Asianet Suvarna News Asianet Suvarna News

Gold Chain Theft: ಆಸ್ಪತ್ರೇಲಿ ವೃದ್ಧೆಯ ಸರ ಕದ್ದವ 8 ತಿಂಗಳ ಬಳಿಕ ಅರೆಸ್ಟ್‌

*  ಕೊರೋನಾದಿಂದಾಗಿ ಚಿಕಿತ್ಸೆಗೆ ದಾಖಲಾಗಿದ್ದ ವೃದ್ಧೆ
*  ಈ ವೇಳೆ 70 ಗ್ರಾಂ ಚಿನ್ನ ನಾಪತ್ತೆ
*  ತೀವ್ರ ವಿಚಾರಣೆ ಬಳಿಕ ಸಿಕ್ಕಿಬಿದ್ದ ಆರೋಪಿ
 

Accused Arrested After 8 Months For Gold Chain Theft in Bengaluru grg
Author
Bengaluru, First Published Dec 13, 2021, 6:36 AM IST

ಬೆಂಗಳೂರು(ಡಿ.13):  ಕೊರೋನಾ ಎರಡನೇ ಅಲೆ ವೇಳೆ ಸೋಂಕಿತರಾಗಿ ಚಿಕಿತ್ಸೆಗೆ ದಾಖಲಾಗಿದ್ದ ವೃದ್ಧೆಯೊಬ್ಬರ ಕತ್ತಿನಲ್ಲಿದ್ದ 3 ಲಕ್ಷ ಮೌಲ್ಯದ ಚಿನ್ನದ ಸರ ಕಳವು ಮಾಡಿದ್ದ ಖಾಸಗಿ ಆಸ್ಪತ್ರೆಯ ನೌಕರನೊಬ್ಬ ಎಂಟು ತಿಂಗಳ ಬಳಿಕ ಬ್ಯಾಡರಹಳ್ಳಿ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಜಾಲಹಳ್ಳಿ ಕ್ರಾಸ್‌ ಸಮೀಪ ನಿವಾಸಿ ಇಮ್ತಿಯಾಜ್‌ ಬಂಧಿತನಾಗಿದ್ದು(Arrest), ಆರೋಪಿಯಿಂದ 70 ಗ್ರಾಂ ಚಿನ್ನದ ಸರ ವಶಪಡಿಸಿಕೊಳ್ಳಲಾಗಿದೆ. ಬ್ಯಾಡರಹಳ್ಳಿ ಸಮೀಪ ಕೆಂಪೇಗೌಡ ನಗರದಲ್ಲಿರುವ ಖಾಸಗಿ ಆಸ್ಪತ್ರೆಗೆ ಈ ಕಳ್ಳತನ(Theft) ನಡೆದಿತ್ತು. ಇತ್ತೀಚೆಗೆ ಆಸ್ಪತ್ರೆ ಸಿಬ್ಬಂದಿಯನ್ನು ಮತ್ತೆ ವಿಚಾರಣೆಗೆ ಒಳಪಡಿಸಿದಾಗ ಆರೋಪಿ(Accused) ಸಿಕ್ಕಿಬಿದ್ದ ಎಂದು ಪೊಲೀಸರು(Police) ಹೇಳಿದ್ದಾರೆ.

ಚಿತ್ರದುರ್ಗ(Chitradurga) ಜಿಲ್ಲೆ ಹಿರಿಯೂರು ತಾಲೂಕಿನ ಇಮ್ತಿಯಾಜ್‌, ಕೆಲ ತಿಂಗಳಿಂದ ಬ್ಯಾಡರಹಳ್ಳಿ ಸಮೀಪ ಕೆಂಪೇಗೌಡ ನಗರದ ಖಾಸಗಿ ಆಸ್ಪತ್ರೆಯಲ್ಲಿ(Private Hospital) ತುರ್ತು ಚಿಕಿತ್ಸಾ ವಿಭಾಗ (ICU)ದ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಕೊರೋನಾ(Coronavirus) ಎರಡನೇ ಅಲೆ ಸಂದರ್ಭದಲ್ಲಿ ಏ.23ರಂದು ಸೋಂಕಿತರಾಗಿ ವೃದ್ಧೆಯೊಬ್ಬರು(Old Age Woman) ಚಿಕಿತ್ಸೆಗೆ ದಾಖಲಾಗಿದ್ದರು. ಆಗ ಅವರು ಧರಿಸಿದ್ದ .3 ಲಕ್ಷ ಮೌಲ್ಯದ ಚಿನ್ನ ಸರ(Gold Chain) ಕಳ್ಳತನವಾಗಿತ್ತು. ಮರುದಿನ ಆಸ್ಪತ್ರೆಗೆ ತಾಯಿಯ ಆರೋಗ್ಯ ವಿಚಾರಿಸಲು ಅವರ ಪುತ್ರ ತೆರಳಿದ್ದಾಗ ಸರ ನಾಪತ್ತೆ ಗೊತ್ತಾಗಿತ್ತು. ಈ ಬಗ್ಗೆ ವಿಚಾರಿಸಿದಾಗ ಯಾರೋ ಕಳವು ಮಾಡಿರಬಹುದು ಎಂದು ವೃದ್ಧೆ ಶಂಕಿಸಿದ್ದರು. ಈ ಬಗ್ಗೆ ಏ.25ರಂದು ಬ್ಯಾಡರಹಳ್ಳಿ ಠಾಣೆಯಲ್ಲಿ ಅವರ ಪುತ್ರ ದೂರು(Complaint) ನೀಡಿದ್ದರು.

theft: ಉಂಡ ಮನೆಗೆ ಕನ್ನ... ಮನೆಯವರಿಗೆ ಮತ್ತು ಪದಾರ್ಥ ನೀಡಿ ಮನೆ ದರೋಡೆ

ಅಂತೆಯೇ ತನಿಖೆ(Investigation) ಕೈಗೆತ್ತಿಕೊಂಡ ಪೊಲೀಸರು, ಆಸ್ಪತ್ರೆಯ ಮಾಲೀಕ ಸೇರಿದಂತೆ ಎಲ್ಲರಿಗೂ ನೋಟಿಸ್‌ ನೀಡಿ ವಿಚಾರಣೆಗೆ ಒಳಪಡಿಸಿದ್ದರು. ಆದರೆ ಅದೇ ವೇಳೆ ಆಸ್ಪತ್ರೆಯ ಮಾಲೀಕರಿಗೆ ಕೊರೋನಾ ಪತ್ತೆಯಾಯಿತು. ಸೋಂಕಿತನಾದ ಬಳಿಕ ಅವರು, ಆಸ್ಪತ್ರೆ ಆಡಳಿತ ನಿರ್ವಹಣೆ ನಡೆಸಲಾಗದೆ ತಾತ್ಕಾಲಿಕವಾಗಿ ಆಸ್ಪತ್ರೆಗೆ ಬೀಗ ಹಾಕಿದರು.

ಕೊನೆಗೆ ಆಸ್ಪತ್ರೆಯನ್ನು ಬೇರೆಯವರಿಗೆ ಅವರು ಮಾರಾಟ ಮಾಡಿದರು. ಕೆಲ ದಿನಗಳ ಹಿಂದಷ್ಟೇ ಮತ್ತೆ ಆಸ್ಪತ್ರೆ ಕಾರ್ಯಾರಂಭಿಸಿದ್ದರಿಂದ ಸಿಬ್ಬಂದಿ ಮರಳಿ ಕೆಲಸಕ್ಕೆ ಹಾಜರಾದರು. ಅದರಂತೆ ಊರು ಸೇರಿದ್ದ ಇಮ್ತಿಯಾಜ್‌ ಕೂಡಾ ಮತ್ತೆ ಕೆಲಸಕ್ಕೆ ಹಾಜರಾದ. ಇತ್ತ ಕಡತಗಳಲ್ಲಿ ಕಳೆದು ಹೋಗಿದ್ದ ಸರ ಕಳ್ಳತನ ಪ್ರಕರಣಕ್ಕೂ ಪೊಲೀಸರು ಮರು ಜೀವ ನೀಡಿದರು. ಮತ್ತೆ ತನಿಖೆ ಶುರು ಮಾಡಿದ ಸಬ್‌ ಇನ್‌ಸ್ಪೆಕ್ಟರ್‌ ಮುರಳಿ ಅವರು, ಆಸ್ಪತ್ರೆಯ ಎಲ್ಲ ಸಿಬ್ಬಂದಿಯನ್ನು ಮತ್ತೆ ‘ತೀವ್ರ’ ವಿಚಾರಣೆಗೊಳಪಡಿಸಿದರು. ಆಗ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಇಮ್ತಿಯಾಜ್‌ ತಡವರಿಸಿದ್ದ. ಇದರಿಂದ ಶಂಕೆಗೊಂಡ ಮತ್ತೆ ಮತ್ತೆ ಪ್ರಶ್ನಿಸಿದಾಗ ಆರೋಪಿ ತಪ್ಪೊಪ್ಪಿಕೊಂಡ ಎಂದು ಅಧಿಕಾರಿಗಳು ಹೇಳಿದ್ದಾರೆ.

ನಾನು ಕಳವು ಮಾಡಿರಲಿಲ್ಲ. ಲಿಫ್ಟ್‌ನಲ್ಲಿ ಸರ ಬಿದ್ದಿದ್ದ ಸರವನ್ನು ತೆಗೆದುಕೊಂಡು ಮನೆಗೆ ಹೋಗಿದ್ದೆ. ಬಳಿಕ ಅಡಮಾನವಿಟ್ಟು ಹಣ ಪಡೆದಿದ್ದೆ ಎಂದು ವಿಚಾರಣೆ ವೇಳೆ ಆರೋಪಿ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ.

Gold Theft| ಪ್ರಯಾಣಿಕರ ಸೋಗಲ್ಲಿ ಚಿನ್ನಾಭರಣ ಕದೀತಿದ್ದ ಖದೀಮರ ಬಂಧನ

ಅಕ್ರಮ ಜಾನುವಾರು ಸಾಗಾಟ, ಇಬ್ಬರು ವಶಕ್ಕೆ

ಶಿರಸಿ:  ಅಕ್ರಮವಾಗಿ ಜಾನುವಾರುಗಳನ್ನು(Livestock) ಸಾಗಿಸುತ್ತಿದ್ದ ವಾಹನವನ್ನು ಶಿರಸಿ(Sirsi) ಪೊಲೀಸರು ಶನಿವಾರ ವಶಕ್ಕೆ ಪಡೆದು, ಜಾನುವಾರುಗಳನ್ನು ರಕ್ಷಿಸಿದ್ದಾರೆ.

ಶಿರಸಿ ಹೊಸ ಮಾರುಕಟ್ಟೆ ಪೊಲೀಸ್‌ ಠಾಣೆ ವ್ಯಾಪ್ತಿಯ ಹುಸರಿ ರಸ್ತೆಯ ಕಸ್ತೂರಬಾ ನಗರದ ಕ್ರಾಸ್‌ ಬಳಿ ಕಾರ್ಯಾಚರಣೆ ನಡೆಸಿ ಕೃತ್ಯಕ್ಕೆ ಬಳಸಿದ ಬೊಲೆರೋ ವಾಹನ ಮತ್ತು ಮೂರು ಜಾನುವಾರುಗಳನ್ನು ವಶಕ್ಕೆ ಪಡೆದಿದ್ದಾರೆ. ಜಾನುವಾರುಗಳನ್ನು ಸಾಗಿಸುತ್ತಿದ್ದ ಶಿರಸಿ ಕಸ್ತೂರಬಾ ನಗರದ ಹೈದರ್‌ಖಾನ್‌, ಷಾಹಜಾನ್‌ ಗಫಾರ್‌ಖಾನ್‌ ಅವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಸಾಗಾಟಕ್ಕೆ ಸಾಥ್‌ ನೀಡಿದ ಕೊಟೆಗಲ್ಲಿಯ ಅಬ್ದುಲ್‌ ತವಾಬ್‌, ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಡಿಎಸ್‌ಪಿ ರವಿ ನಾಯ್ಕ ಮಾರ್ಗದರ್ಶನದಲ್ಲಿ, ಸಿಪಿಐ ರಾಮಚಂದ್ರ ನಾಯಕ ಮತ್ತು ಹೊಸ ಮಾರುಕಟ್ಟೆಠಾಣೆಯ ಉಪ ನಿರೀಕ್ಷಕ ಭೀಮಾಶಂಕರ ಸಿನ್ನೂರ, ಹಾಗೂ ಸಿಬ್ಬಂದಿ ಗಣಪತಿ ಬಂಟ್‌, ಪ್ರಶಾಂತ ಪಾವಸ್ಕರ್‌ ಹಾಗೂ ಅಶೋಕ ನಾಯ್ಕ ಪಾಲ್ಗೊಂಡಿದ್ದರು.
 

Follow Us:
Download App:
  • android
  • ios