ಮೈಸೂರು: ಗಾಂಜಾ ಸಾಗಿಸುತ್ತಿದ್ದ ಆರೋಪಿ ಬಂಧನ

ದಾಸಪ್ಪ ವೃತ್ತದಿಂದ ಕೆಆರ್‌ಎಸ್‌ ರಸ್ತೆಯಲ್ಲಿರುವ ರೈಲ್ವೆ ಕೆಳ ಸೇತುವೆ ಬಳಿ ವಾಹನ ತಪಾಸಣೆ ಮಾಡುವಾಗ ಇಬ್ಬರು ಆರೋಪಿಗಳು ಒಂದು ಪ್ಲಾಸ್ಟಿಕ್‌ ಚೀಲವನ್ನು ಸ್ಕೂಟರ್‌ ಮುಂದೆ ಇಟ್ಟುಕೊಂಡು ಬರುತ್ತಿದ್ದರು. ಈ ವೇಳೆ ವಾಹನ ತಪಾಸಣೆಗೆ ಮುಂದಾದಾಗ ಇಬ್ಬರೂ ಸ್ಕೂಟರನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದು, ಈ ಪೈಕಿ ಓರ್ವನನ್ನು ಬಂಧಿಸಲಾಗಿದೆ.

Accused Arrested for Transporting Marijuana in Mysuru grg

ಮೈಸೂರು(ಆ.10): ಗಾಂಜಾ ಸಾಗಿಸುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ನಗರದ ದೇವರಾಜ ಪೊಲೀಸ್‌ ಠಾಣೆ ಸಿಬ್ಬಂದಿಯು, ಆರೋಪಿಯಿಂದ 4.50 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ ಪಡೆದಿದ್ದಾರೆ.

ದಾಸಪ್ಪ ವೃತ್ತದಿಂದ ಕೆಆರ್‌ಎಸ್‌ ರಸ್ತೆಯಲ್ಲಿರುವ ರೈಲ್ವೆ ಕೆಳ ಸೇತುವೆ ಬಳಿ ವಾಹನ ತಪಾಸಣೆ ಮಾಡುವಾಗ ಇಬ್ಬರು ಆರೋಪಿಗಳು ಒಂದು ಪ್ಲಾಸ್ಟಿಕ್‌ ಚೀಲವನ್ನು ಸ್ಕೂಟರ್‌ ಮುಂದೆ ಇಟ್ಟುಕೊಂಡು ಬರುತ್ತಿದ್ದರು. ಈ ವೇಳೆ ವಾಹನ ತಪಾಸಣೆಗೆ ಮುಂದಾದಾಗ ಇಬ್ಬರೂ ಸ್ಕೂಟರನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದು, ಈ ಪೈಕಿ ಓರ್ವನನ್ನು ಬಂಧಿಸಲಾಗಿದೆ.

ಚಾಮರಾಜನಗರ: ಮಾದಪ್ಪನ ಸನ್ನಿಧಿಯಲ್ಲಿ ಗಾಂಜಾ ಮಾರಾಟ, ಮೂವರ ಬಂಧನ

ಆರೋಪಿಯಿಂದ 4.50 ಲಕ್ಷ ಮೌಲ್ಯದ 9ಕೆಜಿ 350 ಗ್ರಾಂ ತೂಕದ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ಸ್ಕೂಟರ್‌ ಅನ್ನು ವಶಕ್ಕೆಪಡೆಯಲಾಗಿದೆ. ಈ ಸಂಬಂಧ ದೇವರಾಜ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಡಿಸಿಪಿಗಳಾ ಮುತ್ತುರಾಜ್‌, ಎಸ್‌. ಜಾಹ್ನವಿ ಮಾರ್ಗದರ್ಶನದಲ್ಲಿ ದೇವರಾಜ ಉಪ ವಿಭಾಗದ ಎಸಿಪಿ ಶಾಂತಮಲ್ಲಪ್ಪ ಅವರ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್‌ ಟಿ.ಬಿ. ಶಿವಕುಮಾರ್‌, ಎಸ್‌ಐ ಪ್ರಭು, ಸಿಬ್ಬಂದಿ ಮಧುಕೇಶ್‌, ಸೋಮಶೆಟ್ಟಿ, ಸುರೇಶ್‌, ವೇಣುಗೋಪಾಲ್‌, ನಂದೀಶ್‌, ಪ್ರದೀಪ್‌ ಮತ್ತು ಮಾರುತಿಪವನ್‌ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Latest Videos
Follow Us:
Download App:
  • android
  • ios