ಬೆಂಗಳೂರು(ಜೂ.05):  ಒಂಟಿ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ ಸೈಕೋಪಾತ್‌ನನ್ನ ನಗರದ ಕೋರಮಂಗಲ ಪೊಲೀಸರು ಇಂದು(ಶನಿವಾರ) ಬಂಧಿಸಿದ್ದಾರೆ. ಅರುಣ್ ಕುಮಾರ್ ಅಲಿಯಾಸ್ ಸೈಕೋ ಬಂಧಿತ ಅರೋಪಿಯಾಗಿದ್ದಾನೆ.

ನೈಟ್ ಟೈಂನಲ್ಲಿ ಒಂಟಿಯಾಗಿ ಓಡಾಡುವ ಹೆಣ್ಣು ಮಕ್ಕಳನ್ನೇ ಟಾರ್ಗೆಟ್ ಮಾಡುತ್ತಿದ್ದ ಈತ ಮಹಿಳೆಯರನ್ನು ಸ್ಪರ್ಶಿಸಿ ಪರಾರಿಯಾಗುತ್ತಿದ್ದನಂತೆ. ಮಹಿಳೆಯ ಹಿಂಬದಿಗೆ ಮುಟ್ಟಿ ಬೈಕ್‌ನಲ್ಲಿ ಕ್ಷಣಾರ್ಧದಲ್ಲಿ ಎಸ್ಕೇಪ್ ಆಗುತ್ತಿದ್ದ ಬಂಧಿತ ಅರೋಪಿ.

ಅಪ್ರಾಪ್ತೆ ಮೇಲೆ ಅತ್ಯಾಚಾರ: ಸೀರಿಯಲ್ ನಟ ಅರೆಸ್ಟ್ 

ವಿಚಿತ್ರ ಸೈಕೋ ಪಾತ್ ಅಸಭ್ಯ ವರ್ತನೆಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದವು. ಬಂಧಿತ ಆರೋಪಿ ಅರುಣ್ ಕುಮಾರ್ Dunzo ಬೈಕ್ ಮೂಲಕ ಓಡಾಡ್ತಿದ್ದನು. ಹೀಗಾಗಿ ಪೊಲೀಸರು ಕಾರ್ಯಾಚರಣೆ ನಡೆಸಿ ಸೈಕೋ ಪಾತ್ ಅರುಣ್ ಕುಮಾರ್‌ನನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.