ಆಸ್ತಿಗಾಗಿ ಪ್ರೇಮಿ ಜೊತೆ ಸೇರಿ ಸಾಕಿದವರ ಕತ್ತು ಸೀಳಿದ ದತ್ತು ಪುತ್ರಿ, ಏಕಕಾಲದಲ್ಲಿ ಇಬ್ಬರನ್ನು ಪ್ರೀತಿಸ್ತಿದ್ಲು ಹುಡುಗಿ!
ಕಳೆದ ಸೋಮವಾರ ಕಾನ್ಪುರದಲ್ಲಿ ನಡೆದ ಡಬಲ್ ಮರ್ಡರ್ ಕೇಸ್ ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. ಅದರಲ್ಲೂ ಪ್ರಕರಣದ ಕುರಿತಾಗಿ ತನಿಖೆ ನಡೆಸುತ್ತಿರುವ ಪೊಲೀಸರು, ಆರೋಪಿಗಳ ಹೇಳಿರುವ ಸತ್ಯವನ್ನು ಕೇಳಿ ದಂಗಾಗಿ ಹೋಗಿದ್ದಾರೆ. ಆಸ್ತಿಗಾಗಿ ತನ್ನನ್ನು ಸಾಕಿದ ಪೋಷಕರನ್ನು ದತ್ತು ಪುತ್ರಿ ಸಾಯಿಸಿದ್ದಲ್ಲದೆ, ಆಕೆ ಏಕಕಾಲದಲ್ಲಿ ಇಬ್ಬರನ್ನು ಪ್ರೀತಿ ಮಾಡುತ್ತಿದ್ದಳು ಎನ್ನುವುದು ಬಹಿರಂಗವಾಗಿದೆ.
ಕಾನ್ಪುರ (ಜುಲೈ 7): ಕಾನ್ಪುರದ (Kanpur) ಡಬಲ್ ಮರ್ಡರ್ (Double Murder) ಕೇಸ್‌ನ ತನಿಖೆ ನಡೆಸುತ್ತಿರುವ ಪೊಲೀಸರಿಗೆ ತನಿಖೆಯ ವೇಳೆ ಸಾಕಷ್ಟು ವಿಚಾರ ಗೊತ್ತಾಗಿದೆ. 60 ವರ್ಷದ ಮುನ್ನಾ ಲಾಲ್ ಉತ್ತಮ್ (Munna Lal Uttam) ಹಾಗೂ 55 ವರ್ಷದ ರಾಜ್‌ದೇವಿಯನ್ನು (Raj Devi) ಬರ್ರಾ-2ನ (Barra) ಇಡಬ್ಲ್ಯುಎಸ್ ಕಾಲೋನಿಯಲ್ಲಿ ಸೋಮವಾರ ರಾತ್ರಿ ಕತ್ತು ಸೀಳಿ ಹತ್ಯೆ ಮಾಡಿದ ಪ್ರಕರಣದಲ್ಲಿ ರೋಹಿತ್ ಉತ್ತಮ್ (Rohit Uttam) ಎನ್ನುವ ವ್ಯಕ್ತಿಯನ್ನು ಬಂಧಿಸಿದ್ದಾರೆ.
ರೋಹಿತ್‌ನನ್ನು ಬಂಧಿಸಿ ವಿಚಾರಣೆ ನಡೆಸಿದ ವೇಳೆ ಸಾಕಷ್ಟು ಅಚ್ಚರಿಯ ಮಾಹಿತಿಗಳು ಬೆಳಕಿಗೆ ಬಂದಿವೆ. ಅದರಲ್ಲೂ ರೋಹಿತ್ ಹೇಳಿದ ಮಾತುಗಳನ್ನು ಕೇಳಿ ತನಿಖೆ ಮಾಡುತ್ತಿರುವ ಪೊಲೀಸರೇ ಅಚ್ಚರಿ ಪಟ್ಟಿದ್ದಾರೆ. ರೋಹಿತ್ ಅವರ ಸಹೋದರ ರಾಹುಲ್ ಉತ್ತಮ್ ಕೂಡ ಈ ಕೊಲೆಯಲ್ಲಿ ಭಾಗಿಯಾಗಿರುವುದು ಈ ವೇಳೆ ತಿಳಿದು ಬಂದಿದೆ. ರಾಹುಲ್ ಉತ್ತಮ್, ಗೋವಾದ ಮಿಲಿಟರಿ ಇಂಟಲಿಜೆನ್ಸ್‌ಅನ್ನು ಸಹಾಯಕ ಅಂಬ್ಯುಲೆನ್ಸ್ ಆಪರೇಟರ್ ಆಗಿದ್ದಾನೆ.
ಡಬಲ್ ಮರ್ಡರ್ ಸೂತ್ರಧಾರಿಯಾಗಿರುವ ಪುತ್ರಿ ಕೋಮಲ್ (Komal), ಮುನ್ನಾ ಲಾಲ್ ಉತ್ತಮ್ ಹಾಗೂ ರಾಜ್‌ದೇವಿಯ ದತ್ತು ಪುತ್ರಿ. ಈಕೆ ಏಕಕಾಲದಲ್ಲಿ ಸಹೋದರರಾದ ರಾಹುಲ್ ಹಾಗೂ ರೋಹಿತ್ ಇಬ್ಬರನ್ನೂ ಪ್ರೀತಿ ಮಾಡುತ್ತಿದ್ದಳು ಎನ್ನುವ ಮಾಹಿತಿ ಸಿಕ್ಕಿದೆ. ರಾಹುಲ್ ಉತ್ತಮ್‌ರನ್ನು ಬಂಧಿಸುವ ಸಲುವಾಗಿ ಕಾನ್ಪುರ ಪೊಲೀಸರು ಮಿಲಿಟರಿ ಇಂಟಲಿಜೆನ್ಸ್ ಕೇಂದ್ರ ಕಚೇರಿಯಾಗಿರುವ ಮುಂಬೈ ಹಾಗೂ ರಾಹುಲ್ ಕೆಲಸ ಮಾಡುತ್ತಿದ್ದ ಸ್ಥಳವಾದ ಗೋವಾಗೆ ತೆರಳಿದ್ದರೆ, ಬುಧವಾರ ರಾತ್ರಿ, ರೋಹಿತ್ ಹಾಗೂ ಕೋಮಲ್‌ರನ್ನು ಬಂಧಿಸಿ ಜೈಲಿಗೆ ಕಳಿಸಿದ್ದಾರೆ. ದತ್ತುಪುತ್ರಿ ಕೋಮಲ್ ಅಲಿಯಾಸ್ ಆಕಾಂಕ್ಷಾ ಮೂಲತಃ ಇಟಾವಾಹ್‌ನ ಬಕೆವಾರ್ ಪೊಲೀಸ್ ಠಾಣೆಯ (ಪ್ರಸ್ತುತ ಬರ್ರಾ ಕರ್ರಾಹಿ) ನಿವಾಸಿ ಎಂದು ಪೊಲೀಸ್ ಕಮಿಷನರ್ ವಿಜಯ್ ಸಿಂಗ್ ಮೀನಾ ತಿಳಿಸಿದ್ದಾರೆ. ಇಬ್ಬರ ವಿಚಾರಣೆ ವೇಳೆ ರೋಹಿತ್ ಸಹೋದರ ರಾಹುಲ್ ಜೊತೆಯೂ ಕೋಮಲ್ ಪ್ರೇಮ ಪ್ರಕರಣ ಬೆಳಕಿಗೆ ಬಂದಿದೆ. ಮೂವರೂ ಆಸ್ತಿಯ ದುರಾಸೆಯಲ್ಲಿ ಕೊಲೆಗೆ ಸಂಚು ರೂಪಿಸಿದ್ದರು ಎನ್ನುವ ಮಾಹಿತಿ ಸಿಕ್ಕಿದೆ.
ರಾಹುಲ್ ಮೊದಲ ಪ್ರೇಮಿ, ರೋಹಿತ್ 2ನೇ ಪ್ರೇಮಿ: ಕೋಮಲ್ ಮತ್ತು ರಾಹುಲ್ ಮತ್ತು ರೋಹಿತ್ ಪರಸ್ಪರ ಸಂಬಂಧಿಗಳು ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಇವರಿಬ್ಬರು ಕೋಮಲ್, ಚಿಕ್ಕಮ್ಮನ ಹತ್ತಿರದ ಸಂಬಂಧಿಗಳಾಗಿದ್ದು, ವರ್ಷಗಟ್ಟಲೆ ಪರಿಚಿತರಾಗಿದ್ದರು. ಮೊದಲು ಕೋಮಲ್, ರಾಹುಲ್‌ನನ್ನು ಪ್ರೀತಿ ಮಾಡುತ್ತಿದ್ದರೆ, ಬಳಿಕ ಅವನ ಸಹೋದರ ರೋಹಿತ್ ಜೊತೆಗೂ ಪ್ರೇಮ ಸಲ್ಲಾಪ ನಡೆಸಿದ್ದಳು ಕಾನ್ಪುರದಲ್ಲಿ ರೋಹಿತ್ ಇ-ರಿಕ್ವಾ ಓಡಿಸುತ್ತಿದ್ದ. ಸಮಯ ಸಿಕ್ಕಾಗ ಕೋಮಲ್ ಜೊತೆ ಸುತ್ತಾಟ ಮಾಡುತ್ತಿದ್ದ. ರೋಹಿತ್ ಜತೆ ಕೋಮಲ್ ಸುತ್ತಾಡುತ್ತಿದ್ದ ವಿಚಾರ ಮುನ್ನಾ ಲಾಲ್ ಹಾಗೂ ರಾಜ್ ದೇವಿಗೆ ಗೊತ್ತಾಗಿ ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.
ತನ್ನನ್ನು ಪ್ರೀತಿ ಮಾಡುತ್ತಿದ್ದ ಇಬ್ಬರಿಗೂ ಸಾಕು ತಂದೆಯ ಆಸ್ತಿಯ ಬಗ್ಗೆ ಕೋಮಲ್ ತಿಳಿಸಿದ್ದಳು. ಎರಡು ಮನೆ, ಎರಡು ಸೈಟ್, ಒಂದು ಅಂಗಡಿ, ನಾಲ್ಕು ಬಿಘಾ ಕೃಷಿ ಭೂಮಿ ಇರುವ ಬಗ್ಗೆ ಮಾಹಿತಿ ನೀಡಿದ್ದರು. ಇದರ ಬೆನ್ನಲ್ಲಿಯೇ ಸಹೋದರರಲ್ಲಿ ಆಸ್ತಿಯನ್ನು ಲಪಟಾಯಿಸುವ ಆಸೆ ಹುಟ್ಟಿಕೊಂಡಿತ್ತು. ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ ಕಾರಣಕ್ಕೆ ಕೋಮಲ್ ಗೆ ಪೋಷಕರ ಮೇಲೆ ದ್ವೇಷ ಹೆಚ್ಚಾಯಿತು. ಸುಮಾರು ನಾಲ್ಕು ತಿಂಗಳ ಹಿಂದೆ ಕೋಮಲ್ ಮತ್ತು ರಾಹುಲ್ ಅವರು ಮುನ್ನಾ ಲಾಲ್ ಮತ್ತು ರಾಜದೇವಿ ಹತ್ಯೆಗೆ ಸಂಚು ರೂಪಿಸಿದ್ದರು. ಸಹೋದರ ರೋಹಿತ್ ಮೂಲಕ ಈ ಕೆಲಸವನ್ನು ಮಾಡಿದ್ದಾರೆ.
Mandya: ಅಕ್ರಮ ಸಂಬಂಧ ಪ್ರಶ್ನಿಸಿದ ಪತ್ನಿಯ ಕೊಲೆಗೈದ ಪಾಪಿ ಪತಿ!
ಕೊಲೆಗೂ ಮುನ್ನ ಕೋಮಲ್-ರೋಹಿತ್ ನಡುವೆ ಸೆಕ್ಸ್: ಪೊಲೀಸರ ವಿಚಾರಣೆ ವೇಳೆ ರೋಹಿತ್ ಘಟನೆಗೂ ಮುನ್ನ ಕೋಮಲ್ ಜತೆ ಸೆಕ್ಸ್ ಮಾಡಿದ್ದಾಗಿ ತಿಳಿಸಿದ್ದಾನೆ. ಆ ನಂತರ ಮುನ್ನಾ ಲಾಲ್ ಮತ್ತು ರಾಜದೇವಿಯ ಕುತ್ತಿಗೆಯನ್ನು ಮಾಂಸ ಕಡಿಯುವ ಕತ್ತಿಯಿಂದ ಸೀಳಿದ್ದ, ಆ ಬಳಿಕ ಕತ್ತಿಯನ್ನು ಬ್ಯಾಗ್‌ನಲ್ಲಿ ಹಾಕಿ ತೆಗೆದುಕೊಂಡು ಹೋಗಿದ್ದ. ಪ್ರಸ್ತುತ ಪೊಲೀಸರು ಇದನ್ನು ವಶಪಡಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಅದಕ್ಕೂ ಮುನ್ನ ಜ್ಯೂಸ್‌ನಲ್ಲಿ ನಿದ್ರೆ ಮಾತ್ರೆಯನ್ನು ಬೆರೆಸಿ ಕೋಮಲ್ ತನ್ನ ತಂದೆತಾಯಿಗೆ ನೀಡಿದ್ದಳು ಎನ್ನುವ ಮಾಹಿತಿಯೂ ಇದೆ.
ನಾಲ್ವರು ಹಂತಕರಿಂದ ನಾಸಿಕ್‌ನಲ್ಲಿ ಮುಸ್ಲಿಂ ಧರ್ಮಗುರುವಿನ ಹತ್ಯೆ!
ಪ್ರಿಯಕರನ ಜೊತೆ ಸೇರಿ ದತ್ತು ಪುತ್ರಿ ತನ್ನ ತಂದೆತಾಯಿಯನ್ನು ಕೊಲೆ ಮಾಡಿದ್ದ ಕೋಮ,ಲ್, ಪೊಲೀಸರ ದಾರಿ ತಪ್ಪಿಸಿ ಅಪರಿಚಿತ ಯುವಕರ ಮೇಲೆ ಕೊಲೆ ಆರೋಪವನ್ನು ಮಾಡಿದ್ದಳು. ಸಾಕ್ಷ್ಯಾಧಾರಗಳ ಆಧಾರದ ಮೇಲೆ ಮಂಗಳವಾರ ಮಧ್ಯಾಹ್ನ ಪೊಲೀಸರು ವಿಚಾರಣೆ ನಡೆಸಿದಾಗ ಸಂಜೆ ವೇಳೆಗೆ ಸತ್ಯಾಂಶ ತಿಳಿದು ಬಂದಿದೆ. ಆಸ್ತಿ ಕಬಳಿಸಲು ಪೋಷಕರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.