Asianet Suvarna News Asianet Suvarna News

ದರ್ಶನ್ ಬಂಧನ ಬೆನ್ನಲ್ಲೇ ಒಡೆದ ಹೃದಯ ಸ್ಟೇಟಸ್‌ ಹಾಕಿ ಡಿಲೀಟ್‌ ಮಾಡಿದ ನಟಿ ರಕ್ಷಿತಾ, ರಮ್ಯಾ ರೀಟ್ವೀಟ್!

ನಟ ದರ್ಶನ್‌ ಬಂಧನ ಬೆನ್ನಲ್ಲೇ ಅತ್ಯಾಪ್ತ ಗೆಳತಿ ರಕ್ಷಿತಾ ಪ್ರೇಮ್ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಹಾಕಿದ್ದಾರೆ. ಇದರ ಜೊತೆಗೆ ನಟಿ ರಮ್ಯಾ ಕೂಡ ಬಂಧನದ ಪೋಸ್ಟ್ ರೀಟ್ವೀಟ್ ಮಾಡಿದ್ದಾರೆ.

actress ramya and rakshitha prem react after actor darshan arrested in renuka swamy murder case gow
Author
First Published Jun 11, 2024, 3:11 PM IST

ಬೆಂಗಳೂರು (ಜೂ.11): ಬೆಂಗಳೂರಿನಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಆರೋಪದ ಹಿನ್ನೆಲೆ ನಟ ದರ್ಶನ್, ನಟಿ ಪವಿತ್ರಾ ಗೌಡ ಮತ್ತು ನಟನ ಆಪ್ತರು ಸೇರಿ 10ಕ್ಕೂ ಹೆಚ್ಚು ಮಂದಿ  ಅರೆಸ್ಟ್ ಆದ ಬೆನ್ನಲ್ಲೇ ದರ್ಶನ್‌ ಅವರ ಅತ್ಯಾಪ್ತ ಗೆಳತಿ ರಕ್ಷಿತಾ ಪ್ರೇಮ್ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಹಾಕಿದ್ದಾರೆ. ಇನ್ನು ಇವರ ಜೊತೆ ನಟಿಸಿದ್ದ ಸ್ಯಾಂಡಲ್‌ವುಡ್‌ ಕ್ವೀನ್ ನಟಿ ರಮ್ಯಾ ದರ್ಶನ್ ಅರೆಸ್ಟ್ ಆದ ಪೋಸ್ಟ್ ಅನ್ನು ರಿಪೋಸ್ಟ್ ಮಾಡಿದ್ದಾರೆ.

ಜಿಮ್‌ ಮಾಡ್ತಿದ್ದ ನಟನಿಗೆ ಜೀಪು ಹತ್ತು ಎಂದ ಪೊಲೀಸ್‌, ಕಾರಲ್ಲಿ ಬರುವೆ ಎಂದಿದ್ಯಾಕೆ ದರ್ಶನ್?

ದರ್ಶನ್ ಕೊಲೆ ಕೇಸ್ ನಲ್ಲಿ ಆರೋಪಿ ಎಂಬ ವಿಚಾರ ತಿಳಿಯುತ್ತಿದ್ದಂತೆಯೇ ನಟಿ ರಕ್ಷಿತಾ ಪ್ರೇಮ್ ಸ್ಟೇಟಸ್ ಪೋಸ್ಟ್ ಮಾಡಿದ್ದಾರೆ. ಒಡೆದ ಹೃದಯ ಪೋಸ್ಟ್ ಹಾಕಿರುವ ರಕ್ಷಿತಾ, ನಾನು ತುಂಬಾ ಹೇಳಲು ಬಯಸುತ್ತೇನೆ....ಆದ್ರೆ ಹೇಳಲು ಆಗ್ತಿಲ್ಲವೆಂದು ಬರೆದುಕೊಂಡಿದ್ದಾರೆ. ಆದರೆ ಸ್ವಲ್ಪ ಹೊತ್ತಲ್ಲೇ ಆ ಪೋಸ್ಟ್ ಅನ್ನು  ರಕ್ಷಿತಾ ಡಿಲೀಟ್‌ ಮಾಡಿದ್ದಾರೆ. ಯಾಕೆ ಡಿಲೀಟ್‌ ಮಾಡಿದ್ದಾರೆ ಎನ್ನುವುದು ಗೊತ್ತಿಲ್ಲ.

ಕೊಲೆ ಪ್ರಕರಣದಲ್ಲಿ ದರ್ಶನ್‌ ಅರೆಸ್ಟ್ ಬೆನ್ನಲ್ಲೇ ಎರಡನೇ ಪತ್ನಿ ಪವಿತ್ರಾ ಗೌಡ ಬಂಧನ!

ಇನ್ನು ನಟಿ, ಮಾಜಿ ಸಂಸದೆ ರಮ್ಯಾ ಕೂಡ ದರ್ಶನ್ ಬಂಧನದ ಸುದ್ದಿಯನ್ನು ರೀಟ್ವೀಟ್‌ ಮಾಡಿದ್ದಾರೆ. ಇದರ ಅರ್ಥವೇನು ಎಂಬುದು ಇನ್ನೂ ತಿಳಿದಿಲ್ಲ. ಆದರೆ ರಮ್ಯಾ ರೀಟ್ವೀಟ್ ಗೆ, ಈ ವ್ಯಕ್ತಿ ಪ್ರಶ್ನಾತೀತವಾಗಿದ್ದಾನೆ. ಸಮಾಜಕ್ಕೆ ಇವನಿಂದ ಕಳವಳವಾಗಿದೆ. ನಿಮ್ಮ ಧ್ವನಿ ಗುರುತಿಸಲ್ಪಡುತ್ತದೆ. ನ್ಯಾಯವು ಮೇಲುಗೈ ಸಾಧಿಸುತ್ತದೆ ಎಂದು ಬರೆದುಕೊಂಡಿದ್ದಾರೆ. ಇನ್ನು ಕೆಲವರು ಯಾರೇ ಆಗಿರಲಿ ಕಾನೂನಿನ ಪ್ರಕಾರ ಶಿಕ್ಷೆ ಆಗಲೇಬೇಕು ಎಂದು ಬರೆದುಕೊಂಡಿದ್ದಾರೆ.

ದರ್ಶನ್ ಮತ್ತು ರಕ್ಷಿತಾ ಸ್ಯಾಂಡಲ್‌ವುಡ್‌ನಲ್ಲಿ ಒಂದು ಕಾಲದ ಹಿಟ್‌ ಜೋಡಿಯಾಗಿದ್ದರು. ಈಗ ಸಿನೆಮಾಗಳಲ್ಲಿ ನಟಿ ರಕ್ಷಿತಾ ನಟಿಸುತ್ತಿಲ್ಲವಾದರೂ ಅವರಿಬ್ಬರೂ ಆತ್ಮೀಯ ಗೆಳೆತನ ಹೊಂದಿದ್ದಾರೆ. ಇನ್ನು ರಮ್ಯಾ ಕೂಡ ದರ್ಶನ್ ಜೊತೆಗೆ ನಟಿಸಿ ಹಲವು ಹಿಟ್‌ ಸಿನೆಮಾಗಳನ್ನು ನೀಡಿದ್ದಾರೆ.

Latest Videos
Follow Us:
Download App:
  • android
  • ios