Asianet Suvarna News Asianet Suvarna News

Bengaluru Crime: ಪತ್ನಿಯ ಸುಖವಾಗಿಡಲು ಕಳ್ಳತನಕ್ಕೆ ಇಳಿದ ಭೂಪ!

*  ಖತರ್ನಾಕ್‌ ಖದೀಮನ ಬಂಧನ
*  ಗುಜರಾತ್‌ನಿಂದ ರೈಲಲ್ಲಿ ಬಂದು ಸರಗಳವು
*  ಬಂಧಿತನಿಂದ 4 ಲಕ್ಷದ ಚಿನ್ನದ ಗಟ್ಟಿವಶ
 

Accused Arrested For Theft Cases in Bengaluru grg
Author
Bengaluru, First Published Apr 5, 2022, 5:02 AM IST

ಬೆಂಗಳೂರು(ಏ.05): ಪತ್ನಿಯೊಂದಿಗೆ ವಿಲಾಸಿ ಜೀವನ ನಡೆಸುವ ಉದ್ದೇಶದಿಂದ ಸುಲಭವಾಗಿ ಹಣ ಸಂಪಾದಿಸಲು ಹೊರರಾಜ್ಯದಿಂದ ನಗರಕ್ಕೆ ಬಂದು ಸರಗಳವು ಮಾಡಿ ವಿಮಾನದಲ್ಲಿ ಪರಾರಿಯಾಗುತ್ತಿದ್ದ ಖತರ್ನಾಕ್‌ ಕಳ್ಳನನ್ನು(Thief) ಸಿ.ಕೆ.ಅಚ್ಚುಕಟ್ಟೆಠಾಣೆ ಪೊಲೀಸರು(Police) ಬಂಧಿಸಿದ್ದಾರೆ.

ಗುಜರಾತ್‌ನ(Gujarat) ಅಹಮದಾಬಾದ್‌ನಗರದ ಉಮೇಶ್‌ ಖಟಿಕ್‌(26) ಬಂಧಿತ(Arrest). ಆರೋಪಿಯಿಂದ(Accused) 4 ಲಕ್ಷ ರು. ಮೌಲ್ಯದ ಚಿನ್ನದ ಗಟ್ಟಿಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಾಡೂಟಕ್ಕೆ ಕರೆದು ಮರ್ಡರ್, ಆರೋಪಿಗಳು ಅಂದರ್, ಪ್ರಕಣದ ಹಿಂದೆ ಹೆಣ್ಣಿನ ಪಿಕ್ಚರ್

ಕಳೆದ ಡಿ.26ರಂದು ಬನಶಂಕರಿ 3ನೇ ಹಂತದ ನೂರು ಅಡಿ ವರ್ತುಲ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆಯನ್ನು(Woman) ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿದ ವ್ಯಕ್ತಿಯೊಬ್ಬ, ಚಾಕು ತೋರಿಸಿ ಮಹಿಳೆಯ ಮಾಂಗಲ್ಯ ಕಿತ್ತು ಪರಾರಿಯಾಗಿದ್ದ. ಈ ಸಂಬಂಧ ದಾಖಲಾಗಿದ್ದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದಾಗ ಆರೋಪಿ ಗುಜರಾತ್‌ ಮೂಲದವನು ಎಂಬ ಸುಳಿವು ಸಿಕ್ಕಿತ್ತು. ಬಳಿಕ ಸಿ.ಕೆ.ಅಚ್ಚುಕಟ್ಟು ಠಾಣೆ ಪೊಲೀಸರು ಆರೋಪಿ ಉಮೇಶ್‌ ಬಗ್ಗೆ ಅಹಮದಾಬಾದ್‌ನಗರದ ಸಿಸಿಬಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಇದರ ಆಧಾರದ ಮೇಲೆ ಸಿಸಿಬಿ ಅಧಿಕಾರಿಗಳು ಆರೋಪಿಯನ್ನು ಬಂಧಿಸಿ, ಅಲ್ಲಿನ ಮೂರು ಸರಗಳವು ಪ್ರಕರಣ ಪತ್ತೆಹಚ್ಚಿದ್ದರು. ಬಳಿಕ ಆತನನ್ನು ಸಬರಮತಿ ಸೆಂಟ್ರಲ್‌ ಜೈಲ್‌ಗೆ ಕಳುಹಿಸಿದ್ದರು.

ಈ ಬಗ್ಗೆ ಮಾಹಿತಿ ಪಡೆದ ಸಿ.ಕೆ.ಅಚ್ಚುಕಟ್ಟು ಠಾಣೆ ಪೊಲೀಸರ ತಂಡ, ಗುಜರಾತ್‌ಗೆ ತೆರಳಿ ಬಾಡಿ ವಾರೆಂಟ್‌ ಮೇಲೆ ವಶಕ್ಕೆ ಪಡೆದು ನಗರಕ್ಕೆ ಕರೆತಂದು ವಿಚಾರಣೆ ಮಾಡಿದಾಗ, ಸಿ.ಕೆ.ಅಚ್ಚುಕಟ್ಟೆ, ಮೈಕೋ ಲೇಔಟ್‌ ಹಾಗೂ ಮಲ್ಲೇಶ್ವರ ಠಾಣಾ ವ್ಯಾಪ್ತಿಯ ಮೂರು ಪ್ರಕರಣಗಳು ಬೆಳಕಿಗೆ ಬಂದಿವೆ. ವಿಚಾರಣೆ ವೇಳೆ ಆತ ನೀಡಿದ ಮಾಹಿತಿ ಮೇರೆಗೆ ನಾಲ್ಕು 4 ಲಕ್ಷ ರು. ಮೌಲ್ಯದ ಚಿನ್ನದ ಗಟ್ಟಿಹಾಗೂ ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಪ್ರಾಪ್ತೆ ಜತೆ ಲವ್‌ ಮ್ಯಾರೇಜ್‌

ಆರೋಪಿ ಉಮೇಶ್‌, ಅಹಮದಾಬಾದ್‌ನಗರದಲ್ಲಿ ಅಪ್ರಾಪ್ತೆಯನ್ನು(Minor Girl) ಪ್ರೀತಿಸಿ(Love) ವಿವಾಹವಾಗಿದ್ದ. ಈ ವೇಳೆ ಆತನನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಿ ಜೈಲಿಗಟ್ಟಲಾಗಿತ್ತು. ಬಳಿಕ ಜಾಮೀನು(Bail) ಪಡೆದು ಹೊರಬಂದಿದ್ದ ಆರೋಪಿ ಮತ್ತೊಮ್ಮೆ ವಿವಾಹವಾಗಿದ್ದ(Marriage). ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಸುಲಭವಾಗಿ ಹಣ ಸಂಪಾದಿಸಲು ಸರಗಳವು ಕೃತ್ಯಕ್ಕೆ ಇಳಿದಿದ್ದ. ಆರೋಪಿಯ ವಿರುದ್ಧ ರಾಜಸ್ಥಾನ, ಹೈದರಾಬಾದ್‌, ಗುಜರಾತ್‌, ಬೆಂಗಳೂರು ಸೇರಿದಂತೆ ವಿವಿಧೆಡೆ ಸರಗಳವು ಪ್ರಕರಣಗಳು ದಾಖಲಾಗಿವೆ.

Udupi ಚಿನ್ನ ಕದ್ದ 24ಗಂಟೆಯೊಳಗೆ ಕಂಬಿಯೊಳಗೆ ಕಪಿಸೂರ್ಯ!

ರೈಲಲ್ಲಿ ಬಂದು ವಿಮಾನದಲ್ಲಿ ಪರಾರಿ

ಆರೋಪಿಯು ಗುಜರಾತ್‌ನಿಂದ ರೈಲಿನಲ್ಲಿ ನಗರಕ್ಕೆ ಬರುತ್ತಿದ್ದ. ಬಳಿಕ ದ್ವಿಚಕ್ರ ವಾಹನ ಕಳವು ಮಾಡಿ ನಗರದ ವಿವಿಧೆಡೆ ಓಡಾಡುತ್ತಿದ್ದ. ಒಂಟಿಯಾಗಿ ಓಡಾಡುವ ಮಹಿಳೆಯರನ್ನು ಗುರಿಯಾಗಿಸಿಕೊಂಡು ಸರಗಳವು ಮಾಡಿ ವಿಮಾನದಲ್ಲಿ ಪರಾರಿಯಾಗುತ್ತಿದ್ದ. ಆರೋಪಿಯು ನಗರದಲ್ಲಿ ಮಹಿಳೆಯ ಸರ ಕಿತ್ತು ಪರಾರಿಯಾಗುವ ದೃಶ್ಯಾವಳಿ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಈ ವಿಡಿಯೋ ಪರಿಶೀಲನೆ ವೇಳೆ ಆರೋಪಿಯ ಚಹರೆಯ ಸುಳಿವು ಸಿಕ್ಕಿತ್ತು. ಇದರ ಆಧಾರದ ಮೇಲೆ ಆರೋಪಿಯನ್ನು ಬಂಧಿಸಿದ್ದಾರೆ.

ಸಿನಿಮಾ ನೋಡಿ ಬುಲೆಟ್ ಬೈಕ್‌ಗಳನ್ನು ಕದಿಯುತ್ತಿದ್ದ ಏಳು ಮಂದಿ ಬಂಧನ

ಬೆಂಗಳೂರು: ಅವರು ಚೆನ್ನಾಗಿ ಓದಿಕೊಂಡ ವಿದ್ಯಾವಂತರು. ಇಂಜಿನಿಯರಿಂಗ್ (Engineering) ಹಾಗೂ ಎಂಬಿಎ (MBA) ಪದವಿದರು. ಕೆಲಸಕ್ಕಾಗಿ ಸತತ ಪರಿಶ್ರಮ ಪಟ್ಟಿದ್ದರೆ ಒಂದೊಳ್ಳೆ ಕಂಪೆನಿಯಲ್ಲಿ ಕೆಲಸ‌‌ ಗಿಟ್ಟಿಸಿಕೊಂಡು ಕೈ-ತುಂಬಾ ಹಣ ಸಂಪಾದಿಸುತ್ತಿದ್ದರು. ಆದರೆ ಕಷ್ಟಪಡದೆ ಸುಲಭವಾಗಿ ಹಣ ಗಳಿಸುವ ಉಮೇದಿಗೆ ಬಿದ್ದ ಆ ಏಳು ವಿದ್ಯಾವಂತರು ಕಳ್ಳತನ‌ ಪ್ರಕರಣದಲ್ಲಿ (Theft Cases) ಕಂಬಿ ಹಿಂದೆ ಸರಿದಿದ್ದಾರೆ. ಸಿನಿಮಾಗಳಿಂದ ಪ್ರಭಾವಿತರಾಗಿ ಐಷಾರಾಮಿ ಲೈಫ್ ಲೀಡ್ ಮಾಡಲು ನಗರದಲ್ಲಿ ದುಬಾರಿ ಬೆಲೆಯ ಎನ್ ಫೀಲ್ಡ್ ಬೈಕ್‌ಗಳನ್ನು (Bullet Bikes) ಕಳ್ಳತನ ಮಾಡುತ್ತಿದ್ದ ಏಳು ಮಂದಿ ಅಂತರಾಜ್ಯ ಖದೀಮರನ್ನು ಬಂಧಿಸುವಲ್ಲಿ ಬನಶಂಕರಿ ಪೊಲೀಸರು (Police) ಯಶಸ್ವಿಯಾಗಿದ್ದಾರೆ. 
 

Follow Us:
Download App:
  • android
  • ios