ 15 ಕಡೆ ಗಾಯಾಗಳಾಗಿವೆ. ರಾಡು ಮತ್ತು ಕಟ್ಟಿಗೆಯಿಂದ, ಮರದ ಸಲಾಕೆಯಿಂದ  ಹಲ್ಲೆ ನಡೆದಿದೆ ಎಂದು ತಿಳಿದುಬಂದಿದೆ. ದರ್ಶನ್ ಸಹಿತ 10ಕ್ಕೂ ಹೆಚ್ಚು  ಆರೋಪಿಗಳ ಮೆಡಿಕಲ್ ಟೆಸ್ಟ್ ಕೂಡ ಮಾಡಲಾಗಿದೆ.

ಜಿಮ್‌ ಮಾಡ್ತಿದ್ದ ನಟನಿಗೆ ಜೀಪು ಹತ್ತು ಎಂದ ಪೊಲೀಸ್‌, ಕಾರಲ್ಲಿ ಬರುವೆ ಎಂದಿದ್ಯಾಕೆ ದರ್ಶನ್?

ಇನ್ನು ರೇಣುಕಾಸ್ವಾಮಿ ಮೃತದೇಹದ ಮರಣೋತ್ತರ ಪರೀಕ್ಷೆ ಮುಗಿದ ಬಳಿಕ, ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ. ಚಿತ್ರದುರ್ಗಕ್ಕೆ ಮೃತದೇಹ ಕೊಂಡೊಯ್ಯಲು ಕುಟುಂಬ ನಿರ್ಧಾರ ಮಾಡಿದ್ದು, ಇಂದೇ ಶವ ಸಂಸ್ಕಾರ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.

Latest Videos
Follow Us:
Download App:
  • android
  • ios