Asianet Suvarna News Asianet Suvarna News

ಬೆಂಗಳೂರು: ರೈಲಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಕಿಡಿಗೇಡಿ ಬಂಧನ

ಆರೋಪಿಯಿಂದ 1.27 ಲಕ್ಷ ರು ಮೌಲ್ಯದ 8 ಕೆಜಿ ಗಾಂಜಾ, ಮೊಬೈಲ್‌ ಹಾಗೂ ಲ್ಯಾಪ್‌ಟಾಪ್‌ ಜಪ್ತಿ 

Accused Arrested For Marijuana Transport in Railway at Bengaluru grg
Author
First Published Dec 1, 2022, 7:30 AM IST

ಬೆಂಗಳೂರು(ಡಿ.01):  ರೈಲಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಕಿಡಿಗೇಡಿಯೊಬ್ಬನ್ನು ಆಂಧ್ರಪ್ರದೇಶದ ಹಿಂದೂಪುರದ ಗಡಿಯಿಂದ ಬೆನ್ನು ಹತ್ತಿ ಕೊನೆಗೆ ನಗರದಲ್ಲಿ ರೈಲ್ವೆ ಪೊಲೀಸರು ಬಂಧಿಸಿದ್ದಾರೆ.

ಒಡಿಶಾ ರಾಜ್ಯದ ಕಾಲಕನ್ಹು ಪಾಣಿಗ್ರಾಹಿ ಬಂಧಿತನಾಗಿದ್ದು, ಆರೋಪಿಯಿಂದ 1.27 ಲಕ್ಷ ರು ಮೌಲ್ಯದ 8 ಕೆಜಿ ಗಾಂಜಾ, ಮೊಬೈಲ್‌ ಹಾಗೂ ಲ್ಯಾಪ್‌ಟಾಪ್‌ ಜಪ್ತಿ ಮಾಡಲಾಗಿದೆ. 

ಸಿಗರೇಟ್ Vs ಗಾಂಜಾ: ಯಾವುದು ತುಂಬಾ ಅಪಾಯಕಾರಿ? ಸಂಶೋಧನೆ ಹೇಳೋದೇನು?

ಒಡಿಶಾದಿಂದ ಬೆಂಗಳೂರಿಗೆ ಬಂದ ಪ್ರಶಾಂತಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಆರೋಪಿ ಗಾಂಜಾ ಸಾಗಿಸುತ್ತಿದ್ದ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಆಂಧ್ರಪ್ರದೇಶ ರೈಲಿನಲ್ಲಿ ತಪಾಸಣೆ ಆರಂಭಿಸಿದ್ದಾರೆ. ಆಗ ರೈಲಿನಲ್ಲಿ ಕಳ್ಳಾಟವಾಡಿದ ಆರೋಪಿ ಕೊನೆಗೂ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 

Follow Us:
Download App:
  • android
  • ios