Asianet Suvarna News Asianet Suvarna News

ಲವ್ ಮಾಡ್ತಿದ್ದ ಹುಡುಗಿ ಜತೆ ಮದುವೆ ಮಾಡಿಕೊಳ್ಳಲು ಕೆಲಸ ಮಾಡ್ತಿದ್ದ ಎಟಿಎಂಗೇ ಕನ್ನ: ಖದೀಮ ಅರೆಸ್ಟ್‌

ಆರೋಪಿಯನ್ನ ಅರೆಸ್ಟ್ ಮಾಡಿ ಹಣ ವಸೂಲಿ ಮಾಡಿದ ವಿಲ್ಸನ್ ಗಾರ್ಡನ್ ಪೊಲೀಸರು

Accused Arrested For ATM Robbery Case in Bengaluru grg
Author
First Published Nov 29, 2022, 11:30 AM IST

ಬೆಂಗಳೂರು(ನ.29):  ಲವ್ ಮಾಡುತ್ತಿದ್ದ ಹುಡುಗಿ ಜೊತೆಗೆ ಮದುವೆ ಮಾಡಿಕೊಳ್ಳಲು ಕೆಲಸ ಮಾಡ್ತಿದ್ದ ಎಟಿಎಂನಲ್ಲೇ ಹಣ ದೋಚಿದ್ದ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಅಸ್ಸಾಂ ಮೂಲದ ದಿಪೋಂಕರ್ ನೋಮೋಸುದರ್ ಬಂಧಿತ ಅರೋಪಿಯಾಗಿದ್ದಾನೆ. 

ಕದ್ದ ಹಣದಲ್ಲಿ ಮೊದಲು ಒಂದು ಒಂದು ಹೋಟೆಲ್ ತೆರೆಯಲು ಪ್ಲಾನ್ ಮಾಡಿದ್ದ ಖದೀಮ. ಒಂದು ವರ್ಷದ ನಂತರ ಪ್ರೀತಿಸಿದ್ದ ಯುವತಿಯ ಮದುವೆ ಮಾಡಿಕೊಳ್ಳಲು ಪ್ಲಾನ್ ಮಾಡಿದ್ದನಂತೆ.  ಆರೋಪಿಯ ಕಳ್ಳತನ ದೃಶ್ಯ  ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಹಣ ಹಾಕಲು ಬರ್ತಿದ್ದವರ ಜೊತೆಗೆ ಸಲುಗೆ ಇಂದ ಇರ್ತಿದ್ದನಂತೆ ಆರೋಪಿ. ಹಣ ಹಾಕುವವರು ಬಳಸುತ್ತಿದ್ದ ಐಡಿ ಪಾಸ್ವರ್ಡ್ ನೋಡಿಕೊಂಡಿದ್ದ, ಅದೇ ಐಡಿ ಮತ್ತು ಪಾಸ್ವರ್ಡ್ ಮೂಲಕ ವಿಲ್ಸನ್ ಗಾರ್ಡನ್‌ನ ತಾನು ಕೆಲಸ ಮಾಡ್ತಿದ್ದ ಎಟಿಎಂ ದೋಚಿದ್ದ. 

ಬೆಂಗಳೂರು: ಬೈಕ್‌ ಕಳ್ಳರ ಸುಳಿವು ಕೊಟ್ಟ ಜಿಪಿಎಸ್‌..!

ಸುಮಾರು 19 ಲಕ್ಷಕ್ಕೂ ಹೆಚ್ಚು ಹಣವನ್ನ ಆರೋಪಿ ದೋಚಿದ್ದ, ಸದ್ಯ ಆರೋಪಿಯನ್ನ ಅರೆಸ್ಟ್ ಮಾಡಿ ಹಣ ವಸೂಲಿ ಮಾಡಿದ ವಿಲ್ಸನ್ ಗಾರ್ಡನ್ ಪೊಲೀಸರು. ಬಂಧಿತ ಆರೋಪಿಯಿಂದ  14,20,500 ಹಣವನ್ನ ಜಪ್ತಿ ಮಾಡಿಕೊಳ್ಳಲಾಗಿದೆ.
 

Follow Us:
Download App:
  • android
  • ios