Sexual Harassment : ಬಾಲಕಿಯನ್ನು ತೋಟಕ್ಕೆ ಕರೆದೊಯ್ದ ತುಮಕೂರು ಮುದುಕನಿಗೆ ಮಹಿಳೆಯರಿಂದ ಗೂಸಾ!

* 2.5 ವರ್ಷದ ಮಗುವಿನ ಮೇಲೆ ವೃದ್ಧನಿಂದ ಅತ್ಯಾಚಾರ ಯತ್ನ 

* ಕಾಮ‌ಪಿಶಾಚಿ ವೃದ್ಧನಿಗೆ ಮಹಿಳೆಯರಿಂದ ಗೂಸಾ. 

* 60 ವರ್ಷದ ವಿನ್ಸನ್ ಜಾನ್ಸನ್  ಎಂಬಾತನಿಂದ ಕೃತ್ಯ 

* ತುಮಕೂರು ಗ್ರಾಮಾಂತರದ  ಬೇತ್ತಲೂರು ಗ್ರಾಮದಲ್ಲಿ ಘಟನೆ

60 Year Old Man try to Rape  2.5 year Minor Girl Tumkur mah

ತುಮಕೂರು(ಜ. 05)  ಬಿಹಾರ (Bihar)ಮತ್ತು ಉತ್ತರ ಪ್ರದೇಶದಲ್ಲಿ (Uttar Pradesh) ಕೇಳಿ ಬರುತ್ತಿದ್ದ ಘಟನೆಗಳು ಇದೀಗ ತುಮಕೂರಿನಿಂದ (Tumkur) ವರದಿಯಾಗಿವೆ.  2.5 ವರ್ಷದ ಮಗುವಿನ ಮೇಲೆ ವೃದ್ಧ ಅತ್ಯಾಚಾರ (Rape) ಯತ್ನ  ನಡೆಸಿದ್ದು ಕಾಮ‌ಪಿಶಾಚಿ ವೃದ್ಧನಿಗೆ ಮಹಿಳೆಯರು  (Woman)ಸರಿಯಾಗಿ ಗೂಸಾ ನೀಡಿದ್ದಾರೆ. 60 ವರ್ಷದ ವಿನ್ಸನ್ ಜಾನ್ಸನ್ ಕೃತ್ಯ ಎಸಗಲು ಮುಂದಾಗಿದ್ದ. ತುಮಕೂರು ಗ್ರಾಮಾಂತರದ  ಬೇತ್ತಲೂರು ಗ್ರಾಮದಲ್ಲಿ ಘಟನೆ ನಡೆದಿದೆ.

ಮಗುವನ್ನು ತೋಟಕ್ಕೆ ಕೆರೆದೊಯ್ದು ಅತ್ಯಾಚಾರಕ್ಕೆ ಯತ್ನ ನಡೆಸಿದ್ದಾನೆ.  ಕಾಮುಕನ ಕೃತ್ಯ ನೋಡಿದ ಗ್ರಾಮದ ನಿವಾಸಿಗಳು ರಕ್ಷಣೆ ಮಾಡಿದ್ದಾರೆ. ಮಹಿಳೆಯರೇ ಸೇರಿಕೊಂಡು ಸರಿಯಾಗಿ ಧರ್ಮದೇಟು ನೀಡಿದ್ದಾರೆ.  ಈ ಹಿಂದೆ ಕೂಡ ಮಹಿಳೆಯರೊಂದಿಗೆ ಈ ವೃದ್ಧ ಅಸಭ್ಯವಾಗಿ ವರ್ತಿಸಿದ್ದ. 

Sexual Harassment : ಅಪ್ರಾಪ್ತೆ ಮೇಲೆ ಎರಗಿದ ಪಾದ್ರಿ, ವಿಡಿಯೋ ಮಾಡಿಕೊಂಡ ಪತ್ನಿ!

ಕಿರಾತಕ ಅಜ್ಜಿಯ ಬಾಯ್ ಫ್ರೆಂಡ್:  ತಾತನ (Grand Father) ವಯಸ್ಸಿನ ವ್ಯಕ್ತಿ ಪುಟ್ಟ ಕಂದಮ್ಮನ ಮೇಲೆ ಎರಗಿದ್ದಾನೆ .  ವಿಚಿತ್ರ ಎಂದರೆ ಈ ವ್ಯಕ್ತಿ ದೌರ್ಜನ್ಯಕ್ಕೆ ಒಳಗಾದ ಬಾಲಕಿಯ ಅಜ್ಜಿಯ (Boy Friend) ಬಾಯ್ ಫ್ರೆಂಡ್!

ತಮ್ಮ ಮದುವೆಗೆ (Marriage) ಈ ಮಗುವೇ ಅಡ್ಡಿ ಎಂದು ಭಾವಿಸಿ ಇಂಥ ಹೀನ ಕೃತ್ಯ ಮಾಡಿದ್ದಾನೆ.  ಪ್ರಕರಣಕ್ಕೆ ಸಂಬಂಧಿಸಿ ಅಜ್ಜಿಯನ್ನು ಬಂಧಿಸಲಾಗಿದೆ. 50 ವರ್ಷದ ಗೆಳತಿಯ ಮೂರು ವರ್ಷದ ಮೊಮ್ಮಗಳನ್ನು ಮೇಲೆ 55 ವರ್ಷದ ವ್ಯಕ್ತಿ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣ ನೋಯ್ಡಾದಿಂದ ವರದಿಯಾಗಿತ್ತು.. 

ಡಿಸೆಂಬರ್ 25 ನಾಪತ್ತೆಯಾಗಿದ್ದ ಮಗುವಿನ ಶವ ಡಿಸೆಂಬರ್ 28 ರಂದು ಇಲಾಹಬಾಸ್ ಗ್ರಾಮದ ಬಳಿ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಪತ್ತೆಯಾಗುತ್ತದೆ.  ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಶಂಕೆಯ ನಂತರ ಪೊಲೀಸರು ತನಿಖೆಯನ್ನು ಪ್ರಾರಂಭಿಸುತ್ತಾರೆ.  ಲೈಂಗಿಕ ದೌರ್ಜನ್ಯ ನಡೆದಿರುವುದು ಪಕ್ಕಾ ಆಗುತ್ತದೆ. ಬಾಲಕಿಯ ಶವವವನ್ನು ಅಡಗಿಸಲು ಬೇರೆ ಬೇರೆ ರೀತಿ ಯತ್ನಿಸಿರುವುದು ಬೆಳಕಿಗೆ ಬರುತ್ತದೆ. 

ಕೆಲಸಕ್ಕಿದ್ದ ವೃದ್ಧನ ಕೊಲೆ: ಅಪ್ರಾಪ್ತ ಮಗಳಿಗೆ (Girl) ಕಿರುಕುಳ (Sexual harassment) ನೀಡುತ್ತಿದ್ದ ಎಂಬ ಶಂಕೆ ಮೇಲೆ ದಂಪತಿ (Couple)ಮನೆ ಕೆಲಸಕ್ಕೆ ಇದ್ದ  70 ವರ್ಷದ  ವ್ಯಕ್ತಿಯನ್ನು ಹತ್ಯೆ (Murder)ಮಾಡಿದದ್ದಾರೆ. ಬರ್ಬರವಾಗಿ ಕೊಂದು ಹಾಕಿದ್ದರು.
 
ಹತ್ಯೆ ಮಾಡಿ ಶವವವನ್ನು ಮಂಖುರ್ದ್‌ ರೈಲ್ವೆ (Indian Railways) ನಿಲ್ದಾಣದ ಬಳಿ ಹಾಕಿದ್ದಾರೆ.  ಕೊಲೆಯಾಗುವುದಕ್ಕೆ ಎಂಟು ದಿನಗಳ ಮುಂಚೆ ವೃದ್ಧ ಮನೆಕೆಲಸಕ್ಕೆ ಇವರ ಬಳಿ ಸೇರಿಕೊಂಡಿದ್ದ. ಪೊಲೀಸರು ಹೇಳುವಂತೆ ಕೊಲೆಯಾದ ವ್ಯಕ್ತಿ ಮತ್ತು ಕೊಲೆ ಆರೋಪ ಹೊತ್ತಿರುವ ದಂಪತಿ  ಬಿಹಾರ ಮೂಲದವರಾಗಿದ್ದು, ಪರಸ್ಪರ ಮೊದಲಿನಿಂದ ಪರಿಚಯಸ್ಥರು.

ಏನಾಯಿತು?  ರಾತ್ರಿ 10 ಗಂಟೆ ಸುಮಾರಿಗೆ ದಂಪತಿ ಮಗಳು ಮಲಗಿದ್ದಳು. ಕೆಲಸಕ್ಕೆ ಸೇರಿಕೊಂಡಿದ್ದ ವೃದ್ಧ ಆಕೆಯನ್ನು   ಅನುಚಿತವಾಗಿ ಸ್ಪರ್ಶಿಸಿದ್ದಾನೆ ಎಂಬ ಕಾರಣವೇ ಕೊಲೆಗೆ ಮೂಲ.  ಮಗಳು ಕೂಗಿಕೊಂಡಾಗ ಅಲ್ಲಿಗೆ ಬಂದ ದಂಪತಿ  ಏಕಾಏಕಿ ಬೆಲ್ಟ ಮತ್ತು ಬಿದಿರಿನ ಕೋಲಿನಿಂದ ಹಲ್ಲೆ ಮಾಡಿದ್ದಾರೆ. ದಂಪತಿಯ ಏಟಿಗೆ ವೃದ್ಧ ಸಾವನ್ನಪ್ಪಿದ್ದಾನೆ.

ಸತ್ತವನ ಗುರುತು ಪತ್ತೆಯಾದ ನಂತರ  ತನಿಖೆ ಆರೋಪಿಗಳ ಪತ್ತೆಗೆ ಬಲೆ  ಬೀಸಲಾಗಿದೆ.  ಕೊಲೆಗಾರರು ಪಾಟ್ನಾಗೆ ಎಸ್ಕೇಪ್ ಆಗಲು ಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದ ತಕ್ಷಣ ಪೊಲೀಸರು ಅಲರ್ಟ್ ಆಗಿದ್ದು  ದಂಪತಿಯನ್ನು ಅರೆಸ್ಟ್ ಮಾಡಿದ್ದಾರೆ.

Latest Videos
Follow Us:
Download App:
  • android
  • ios