ಟಿವಿ ನಟ ಪರ್ಲ್ ವಿ ಪುರಿಯನ್ನು ಅತ್ಯಾಚಾರ ಮತ್ತು ಕಿರುಕುಳ ಆರೋಪದ ಮೇಲೆ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಮುಂಬೈನಲ್ಲಿ ಬಾಲಕಿಯೊಬ್ಬಳು ಮತ್ತು ಆಕೆಯ ಕುಟುಂಬವು ಅತ್ಯಾಚಾರ ಮತ್ತು ಕಿರುಕುಳ ಪ್ರಕರಣವನ್ನು ದಾಖಲಿಸಿದ ನಂತರ ಪರ್ಲ್‌ನನ್ನು ಬಂಧಿಸಲಾಗಿದೆ. ಈಗ ಆತ ಪೊಲೀಸ್ ವಶದಲ್ಲಿದ್ದಾನೆ.

ಪರ್ಲ್ ವಿ ಪುರಿಯನ್ನು ವಾಸೈ ಪೊಲೀಸರು ಬಂಧಿಸಿದ್ದಾರೆ. ಮುಂಬೈ ಪೊಲೀಸರ ಡಿಸಿಪಿ ಅಭಿಷೇಕ್ ತ್ರಿಮುಖೆ, ಪರ್ಲ್ ಅವರನ್ನು ವಾಲೀವ್ ಪೊಲೀಸ್ ಠಾಣೆ ಬಂಧಿಸಿದೆ ಎಂದು ಹೇಳಿದ್ದಾರೆ. ಶುಕ್ರವಾರ ರಾತ್ರಿ ಪುರಿಯನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

ರಾಜಮೌಳಿ ನಿರ್ದೇಶನದಲ್ಲಿ ಕೊರೋನಾ ಕರ್ತವ್ಯದಲ್ಲಿರೋ ಪೊಲೀಸರ ಕುರಿತ ಶಾರ್ಟ್ ಫಿಲ್ಮ್...

ಟಿವಿ ಜೋಡಿಯ ನಿಜ ಜೀವನದ ಕಾಂಟ್ರವರ್ಸಿ ಸುದ್ದಿಯಾದ ಬೆನ್ನಲ್ಲಿಯೇ ಇದೀಗ ಮತ್ತೊಂದು ಆರೋಪ ಕೇಳಿ ಬಂದಿದೆ. ಅಪ್ರಾಪ್ತೆ ಮೇಲೆ ಅತ್ಯಾಚಾರ ಮಾಡಿದ ಹಿನ್ನೆಲೆಯಲ್ಲಿ ಈಗ ಆರೋಪ ಎದುರಿಸುತ್ತಿದ್ದಾರೆ ನಟ.