Bengaluru Crime: ವೃದ್ಧ ದಂಪತಿ ಮೇಲೆ ಹಲ್ಲೆಗೈದು ಚಿನ್ನ ದೋಚಲೆತ್ನ: ಬೆನ್ನಟ್ಟಿ ಹಿಡಿದ ಜನರು

*  ಹಲ್ಲೆ ಯತ್ನಗೆ ಯತ್ನದ ವೇಳೆ ಆರೋಪಿಯ ತಲೆಗೆ ಚುಚ್ಚಿದ ಡ್ರ್ಯಾಗರ್‌
*  ಗಲಾಟೆ ಸದ್ದು ಕೇಳಿ ಬಂದ ಅಕ್ಕದ ಮನೆಯವರಿಂದ ಆರೋಪಿಯ ಸೆರೆ
* ಆರೋಪಿಯಿಂದ ಚಿನ್ನದ ಬಳೆ, ಮಾಂಗಲ್ಯ ಸರ ಸೇರಿದಂತೆ 70 ಗ್ರಾಂ ತೂಕದ ಚಿನ್ನಾಭರಣ ಜಪ್ತಿ
 

Accused Arrested For Robbery Case in Bengaluru grg

ಬೆಂಗಳೂರು(ಮಾ.15):  ಹಾಡಹಗಲೇ ಅಪಾರ್ಟ್‌ಮೆಂಟ್‌ಗೆ ನುಗ್ಗಿ ವೃದ್ಧ ದಂಪತಿಯ ಮೇಲೆ ಡ್ರಾಗರ್‌ನಿಂದ ಹಲ್ಲೆಗೈದು ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದ ಆರೋಪಿಯನ್ನು ಚೆನ್ನಮ್ಮನಕೆರೆ ಅಚ್ಚುಕಟ್ಟೆ ಠಾಣೆ ಪೊಲೀಸರು(Police) ಬಂಧಿಸಿದ್ದಾರೆ.

ಉತ್ತರಹಳ್ಳಿ ಸಪ್ತಗಿರಿ ಲೇಔಟ್‌ನ ಷಣ್ಮುಗಂ(56) ಬಂಧಿತ. ಆರೋಪಿಯಿಂದ(Accused) ಚಿನ್ನದ ಬಳೆ, ಮಾಂಗಲ್ಯ ಸರ ಸೇರಿದಂತೆ 70 ಗ್ರಾಂ ತೂಕದ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಆರೋಪಿಯು ಮಾ.12ರಂದು ಕತ್ರಿಗುಪ್ಪೆ ಕಾವೇರಿ ನಗರದ ಸ್ವಯಂ ಕೃಷಿ ಅಪಾರ್ಟ್‌ಮೆಂಟ್‌ ನಿವಾಸಿಗಳಾದ ವೃದ್ಧ ದಂಪತಿ ರಾಮಾನುಜಾಚಾರ್‌ ಮತ್ತು ಅವರ ಪತ್ನಿ ಲಕ್ಷ್ಮಿ ಅವರ ಮೇಲೆ ಡ್ರ್ಯಾಗರ್‌ನಿಂದ ಹಲ್ಲೆಗೈದು ಚಿನ್ನಾಭರಣ ಕಸಿದು ಪರಾರಿಯಾಗುವಾಗ ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

Theft Cases in Bengaluru: ಬೀಗ ಹಾಕಿದ್ದ ಮನೆಗಳಿಗೆ ಕನ್ನ ಹಾಕ್ತಿದ್ದ ಗ್ಯಾಂಗ್‌ ಅರೆಸ್ಟ್‌

ರಾಮಾನುಜಾಚಾರ್‌ ದಂಪತಿಗೆ ಆರೋಪಿ ಷಣ್ಮುಗಂ ಸುಮಾರು 40 ವರ್ಷಗಳಿಂದ ಪರಿಚಿತನಾಗಿದ್ದ. ಈ ವೃದ್ಧ ದಂಪತಿಯ ಮಕ್ಕಳು ನೆದರ್‌ಲ್ಯಾಂಡ್‌ನಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಹಾಗಾಗಿ ಅಪಾರ್ಟ್‌ಮೆಂಟ್‌ನಲ್ಲಿ ದಂಪತಿ ಮಾತ್ರ ಇದ್ದರು. ಈ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದ ಷಣ್ಮುಗಂ ಈ ವೃದ್ಧ ದಂಪತಿ ಕೊಲೆಗೈದು ನಗದು ಹಾಗೂ ಚಿನ್ನಾಭರಣ ದೋಚಲು ಸಂಚು ರೂಪಿಸಿದ್ದ. ಅದರಂತೆ ಮಾ.12ರಂದು ಮಧ್ಯಾಹ್ನ 3.30ಕ್ಕೆ ರಾಮಾನುಜಾಚಾರ್‌ ಅವರ ಮನೆಗೆ ಬಂದಿದ್ದಾನೆ.

ಈ ವೇಳೆ ಮನೆಯಲ್ಲಿ ಲಕ್ಷ್ಮಿ ಅವರು ಮಾತ್ರ ಇದ್ದರು. ಆಗ ಆರೋಪಿಯು ಡ್ರ್ಯಾಗರ್‌ ತೆಗೆದು ಲಕ್ಷ್ಮಿ ಅವರ ಹೊಟ್ಟೆ, ಕುತ್ತಿಗೆ, ಕೈಗೆ ಹಲ್ಲೆಗೈದು ಕೈಯಲ್ಲಿದ್ದ ಚಿನ್ನದ ಬಳೆ, ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರ ಕಿತ್ತುಕೊಂಡಿದ್ದಾನೆ. ಅಷ್ಟರಲ್ಲಿ ಹೊರಗಿನಿಂದ ಮನೆಗೆ ಬಂದ ರಾಮಾನುಜಾಚಾರ್‌ ಅವರ ಮೇಲೆ ಡ್ರ್ಯಾಗರ್‌ನಿಂದ ಹಲ್ಲೆ(Assault) ಮಾಡಲು ಮುಂದಾಗಿದ್ದಾನೆ. ಈ ವೇಳೆ ರಾಮಾನುಜಾಚಾರ್‌ ಅವರು ಆರೋಪಿಯ ಕೈಯನ್ನು ಬಿಗಿಯಾಗಿ ಹಿಡಿದುಕೊಂಡಿದ್ದರಿಂದ ಬಿಡಿಸಿಕೊಳ್ಳಲು ಎಳೆದಾಡುವಾಗ ಆರೋಪಿಯ ತಲೆಗೆ ಡ್ರ್ಯಾಗರ್‌ ಚುಚ್ಚಿಕೊಂಡಿತ್ತು.

ಈ ನಡುವೆ ಮನೆಯಲ್ಲಿ ಗಲಾಟೆ ಜೋರಾದ್ದರಿಂದ ಅಕ್ಕಪಕ್ಕದ ಮನೆಯವರು ಓಡಿ ಬಂದಿದ್ದಾರೆ. ಈ ವೇಳೆ ಗಾಬರಿಗೊಂಡು ತಪ್ಪಿಸಿಕೊಳ್ಳಲು ಮುಂದಾದ ಆರೋಪಿ ಷಣ್ಮುಗಂನನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಗಾಯಾಳು ವೃದ್ಧ ದಂಪತಿಯನ್ನು ಆಸ್ಪತ್ರೆ ಸಾಗಿಸಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಬಳಿಕ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಲಕ್ಷ್ಮಿ ಅವರಿಂದ ಕಿತ್ತುಕೊಂಡಿದ್ದ ಚಿನ್ನಾಭರಣ ಜಪ್ತಿ ಮಾಡಿದ್ದಾರೆ. ಗಾಯಗೊಂಡಿದ್ದ ಆರೋಪಿಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಈ ಸಂಬಂಧ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾಡಿಗೆ ನೆಪದಲ್ಲಿ ಕ್ಯಾಮರಾ ಎಗರಿಸುತ್ತಿದ್ದ ಕಿಡಿಗೇರಿ ಸೆರೆ

ಬೆಂಗಳೂರು: ಬಾಡಿಗೆಗೆ ಪಡೆಯುವ ನೆಪದಲ್ಲಿ ಕ್ಯಾಮರಾ (Camera) ಕಳವು ಮಾಡಿ, ಓಎಲ್‌ಎಕ್ಸ್‌ನಲ್ಲಿ (OLX) ಮಾರಾಟ ಮಾಡುತ್ತಿದ್ದ ಖತರ್ನಾಕ್‌ ಕಳ್ಳನೊಬ್ಬನನ್ನು ಚಂದ್ರಾಲೇಔಟ್‌ ಠಾಣೆ ಪೊಲೀಸರು (Police) ಬಂಧಿಸಿದ್ದಾರೆ (Arrest). ಮಾಲೂರು ಮೂಲದ ಪುರುಷೋತ್ತಮ್‌(26) ಬಂಧಿತ. ಆರೋಪಿ ನೀಡಿದ ಮಾಹಿತಿ ಮೇರೆಗೆ ಸುಮಾರು 3.65 ಲಕ್ಷ ರು. ಮೌಲ್ಯದ ಐದು ಕ್ಯಾಮರಾ ಹಾಗೂ ಲೆನ್ಸ್‌ಗಳನ್ನು ಜಪ್ತಿ ಮಾಡಲಾಗಿದೆ.

Bengaluru Crime: ಮಹಿಳೆಯರಿಗೆ ಅಶ್ಲೀಲ ಸಂದೇಶ ಕಳಿಸುತ್ತಿದ್ದ ಕಾಮುಕನ ಬಂಧನ

ಆರೋಪಿಯು ಫೆ.22ರಂದು ಕ್ಯಾಮರಾ ಬಾಡಿಗೆ ಪಡೆಯುವ ನೆಪದಲ್ಲಿ ಚಂದ್ರಾಲೇಔಟ್‌ನ ಚೇತನ್‌ ಎಂಬುವವರ ಇಂಪೈಂಟ್‌ ವಿಂಗ್ಸ್‌ ಸ್ಟುಡಿಯೋಗೆ ಬಂದಿದ್ದು, ಫೋಟೋ ಕ್ಲಾರಿಟಿ ನೋಡುವುದಾಗಿ ಸ್ಟುಡಿಯೋದಿಂದ ಆಚೆ ಬಂದು ಕ್ಯಾಮರಾ ಸಮೇತ ಪರಾರಿಯಾಗಿದ್ದ. ಈ ಸಂಬಂಧ ದಾಖಲಾಗಿದ್ದ ದೂರಿನ ಮೇರೆಗೆ ಕಾರ್ಯಾಚರಣೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಮಿಳುನಾಡು ಕೃಷ್ಣಗಿರಿ ಮೂಲದ ಆರೋಪಿ ಪುರುಷೋತ್ತಮ್‌ ಕ್ಯಾಮರಾಗಳ ಬಗ್ಗೆ ಆಸಕ್ತನಾಗಿದ್ದ. ಆರಂಭದಲ್ಲಿ ಕೃಷ್ಣಗಿರಿಯಲ್ಲಿ ಸ್ಟುಡಿಯೊಗಳಲ್ಲಿ ಕ್ಯಾಮರಾ ಬಾಡಿಗೆಗೆ ಪಡೆದು ಫೋಟೋ ತೆಗೆಯುತ್ತಿದ್ದ. 

ಬಳಿಕ ಸುಲಭವಾಗಿ ಹಣಗಳಿಸುವ ಉದ್ದೇಶದಿಂದ ಬಾಡಿಗೆ ನೆಪದಲ್ಲಿ ಕ್ಯಾಮರಾ ಪಡೆದು, ಓಎಲೆಕ್ಸ್‌ನಲ್ಲಿ ಕ್ಯಾಮರಾ ಮಾರಾಟ ಮಾಡುತ್ತಿದ್ದ. ಈ ಸಂಬಂಧ ಹಲವು ಬಾರಿ ಜೈಲು ಸೇರಿದ್ದ. ಹೀಗಾಗಿ ಮನೆಯವರು ಈತನನ್ನು ಮನೆಯಿಂದ ಹೊರಹಾಕಿದ್ದರು. ಹೀಗಾಗಿ ಆರೋಪಿ ಕೆಲ ವರ್ಷಗಳಿಂದ ಕೋಲಾರದ ಮಾಲೂರಿಗೆ ಬಂದು ಸೂಪರ್‌ ಮಾರ್ಕೆಟ್‌ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಎಂದು ವಿಚಾರಣೆಯಿಂದ ತಿಳಿದು ಬಂದಿದೆ.
 

Latest Videos
Follow Us:
Download App:
  • android
  • ios