Asianet Suvarna News Asianet Suvarna News

ಹಸುಗಳ ಕೆಚ್ಚಲು, ಬಾಲ ಕತ್ತರಿಸಿ ವಿಕೃತಿ ಮೆರೆಯುತ್ತಿದ್ದ ಕಿಡಿಗೇಡಿ ಬಂಧನ

ಇತ್ತೀಚಿಗೆ ನಾಯಂಡಹಳ್ಳಿ ಸಮೀಪ ರಸ್ತೆ ಬದಿ ಮೇಯುತ್ತಿದ್ದ ಹಸುಗಳ ಜತೆ ಆರೋಪಿ ಅಸಭ್ಯವಾಗಿ ವರ್ತಿಸುತ್ತಿದ್ದ ಬಂಧಿತ ಮಂಜುನಾಥ್‌ 

Accused Arrested For Who Perversion  Rampant With Cows in Bengaluru grg
Author
Bengaluru, First Published Aug 8, 2022, 3:30 AM IST

ಬೆಂಗಳೂರು(ಆ.08): ರಸ್ತೆ ಬದಿ ಮೇಯುತ್ತಿದ್ದ ಹಸುಗಳ ಕೆಚ್ಚಲು ಹಾಗೂ ಬಾಲ ಕತ್ತರಿಸಿ ವಿಕೃತಿ ಮೆರೆಯುತ್ತಿದ್ದ ಕಿಡಿಗೇಡಿಯೊಬ್ಬನನ್ನು ಸ್ಥಳೀಯರು ಗೂಸ ಕೊಟ್ಟು ಪೊಲೀಸರಿಗೆ ಒಪ್ಪಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಗೆಜ್ಜೆಲಗೆರೆ ಗ್ರಾಮದ ಮಂಜುನಾಥ್‌ (34) ಬಂಧಿತನಾಗಿದ್ದು, ಇತ್ತೀಚಿಗೆ ನಾಯಂಡಹಳ್ಳಿ ಸಮೀಪ ರಸ್ತೆ ಬದಿ ಮೇಯುತ್ತಿದ್ದ ಹಸುಗಳ ಜತೆ ಆರೋಪಿ ಅಸಭ್ಯವಾಗಿ ವರ್ತಿಸುತ್ತಿದ್ದ. ಈ ಕೃತ್ಯದಿಂದ ರೊಚ್ಚಿಗೆದ್ದ ಹಸುಗಳ ಮಾಲೀಕರು, ಆರೋಪಿಯನ್ನು ಹಿಡಿದು ಥಳಿಸಿ ಚಂದ್ರಾಲೇಔಟ್‌ ಠಾಣೆ ಪೊಲೀಸರಿಗೊಪ್ಪಿಸಿದ್ದಾರೆ. ಬಳಿಕ ಹಸು ಮಾಲೀಕ ಶಶಿಕುಮಾರ್‌ ನೀಡಿದ ದೂರಿನ ಮೇರೆಗೆ ಎಫ್‌ಐಆರ್‌ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೆಲಸವಿಲ್ಲದೆ ಅಲೆಯುತ್ತಿದ್ದ ಮಂಜ:

ಮದ್ದೂರು ತಾಲೂಕಿನ ಗೆಜ್ಜೆಲಗೆರೆ ಗ್ರಾಮದ ಮಂಜುನಾಥ ಕೆಲಸವಿಲ್ಲದೆ ಅಲೆಯುತ್ತಿದ್ದ. ಆಗಾಗ್ಗೆ ತನ್ನೂರಿನಿಂದ ರೈಲಿನಲ್ಲಿ ನಾಯಂಡಹಳ್ಳಿಯಲ್ಲಿದ್ದ ಸಂಬಂಧಿಕರ ಮನೆಗೆ ಬಂದು ಹೋಗುತ್ತಿದ್ದ. ನಾಯಂಡಹಳ್ಳಿಯಲ್ಲಿ ಕೆಲವರು ಹಸುಗಳ ಸಾಕಾಣಿಕೆ ಮಾಡಿದ್ದು, ಅಲ್ಲಿನ ಖಾಲಿ ಪ್ರದೇಶಗಳಲ್ಲಿ ಅವುಗಳನ್ನು ಮೇಯಲು ಬಿಡುತ್ತಾರೆ. ಹೀಗೆ ನಾಯಂಡಹಳ್ಳಿಗೆ ಸಂಬಂಧಿಕರ ಮನೆಗೆ ಬಂದಾಗ ಮಂಜ, ಹಸುಗಳು ಮೇಯುವಾಗ ಅವುಗಳ ಕೆಚ್ಚಲು ಹಾಗೂ ಬಾಲ ಕತ್ತರಿಸಿ ಹಿಂಸಿಸಿ ವಿಕೃತ ಆನಂದಪಡುತ್ತಿದ್ದ.

ಹಿಂದಿ ಟೀಚರ್ ಕಥೆ ಮುಗಿಸಿದ ಬಿಜೆಪಿ ಮುಖಂಡ, 6 ತಿಂಗ್ಳು ನಾಟಕವಾಡಿದ್ಲು ಕಿಲ್ಲರ್ ಕೌನ್ಸಿಲರ್!

ತಮ್ಮ ಹಸುಗಳ ಮೇಲೆ ಪೈಶಾಚಿಕ ಕೃತ್ಯದಿಂದ ಕೆರಳಿದ ಹೈನುಗಾರರು, ಕೆಲ ದಿನಗಳು ರಹಸ್ಯವಾಗಿ ಹಸುಗಳ ರಕ್ಷಣೆಗೆ ನಿಂತರು. ಇತ್ತೀಚಿಗೆ ಹಸುಗಳ ಮೇಯುವಾಗ ಅವುಗಳ ಬಳಿಗೆ ಬಂದು ಮಂಜ ಮತ್ತೆ ಅಸಭ್ಯವಾಗಿ ವರ್ತಿಸುತ್ತಿದ್ದ. ಇದನ್ನು ನೋಡಿದ ಕೂಡಲೇ ಎಚ್ಚೆತ್ತ ಹಸುಗಳ ಮಾಲೀಕರು, ಆತನ ಕೃತ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ. ಬಳಿಕ ಆತನನ್ನು ಹಿಡಿದು ಬಡಿದು ತದನಂತರ ಚಂದ್ರಾಲೇಔಟ್‌ ಠಾಣೆಗೆ ಒಪ್ಪಿಸಿದ್ದಾರೆ.
 

Follow Us:
Download App:
  • android
  • ios