* ದ್ವಿಚಕ್ರ ವಾಹನ ಕದಿಯುವ ಕೆಟ್ಟ ಚಾಳಿ* ರಾಜಾಜಿನಗರ ಪೊಲೀಸರಿಂದ ಆರೋಪಿ ಬಂಧನ* ಕೇಸ್‌ಇಲ್ಲದ ಬೈಕ್ ಕಳವು
ಬೆಂಗಳೂರು(ಜ.24): ನಕಲಿ ಕೀ ಬಳಸಿ ದ್ವಿಚಕ್ರ ವಾಹನ ಕದ್ದು ಹೆಂಡತಿ ಸೇರಿದಂತೆ ಸಂಬಂಧಿಕರಿಗೆ ಉಡುಗೊರೆ(Gift) ನೀಡಿದ್ದ ಚಾಲಾಕಿ ಚೋರನನ್ನು ರಾಜಾಜಿನಗರ ಠಾಣೆ ಪೊಲೀಸರು(Police) ಬಂಧಿಸಿದ್ದಾರೆ.
ರಾಜಾಜಿನಗರದ ಭರತ್(32) ಬಂಧಿತ(Arrest). ಆರೋಪಿಯಿಂದ(Accused) ಏಳು ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ. ರಾಜಾಜಿನಗರ ನಿವಾಸಿ ನರೇಶ್‌ಎಂಬುವವರು ಜ.16ರಂದು ರಾತ್ರಿ 10 ಗಂಟೆಗೆ ತಮ್ಮ ಮನೆ ಮುಂದೆ ದ್ವಿಚಕ್ರ ವಾಹನ ನಿಲುಗಡೆ ಮಾಡಿದ್ದರು. ಮಾರನೇ ದಿನ ಎದ್ದು ನೋಡಿದಾಗ ದ್ವಿಚಕ್ರ ವಾಹನ ಇರಲಿಲ್ಲ. ಈ ಸಂಬಂಧ ನೀಡಿದ್ದ ದೂರಿನ ಮೇರೆಗೆ ಸಿಸಿಟಿವಿ(CCTV) ಕ್ಯಾಮರಾ ದೃಶ್ಯಾವಳಿ ಆಧರಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
Roberrt ಸಿನಿಮಾ ನಿರ್ಮಾಪಕ ಉಮಾಪತಿ ಹತ್ಯೆಗೆ ಸಂಚು ಪ್ರಕರಣ: ಮತ್ತಿಬ್ಬರ ಬಂಧನ
ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡಿರುವ ಆರೋಪಿಯು ವಿವಾಹಿತನಾಗಿದ್ದು, ಗುತ್ತಿಗೆದಾರರೊಬ್ಬರ ಬಳಿ ಕೆಲಸ ಮಾಡುತ್ತಿದ್ದ. ಆರೋಪಿಯು ದ್ವಿಚಕ್ರ ವಾಹನ ಕದಿಯುವ(Theft) ಕೆಟ್ಟಚಾಳಿ ಮೈಗೂಡಿಸಿಕೊಂಡಿದ್ದ. ಕದ್ದ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದರೆ, ಪೊಲೀಸರಿಗೆ ಸಿಕ್ಕಿ ಬೀಳುವ ಭಯದಿಂದ ಹೆಂಡತಿ ಹಾಗೂ ಸಂಬಂಧಿಕರಿಗೆ ಉಡುಗೊರೆ ನೀಡುತ್ತಿದ್ದ. ಆರೋಪಿ ಸಹ ಮೂರು ದ್ವಿಚಕ್ರ ವಾಹನ ಇರಿಸಿಕೊಂಡು ಓಡಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯ ಬಂಧನದಿಂದ ರಾಜಾಜಿನಗರ, ಬಸವೇಶ್ವರನಗರ ಹಾಗೂ ಕಲಾಸಿಪಾಳ್ಯ ಪೊಲೀಸ್‌ಠಾಣೆ ವ್ಯಾಪ್ತಿಯಲ್ಲಿ ಕಳುವಾಗಿದ್ದ ಏಳು ವಾಹನ ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕೇಸ್ ಇಲ್ಲದ ಬೈಕ್ ಕಳವು
ಆರೋಪಿ ಭರತ್‌ರಾತ್ರಿ ವೇಳೆ ನಗರದ ವಿವಿಧೆಡೆ ಮನೆ ಎದುರು ನಿಲುಗಡೆ ಮಾಡುತ್ತಿದ್ದ ದ್ವಿಚಕ್ರ ವಾಹನಗಳ ಗುರುತಿಸುತ್ತಿದ್ದ. ಆ ದ್ವಿಚಕ್ರ ವಾಹನಗಳ(Bike) ನೋಂದಣಿ ಸಂಖ್ಯೆ ಬರೆದುಕೊಂಡು ಬಳಿಕ ಬೆಂಗಳೂರು ಟ್ರಾಫಿಕ್ ಪೊಲೀಸ್(ಬಿಟಿಪಿ) ಆ್ಯಪ್‌ನಲ್ಲಿ ಹಾಕಿ ಆ ದ್ವಿಚಕ್ರ ವಾಹನದ ವಿರುದ್ಧ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆಯೇ ಎಂಬುದನ್ನು ಪರಿಶೀಲಿಸುತ್ತಿದ್ದ. ಪ್ರಕರಣಗಳು ಇದ್ದಲ್ಲಿ ಆ ದ್ವಿಚಕ್ರ ವಾಹನ ಕದಿಯುತ್ತಿರಲಿಲ್ಲ. ಏಕೆಂದರೆ, ಪೊಲೀಸ್‌ತಪಾಸಣೆ ವೇಳೆ ಸಿಕ್ಕಿಬಿದ್ದರೆ, ದಾಖಲೆ ಕೇಳಿದರೆ ಸಿಕ್ಕಿಬೀಳುವ ಭೀತಿಯಲ್ಲಿ ಆ ವಾಹನ ಕಳವು ಮಾಡುತ್ತಿರಲಿಲ್ಲ. ಯಾವುದೇ ಪ್ರಕರಣ ಬಾಕಿ ಇಲ್ಲದ ದ್ವಿಚಕ್ರ ವಾಹನಗಳನ್ನು ಕದಿಯುತ್ತಿದ್ದ ಎಂದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಲ್ಲೆ ಪ್ರಕರಣ: ಮೂವರ ಬಂಧನ
ಹೂವಿನಹಡಗಲಿ: ಬಿಜೆಪಿ ಕಾರ್ಯಕರ್ತರ(BJP Activists) ನಡುವೆ ನಡೆದ ಹಲ್ಲೆ(Assault) ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು, ಪ್ರತಿ ದೂರು ದಾಖಲಾಗಿವೆ. ಈ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಹಲ್ಲೆಗೆ ಒಳಗಾಗಿರುವ ದೇವಗೊಂಡನಹಳ್ಳಿ ಗೋಣಿ ಸ್ವಾಮಿ ತಾಯಿ ಮೇಟಿ ಅಂಜಿನಮ್ಮ ಅವರು ನನ್ನ ಮಗನನ್ನು ಕೊಲೆ ಮಾಡಲು ಬಂದಿದ್ದಾರೆ ಎಂದು ಆರೋಪಿಸಿ ಶನಿವಾರ ತಾವರಾರಯನಾಯ್ಕ ಸೇರಿದಂತೆ 7 ಜನರ ವಿರುದ್ಧ ದೂರು ದಾಖಲಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ತಾವರಾರಯನಾಯ್ಕ ಕೂಡಾ ಆರೋಪಿ ಗೋಣಿಸ್ವಾಮಿ ಮೇಲೆ ಜಾತಿ ನಿಂದನೆ ದೂರು ದಾಖಲಿಸಿದ್ದಾರೆ.
OG Kuppam Gang: ಗ್ರಾಹಕರ ಗಮನ ಬೇರೆಡೆ ಸೆಳೆದು ದರೋಡೆ: ಇಬ್ಬರು ಖದೀಮರು ಅಂದರ್
ಅಂಜಿನಮ್ಮ ನೀಡಿರುವ ದೂರಿನ್ವಯ ಈಗಾಗಲೇ 8 ಆರೋಪಿಗಳಲ್ಲಿ ತಾವರಾರಯನಾಯ್ಕ, ಟಿ.ಎಂ. ರುದ್ರೇಶ ಮತ್ತು ಮಹಾಂತೇಶ ಅವರನ್ನು ಬಂಧಿಸಲಾಗಿದೆ. ಉಳಿದವರು ತಲೆ ಮರೆಸಿಕೊಂಡಿದ್ದಾರೆ. ಆರೋಪಿ ತಾವರಾರಯನಾಯ್ಕ ಅವರು ಜಾತಿ ನಿಂದನೆ ಕೇಸ್ ದಾಖಲಿಸಿದ್ದಾರೆ. ಈ ಕುರಿತು ತನಿಖೆ ಮುಂದುವರಿದಿದೆ.
ಕಾಲೇಜು ಬಳಿ ಡ್ರಗ್ಸ್ ಮಾರಾಟ: ವಿದೇಶಿಗ ಸೆರೆ
ಯಲಹಂಕ: ಕಾಲೇಜುವೊಂದರ ಬಳಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ವಿದೇಶಿ ಪ್ರಜೆಯೊಬ್ಬನನ್ನು ಮಾದಕ ದ್ರವ್ಯ ನಿಗ್ರಹ ವಿಶೇಷ ದಳ ಬಂಧಿಸಿದೆ. ನೈಜೀರಿಯಾ ಮೂಲದ ವನೂಕ್ ಅಕ್ಬೂಯ್ ಬಂಧಿತ. ಆರೋಪಿಯಿಂದ 3 ಲಕ್ಷ ರು. ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
