ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಲಿಗೆ ಮಾಡುತ್ತಿದ್ದ ಖತರ್ನಾಕ್‌ ಖದೀಮನ ಬಂಧನ

*  ಆರೋಪಿ ಸೇರಿದಂತೆ ಬಾಲಾಪರಾ​ಧಿಯನ್ನು ಬಂಧಿಸಿದ ನೆಲಮಂಗಲ ಗ್ರಾಮಾಂತರ ಪೊಲೀಸರು
*  ರಸ್ತೆ ಬದಿ ವಿಶ್ರಾಂತಿಗಾಗಿ ನಿಲ್ಲುವ ಲಾರಿ, ಇತರೆ ಗೂಡ್ಸ್ ವಾಹನಗಳೇ ಇವರ ಟಾರ್ಗೆಟ್‌ 
*  ಬಂಧಿತರಿಂದ ಕದ್ದ 5 ಲಕ್ಷ ಮೌಲ್ಯದ 22 ಮೊಬೈಲ್‌ಗಳು ಮತ್ತು 7 ದ್ವಿಚಕ್ರ ವಾಹನ ಜಪ್ತಿ 
 

Accused Arrested For Extortion in National Highway in Bengaluru grg

ಬೆಂಗಳೂರು(ಜು.08): ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಲಿಗೆ ಮಾಡುತ್ತಿದ್ದ ಖತರ್ನಾಕ್‌ ಆರೋಪಿ ಸೇರಿದಂತೆ ಬಾಲಾಪರಾ​ಧಿಯನ್ನು ನೆಲಮಂಗಲ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು ನಗರ ಜಿಲ್ಲೆಯ ಬಾಗಲಗುಂಟೆಯ ಚಂದನ್‌.ಜೆ.(23)ಮತ್ತೋರ್ವ ಬಾಲಾಪರಾದಿ ಬಂಧನವಾಗಿದ್ದು, ರಸ್ತೆ ಬದಿ ವಿಶ್ರಾಂತಿಗಾಗಿ ನಿಲ್ಲುವ ಲಾರಿ, ಇತರೆ ಗೂಡ್ಸ್ ವಾಹನಗಳೇ ಇವರ ಟಾರ್ಗೆಟ್‌ ಆಗಿದ್ದು, ವಾಹನ ಚಾಲಕರಿಗೆ ಮತ್ತು ಕ್ಲೀನರ್‌ಗಳಿಗೆ ಪೆಪ್ಪರ್‌ ಸ್ಪ್ರೆ ಮಾಡಿ ಮೊಬೈಲ್‌ ಮತ್ತು ಹಣವನ್ನು ಸುಲಿಗೆ ಮಾಡುತ್ತಿದ್ದರು ಇದಲ್ಲದೆ ರಸ್ತೆ, ಫ್ಲೈಒವರ್‌ ಬಳಿ ನಿಲ್ಲಿಸಿದ ದ್ವಿಚಕ್ರ ವಾಹನಗಳ ಹ್ಯಾಂಡ್‌ಲಾಕ್‌ ಮುರಿದು ಬೈಕ್‌ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದರು ಎನ್ನಲಾಗಿದೆ.

ಆಸ್ತಿಗಾಗಿ ಪ್ರೇಮಿ ಜೊತೆ ಸೇರಿ ಸಾಕಿದವರ ಕತ್ತು ಸೀಳಿದ ದತ್ತು ಪುತ್ರಿ, ಏಕಕಾಲದಲ್ಲಿ ಇಬ್ಬರನ್ನು ಪ್ರೀತಿಸ್ತಿದ್ಲು ಹುಡುಗಿ!

ನೆಲಮಂಗಲ ಗ್ರಾಮಾಂತರ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿ ಚಂದನ್‌ ಸೇರಿದಂತೆ ಬಾಲಾಪರಾದಿಯನ್ನು ಬಂಧಿಸಿದ್ದು, ಬಂಧಿತರಿಂದ ಕದ್ದ ಸುಮಾರು 4.5 ಲಕ್ಷ ಮೌಲ್ಯದ 22 ಮೊಬೈಲ್‌ಗಳು ಮತ್ತು 7 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿದ್ದಾರೆ.

ಬಂಧಿತ ಆರೋಪಿ ಚಂದನ್‌.ಜೆ. ಮೇಲೆ ಈಗಾಗಲೇ ತುಮಕೂರು ಗ್ರಾಮಾಂತರ ಪೊಲೀಸ್‌ ಠಾಣೆ ಹಾಗೂ ತಲಘಟ್ಟಪುರ ಪೊಲೀಸ್‌ ಠಾಣೆಯಲ್ಲಿ ವಿವಿಧ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ನೆಲಮಂಗಲ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

Latest Videos
Follow Us:
Download App:
  • android
  • ios