ಯಶ್ಪಾಲ್ ಸುವರ್ಣ ಹತ್ಯೆ ಬೆದರಿಕೆ: ಆರೋಪಿ ಹೆಡೆಮುರಿ ಕಟ್ಟಿದ ಪೊಲೀಸರು
* ಬಜ್ಪೆಯ ನಿವಾಸಿ ಮಹಮ್ಮದ್ ಶಫಿ ಎಂಬಾತನ ಬಂಧನ
* ಹಿಜಾಬ್ ಧರಿಸುವುದರ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಯಶಪಾಲ್
* ಆರೋಪಪಿಗೆ ನ್ಯಾಯಾಲಯ 14 ದಿನ ನ್ಯಾಯಾಂಗ ಬಂಧನ
ಉಡುಪಿ(ಜೂ.19): ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ನಾಯಕ ಯಶ್ಪಾಲ್ ಸುವರ್ಣ ಅವರ ಹತ್ಯೆಗೆ ಪ್ರಚೋದನೆ, ಬೆದರಿಕೆ ಹಾಕಿದ ಮಂಗಳೂರಿನ ಬಜ್ಪೆಯ ನಿವಾಸಿ ಮಹಮ್ಮದ್ ಶಫಿ ಎಂಬಾತನನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. ಕಾಲೇಜಿನಲ್ಲಿ ಹಿಜಾಬ್ ಧರಿಸುವುದರ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಹಿನ್ನೆಲೆಯಲ್ಲಿ ಯಶಪಾಲ್ ಅವರಿಗೆ ಹತ್ಯೆ ಬೆದರಿಕೆ ಒಡ್ಡಲಾಗಿದೆ.
ಇನ್‌ಸ್ಟಾಗ್ರಾಂನಲ್ಲಿ ಮಾರಿಗುಡಿ-6 ಎಂಬ ಪೇಜ್‌ನಲ್ಲಿ ಯಶಪಾಲ್ ಸುವರ್ಣ ಮತ್ತು ಪ್ರಮೋದ್ ಮುತಾಲಿಕ್ ಅವರ ಹತ್ಯೆಗೆ 20 ಲಕ್ಷ ರು.ಗಳನ್ನು ಘೋಷಿಸsಲಾಗಿತ್ತು. ನಂತರ ಮತ್ತೆ ಅದೇ ಪೇಜ್‌ನಲ್ಲಿ ಯಶ್ಪಾಲ್ ಅವರಿಗೆ ಅಸಭ್ಯ ಶಬ್ದಗಳನ್ನು ಬಳಸಿ, ಶ್ರದ್ಧಾಂಜಲಿ ಬ್ಯಾನರ್‌ಗಳನ್ನು ಸಿದ್ಧ ಮಾಡಿಟ್ಟುಕೊಳ್ಳುವಂತೆ ಬೆದರಿಕೆ ಹಾಕಲಾಗಿತ್ತು.
ಇನ್ಸ್ಟಾಗ್ರಾಮ್‌ನಲ್ಲಿ ಯಶ್ಪಾಲ್ ಸುವರ್ಣ, ಮುತಾಲಿಕ್ ಹತ್ಯೆಗೆ ಪ್ರಚೋದನೆ: 20 ಲಕ್ಷ ಬಹುಮಾನ
ಈ ಹಿನ್ನೆಲೆಯಲ್ಲಿ ಯಶ್ಪಾಲ್ ಅವರಿಗೆ ಗನ್ ಮ್ಯಾನ್ ಒದಗಿಸಲಾಗಿತ್ತು. ಹಿಂದೂಪರ ಮತ್ತು ಮೊಗವೀರ ಸಂಘಟನೆಗಳು ಆರೋಪಿಯನ್ನು ಬಂಧಿಸುವಂತೆ ಪೊಲೀಸರ ಮೇಲೆ ಭಾರಿ ಒತ್ತಡ ಹಾಕಿದ್ದವು. ಈ ಬೆದರಿಕೆ ಪೋಸ್ವ್‌ಗಳ ಬೆನ್ನು ಹತ್ತಿದ ಪೊಲೀಸರು, ಅವುಗಳನ್ನು ಸಾಮಾಜಿಕ ಜಾಲತಾಣಕ್ಕೆ ಅಪ್‌ಲೋಡ್ ಮಾಡಲಾದ ಕಂಪ್ಯೂಟರಿನ ಐಪಿ ಅಡ್ರೆಸ್ ಪತ್ತೆ ಮಾಡಿ, ಆರೋಪಿಯನ್ನು ತಲುಪುವಲ್ಲಿ ಯಶಸ್ವಿಯಾಗಿದ್ದಾರೆ. ಕಾಪು ಠಾಣಾಧಿಕಾರಿ ಶ್ರೀಶೈಲ ಆರ್. ಮುರಗೋಡ ಅವರು ಬಂಧಿಸಿದ್ದಾರೆ. ಆತನಿಗೆ ನ್ಯಾಯಾಲಯ 14 ದಿನ ನ್ಯಾಯಾಂಗ ಬಂಧನ ವಿಧಿಸಿದೆ.
ಆರೋಪಿ ಶಫಿ ಸುರತ್ಕಲ್‌ನ ಲಾಜೆಸ್ಟಿಕ್ ಸಂಸ್ಥೆಯೊಂದರಲ್ಲಿ ಲಾರಿಗಳ ಸೂಪರ್ ವೈಸರ್ ಕೆಲಸ ಮಾಡುತ್ತಿದ್ದಾನೆ. ಈತನ ಜೊತೆ ದುಬೈಯಲ್ಲಿರುವ ಮಹಮ್ಮದ್ ಆಸಿಫ್ ಅಲಿಯಾಸ್ ಆಶಿಕ್ ಎಂಬಾತ ಕೈಜೋಡಿಸಿರುವುದು ಕೂಡ ಪತ್ತೆಯಾಗಿದೆ.