Asianet Suvarna News Asianet Suvarna News

ಸಿಂಧನೂರು: ಮದ್ಯಪಾನಕ್ಕೆ ಅವಕಾಶ ನೀಡದಿದ್ದಕ್ಕೆ ಪಿಸ್ತೂಲ್‌ನಿಂದ ಫೈರ್‌, ವ್ಯಕ್ತಿ ಬಂಧನ

ಪಿಸ್ತೂಲ್‌ನಿಂದ ಶೂಟ್‌ ಮಾಡುವುದಾಗಿ ಬೆದರಿಕೆ ಹಾಕಿ, ಕಾರ್‌ನಲ್ಲಿದ್ದ ರಿವಾಲ್ವಾರ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದ ಬಂಧಿತ ಹನುಮಂತಪ್ಪ 

Accused Arrested for Firing in Family Restaurant at Sindhanur in Raichur grg
Author
First Published Nov 30, 2022, 2:15 PM IST

ಸಿಂಧನೂರು(ನ.30):  ಫ್ಯಾಮಿಲಿ ರೆಸ್ಟೋರೆಂಟ್‌ನಲ್ಲಿ ಮದ್ಯಪಾನ ಮಾಡುವುದಕ್ಕೆ ಅವಕಾಶ ನೀಡದಿರುವುದಕ್ಕೆ ವ್ಯಕ್ತಿಯೋರ್ವ ರಿವಾಲ್ವಾರ್‌ನಿಂದ ಗುಂಡು ಹಾರಿಸಿರುವ ಘಟನೆ ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ಶ್ರೀಪುರಂಜಂಕ್ಷನ್‌ ಬಳಿಯಿರುವ ಸಿರಿ ಫ್ಯಾಮಿಲಿ ರೆಸ್ಟೋರೆಂಟ್‌ ಬಳಿ ಸೋಮವಾರ ತಡರಾತ್ರಿ ಈ ಘಟನೆ ಜರುಗಿದೆ. ಕಲಬುರಗಿ ಮೂಲದ ಗುಂಡಪ್ಪ ಅಲಿಯಾಸ್‌ ಹನುಮಂತಪ್ಪ ಜೇಮಶೆಟ್ಟಿಫೈರಿಂಗ್‌ ಮಾಡಿದ ವ್ಯಕ್ತಿಯೆಂದು ಗುರುತಿಸಲಾಗಿದೆ.

ಕೊಪ್ಪಳ ಜಿಲ್ಲೆಯ ಸಿದ್ದಾಪುರ ಗ್ರಾಮಕ್ಕೆ ಹನುಮಂತಪ್ಪ ತಮ್ಮ ಕುಟುಂಬದ ಸಂಬಂಧಿಕರೊಡನೆ ಸಮಾರಂಭಕ್ಕೆಂದು ತೆರಳಿದ್ದರು. ಸಮಾರಂಭ ಮುಗಿಸಿಕೊಂಡು ವಾಪಸ್‌ 2 ಕಾರ್‌ನಲ್ಲಿ 8 ಜನರೊಂದಿಗೆ ಕಲಬುರಗಿಗೆ ಮರಳುವಾಗ ಮಾರ್ಗ ಮಧ್ಯ ಶ್ರೀಪುರಂಜಂಕ್ಷನ್‌ ಬಳಿ ಸಿರಿ ಫ್ಯಾಮಿಲಿ ರೆಸ್ಟೋರೆಂಟ್‌ನಲ್ಲಿ ಊಟಕ್ಕಾಗಿ ನಿಲ್ಲಿಸಿದ್ದಾರೆ. ಹೊಟೇಲ್‌ನಲ್ಲಿ ಹನುಮಂತಪ್ಪ ಮದ್ಯ ಬಾಟಲಿ ಹಾಗೂ ಧೂಮಪಾನ ಮಾಡುತ್ತಿದ್ದರು. ಆಗ ಹೋಟೆಲ್‌ನಲ್ಲಿ ಕೆಲಸ ಮಾಡುವ ಸರ್ವರ್‌ ಇಲ್ಲಿ ಮದ್ಯಪಾನ ಹಾಗೂ ಧೂಮಪಾನಕ್ಕೆ ಅವಕಾಶವಿಲ್ಲವೆಂದು ಹೇಳಿದ್ದಾನೆ. ನಂತರ ಸರ್ವರ್‌ನೊಂದಿಗೆ ತೀವ್ರ ಮಾತಿನ ಚಕಮಕಿ ನಡೆಸಿದ ಹನುಮಂತಪ್ಪ ಪಿಸ್ತೂಲ್‌ನಿಂದ ಶೂಟ್‌ ಮಾಡುವುದಾಗಿ ಬೆದರಿಕೆ ಹಾಕಿ, ಕಾರ್‌ನಲ್ಲಿದ್ದ ರಿವಾಲ್ವಾರ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ನಡೆದಿದೆ.

Chikkaballapur: ಪೊಲೀಸರ ಮೇಲೇ ಗುಂಡು ಹಾರಿಸಿ ಮನೆ ದರೋಡೆ!

ಈ ಘಟನೆಯಿಂದ ಗಾಬರಿಗೊಂಡು ಸ್ಥಳದಲ್ಲಿದ್ದ ಕೆಲವರು ಓಡಿ ಹೋಗಿದ್ದಾರೆ. ಅದೇ ರೀತಿ ಫೈರಿಂಗ್‌ ಮಾಡಿದ ಹನುಮಂತಪ್ಪ ಸಹ ಸ್ಥಳದಿಂದ ಪರಾರಿಯಾಗಿದ್ದನು. ಈ ವಿಷಯ ತಿಳಿಯುತ್ತಿದ್ದಂತೆ ಸಿಂಧನೂರು ಗ್ರಾಮೀಣ ಪೊಲೀಸರು ಕಾರು ಮತ್ತು ವ್ಯಕ್ತಿಯ ಮಾಹಿತಿ ಪಡೆದು ಬಂಧಿಸಿದ್ದಾರೆ.
 

Follow Us:
Download App:
  • android
  • ios