Tumakuru: ಎಸ್ಪಿ ಕಾರ್‌ ಶಾಕ್‌ಗೆ ಎಸ್‌ಐ ಅಲರ್ಟ್‌: ರಾತ್ರೋರಾತ್ರಿ ಆರೋಪಿ ಸೆರೆ

*   ದೂರುದಾರನಿಗೇ ಎಸ್‌ಪಿ ಕಾರು ಕೊಟ್ಟ ಪ್ರಕರಣ
*   ಎಸ್‌ಪಿ ರಾಹುಲ್‌ ಕುಮಾರ್‌ ಶಹಾಪುರ್‌ ವಾಡ್‌ ನಡೆಗೆ ಸಾರ್ವಜನಿಕರಿಂದ ಪ್ರಶಂಸೆ
*   ಆರೋಪಿಯನ್ನ ಬಂಧಿಸಲು ಮೀನಮೇಷ ಎಣಿಸುತ್ತಿದ್ದ ಪೊಲೀಸರು

Accused Arrested after SP Instruction in Tumakuru grg

ತುಮಕೂರು(ಜ.15):  ಪ್ರಕರಣವೊಂದರ ಸಂಬಂಧ ಪೊಲೀಸ್‌(Police) ಠಾಣೆಗೆ ಹೋಗಲು ದೂರುದಾರನ್ನೊಬ್ಬನಿಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯೇ ಕಾರು ಕೊಟ್ಟು ಕಳುಹಿಸಿ ದಂಡಿನಶಿವರ ಎಸ್‌ಐ ಹಾಗೂ ಸಿಪಿಐಗೆ ಶಾಕ್‌ ಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ಳಂಬೆಳಗ್ಗೆಯೇ ದಂಡಿನಶಿವರ ಪೊಲೀಸರು ಆರೋಪಿಯನ್ನು(Accused) ಬಂಧಿಸಿದ್ದಾರೆ.

ಘಟನೆ ನಡೆದು ನಾಲ್ಕು ತಿಂಗಳಾದರೂ ಚಂದನ್‌ನನ್ನು ಬಂಧಿಸಲು(Arrest) ದಂಡಿನಶಿವರ ಪೊಲೀಸರು ಮೀನಮೇಷ ಎಣಿಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಮೈಸೂರಿನಲ್ಲಿದ್ದ(Mysuru) ಆರೋಪಿ ಚಂದನ್‌ನನ್ನು ಬಂಧಿಸಿ ತುರುವೇಕೆರೆ ನ್ಯಾಯಾಲಯಕ್ಕೆ(Court) ಒಪ್ಪಿಸಿ ನ್ಯಾಯಾಲಯದ ಸೂಚನೆಯಂತೆ ತಿಪಟೂರು ಜೈಲಿಗೆ(Jail) ಕಳುಹಿಸಲಾಗಿದೆ.

Sexual Harassment : ಬಾಲಕಿಯನ್ನು ತೋಟಕ್ಕೆ ಕರೆದೊಯ್ದ ತುಮಕೂರು ಮುದುಕನಿಗೆ ಮಹಿಳೆಯರಿಂದ ಗೂಸಾ!

ತುರುವೇಕೆರೆ ತಾಲೂಕು ದಂಡಿನಶಿವರ ಪೊಲೀಸ್‌ ಠಾಣಾ ವ್ಯಾಪ್ತಿಯ ಕೋಡಿಹಳ್ಳಿಯಲ್ಲಿ ನಡೆದಿದ್ದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗೇಂದ್ರಪ್ಪ ಎಂಬಾತನ ಮೇಲೆ ಚಂದನ್‌ ಹಾಗೂ ಶಿವಪ್ರಕಾಶ್‌ ಅವರು ಹಲ್ಲೆ(Assault) ನಡೆಸಿದ್ದರು. ಈ ಸಂಬಂಧ ಕೊಲೆ ಯತ್ನ(Attempt to Murder) ಪ್ರಕರಣ ದಾಖಲಾಗಿತ್ತು. ಆದರೆ ಶಿವಪ್ರಕಾಶ್‌ ಎಂಬಾತ ನ್ಯಾಯಾಲಯದಿಂದ ಜಾಮೀನು(Bail) ಪಡೆದಿದ್ದ. ಆದರೆ ಮತ್ತೊಬ್ಬ ಆರೋಪಿ ಚಂದನ್‌ ಜಾಮೀನು ಪಡೆದಿರಲಿಲ್ಲ.

ಹಲ್ಲೆಗೊಳಗಾಗಿದ್ದ ನಾಗೇಂದ್ರಪ್ಪ ಪ್ರತಿ ದಿನ ಪೊಲೀಸ್‌ ಠಾಣೆಗೆ(Police Station) ಹೋಗಿ ಚಂದನ್‌ನನ್ನು ಬಂಧಿಸುವಂತೆ ಮನವಿ ಮಾಡಿದರೂ ದಂಡಿನಶಿವರ ಪಿಎಸ್‌ಐ ಶಿವಲಿಂಗಯ್ಯ ಹಾಗೂ ಸಿಪಿಐ ನವೀನ್‌ ಕ್ರಮ ತೆಗೆದುಕೊಂಡಿರಲಿಲ್ಲ. ಗುರುವಾರ ಬೆಳಿಗ್ಗೆ ಮತ್ತೆ ದಂಡಿನಶಿವರ ಪೊಲೀಸ್‌ ಠಾಣೆಗೆ ದೂರುದಾರ ನಾಗೇಂದ್ರಪ್ಪ ಹೋದಾಗ ಸಿಟ್ಟಾದ ಪಿಎಸ್‌ಐ ಶಿವಲಿಂಗಯ್ಯ ಅವರು ಬಾಡಿಗೆ ಕಾರು ತೆಗೆದುಕೊಂಡು ಬಾ ಎಂದು ಬೇಜವಾಬ್ದಾರಿ ಉತ್ತರ ನೀಡಿದ್ದರು. ಈ ಬಗ್ಗೆ ನಾಗೇಂದ್ರ ಎಸ್ಪಿಗೆ ದೂರು ನೀಡಿದ್ದರು. ಕೂಡಲೇ ಎಸ್ಪಿ ಡ್ರೈವರ್‌ನೊಂದಿಗೆ ತಮ್ಮ ಕಾರನ್ನೇ ದೂರುದಾರನಿಗೆ ಕಳುಹಿಸಿಕೊಟ್ಟಿದ್ದರು.

ದಂಡಿನಶಿವರ ಪೊಲೀಸ್‌ ಠಾಣೆ ಮುಂದೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ(District Superintendent of Police) ಕಾರಿನಲ್ಲಿ ದೂರುದಾರನೇ ಬಂದಿಳಿಯುತ್ತಿದ್ದಂತೆ ತೀವ್ರ ಮುಜುಗರಕ್ಕೊಳಪಟ್ಟ ಪೊಲೀಸರು ರಾತ್ರೋರಾತ್ರಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ತಿಪಟೂರು ಜೈಲಿಗೆ ಕಳುಹಿಸಿದ್ದಾರೆ. ದೂರುದಾರನಿಗೆ ತಮ್ಮ ಕಾರನ್ನು ಕೊಟ್ಟು ಕಳುಹಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಹುಲ್‌ ಕುಮಾರ್‌ ಶಹಾಪುರ್‌ ವಾಡ್‌ ಅವರ ನಡೆಗೆ ಸಾರ್ವಜನಿಕರಿಂದ ಪ್ರಶಂಸೆ ಸಿಕ್ಕಿದೆ.

ಅಂಗಡಿಗೆ ಬೆಂಕಿ ಹಚ್ಚಿದ ಆರೋಪಿಯ ಬಂಧನ

ಉಪ್ಪಿನಂಗಡಿ(Uppinangady): ಕಳೆದ ಮಾರ್ಚ್‌ನಲ್ಲಿ ಇಳಂತಿಲ ಗ್ರಾಮದ ನೇಜಿಗಾರ್‌ ಎಂಬಲ್ಲಿ ಅಂಗಡಿಗೆ ಬೆಂಕಿ(Fire) ಹಚ್ಚಿದ ಪ್ರಕರಣವನ್ನು ಉಪ್ಪಿನಂಗಡಿ ಪೊಲೀಸರು ಬೇಧಿಸಿದ್ದು, ಇಳಂತಿಲದ ಅಂಡೆತ್ತಡ್ಕದಲ್ಲಿ ತಲವಾರು ದಾಳಿ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಜಯರಾಮ ಗೌಡ(21) ಎಂಬಾತನೇ ಈ ಪ್ರಕರಣದ ಆರೋಪಿಯಾಗಿದ್ದಾನೆ.

 

Tumakuru SP ದೂರುದಾರನನ್ನು ತಮ್ಮದೆ ಕಾರಿನಲ್ಲಿ ಕಳುಹಿಸಿ ಎಸ್‌ಐಗೆ ಶಾಕ್ ಕೊಟ್ಟ ಎಸ್‌ಪಿ

ಕಳೆದ ಡಿಸೆಂಬರ್‌ನಲ್ಲಿ ಅಂಡೆತ್ತಡ್ಕದಲ್ಲಿ ಮುಸ್ಲಿಂ ಯುವಕರ(Muslim Youth) ಮೇಲೆ ನಡೆದ ತಲವಾರು ದಾಳಿಗೆ ಸಂಬಂಧಿಸಿ ಪ್ರಮುಖ ಆರೋಪಿಯಾಗಿರುವ ಜಯರಾಮ ಗೌಡ ಎಂಬಾತ ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್‌ ಬಂಧನಕ್ಕೊಳಗಾಗಿ ನ್ಯಾಯಾಂಗ ಬಂಧನದಲ್ಲಿದ್ದಾನೆ. ಈತನನ್ನು ಹೆಚ್ಚಿನ ವಿಚಾರಣೆಗಾಗಿ ಉಪ್ಪಿನಂಗಡಿ ಪೊಲೀಸರು ಜ.11ರಂದು ವಿಚಾರಣೆ ಕಸ್ಟಡಿಗೆ ತೆಗೆದುಕೊಂಡಿದ್ದು, ಈ ಸಂದರ್ಭ ಈತ ಅಂಗಡಿಗೆ ಬೆಂಕಿ ಹಚ್ಚಿರುವ ಪ್ರಕರಣವನ್ನು ಬಾಯ್ಬಿಟ್ಟಿದ್ದಾನೆ.

ಇದೀಗ ಈ ಪ್ರಕರಣದಲ್ಲಿ ಜಯರಾಮ ಗೌಡ ಸೇರಿದಂತೆ ಇನ್ನೋರ್ವ ಆರೋಪಿಯಿದ್ದು, ಆತ ತಲೆಮರೆಸಿಕೊಂಡಿದ್ದಾನೆ. ಜಯರಾಮ ಗೌಡನನ್ನು ಗುರುವಾರ ಅಂಗಡಿಯ ಬಳಿ ಕರೆ ತಂದ ಪೊಲೀಸರು ಸ್ಥಳ ಮಹಜರು ನಡೆಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
 


 

Latest Videos
Follow Us:
Download App:
  • android
  • ios