*  ಕದ್ದಿದ್ದ 23.50 ಲಕ್ಷದ ಆಭರಣ ಜಪ್ತಿ*  ಬಿಎಂಟಿಸಿ ಬಸ್‌ನಲ್ಲಿ ಕೃತ್ಯ*  ವೃತ್ತಿಪರ ಕಳ್ಳರಾದ ಆರೋಪಿಗಳು 

ಬೆಂಗಳೂರು(ನ.22): ಪ್ರಯಾಣಿಕರ ಸೋಗಿನಲ್ಲಿ ಬಿಎಂಟಿಸಿ(BMTC) ಬಸಿನಲ್ಲಿ ಮಹಿಳೆಯೊಬ್ಬರ ಬ್ಯಾಗ್‌ನಿಂದ ಚಿನ್ನಾಭರಣ(Gold) ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಅಂಬೇಡ್ಕರ್‌ ಕಾಲೋನಿಯ ರಾಜ್‌ಕುಮಾರ್‌(28) ಮತ್ತು ಸೂರ್ಯ(26) ಬಂಧಿತರು(Arrest). ಆರೋಪಿಗಳು(Accused) ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ 23.50 ಲಕ್ಷ ಮೌಲ್ಯದ 437 ಗ್ರಾಂ ಚಿನ್ನಾಭರಣ ಹಾಗೂ ನಾಲ್ಕು ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು(Police) ತಿಳಿಸಿದ್ದಾರೆ.

ಎರಡು ತಿಂಗಳ ಹಿಂದೆ ಮಹಿಳೆಯೊಬ್ಬರು ಮೆಜೆಸ್ಟಿಕ್‌ನಿಂದ ರಾಜರಾಜೇಶ್ವರಿ ನಗರಕ್ಕೆ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುವಾಗ ವ್ಯಾನಿಟಿ ಬ್ಯಾಗ್‌ನಿಂದ ಚಿನ್ನಾಭರಣ ಕಳುವಾಗಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಇವರ ಬಂಧನದಿಂದ ಬ್ಯಾಟರಾಯನಪುರ, ಜ್ಞಾನಭಾರತಿ, ಕೆಂಗೇರಿ, ಅನ್ನಪೂರ್ಣೇಶ್ವರಿ ನಗರ, ಉಪ್ಪಾರಪೇಟೆ ಹಾಗೂ ರಾಮನಗರ ಜಿಲ್ಲೆ ಎಂ.ಕೆ.ದೊಡ್ಡಿ ಮತ್ತು ಐಜೂರು ಪೊಲೀಸ್‌(Police) ಠಾಣೆಯಲ್ಲಿ ದಾಖಲಾಗಿದ್ದ ಚಿನ್ನಾಭರಣ ಕಳವು, ಮನೆಗಳವು, ದ್ವಿಚಕ್ರ ವಾಹನ ಕಳವು ಸೇರಿದಂತೆ 10 ಕಳವು ಪ್ರಕರಣಗಳು(Theft Case) ಪತ್ತೆಯಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Shivamogga| ಪೊಲೀಸರಿಗೇ ಚಳ್ಳೆಹಣ್ಣು ತಿನ್ನಿಸಿದ್ದ ನಟೋರಿಯಸ್‌ ಬಚ್ಚನ್‌ ಅರೆಸ್ಟ್‌

ಇಬ್ಬರು ವೃತ್ತಿಪರ ಕಳ್ಳರಾಗಿದ್ದು, ಈ ಹಿಂದೆ ಕಳವು ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಸೇರಿದ್ದರು. ಜಾಮೀನಿನ ಮೇಲೆ ಹೊರಬಂದು ದುಷ್ಕೃತ್ಯ ಮುಂದುವರಿಸಿದ್ದರು. ಬಸ್‌ಗಳಲ್ಲಿ ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಕಳವು ಮಾಡುತ್ತಿದ್ದರು. ಬೀಗ ಹಾಕಿದ ಮನೆಗಳನ್ನು ಗುರುತಿಸಿಕೊಂಡು ಹಾಡಹಗಲೇ ಬೀಗ ಒಡೆದು ಸಿಕ್ಕಿದ್ದನ್ನು ದೋಚುತ್ತಿದ್ದರು. ಮನೆ ಎದುರು ನಿಲುಗಡೆ ಮಾಡಿದ ದ್ವಿಚಕ್ರ ವಾಹನಗಳನ್ನು ಕಳವು ಮಾಡಿ ಪೆಟ್ರೋಲ್‌ ಖಾಲಿಯಾಗುವವರೆಗೂ ಸುತ್ತಾಡುತಿದ್ದರು. ಬಳಿಕ ಎಲ್ಲೆಂದರಲ್ಲಿ ನಿಲ್ಲಿಸಿ ಹೋಗುತ್ತಿದ್ದರು. ಮನೆಗಳವು ಕೃತ್ಯಗಳಿಗೆ ಈ ಕದ್ದ ದ್ವಿಚಕ್ರ ವಾಹನ ಬಳಸಿಕೊಳ್ಳುತಿದ್ದರು ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ.

ತಮಿಳುನಾಡಲ್ಲಿ ಆಭರಣ ಗಿರವಿ

ಆರೋಪಿಗಳು ನಗರದಲ್ಲಿ ಕದ್ದ ಚಿನ್ನಾಭರಣಗಳನ್ನು ನೆರೆಯ ತಮಿಳುನಾಡಿನ(Tamil Nadu) ಧರ್ಮಪುರಿಯಲ್ಲಿ ಗಿರವಿ ಇರಿಸಿ ಹಣ ಪಡೆಯುತ್ತಿದ್ದರು. ಸ್ಥಳೀಯ ಪರಿಚಿತ ವ್ಯಕ್ತಿಯಿಂದ ಚಿನ್ನಾಭರಣ ಗಿರಿವಿ ಇರಿಸುತ್ತಿದ್ದರು. ಕಳ್ಳತನವನ್ನೇ(Theft) ವೃತ್ತಿ ಮಾಡಿಕೊಂಡಿರುವ ಈ ಆರೋಪಿಗಳು, ಕಳವು ಮಾಲು ಮಾರಾಟ ಮಾಡಿ ಬಂದ ಹಣವನ್ನು ಮೋಜು-ಮಸ್ತಿ ಮಾಡಿ ಕಳೆಯುತ್ತಿದ್ದರು. ಹಣ ಖಾಲಿಯಾದಾಗ ಮತ್ತೆ ಕಳವು ಕೃತ್ಯಕ್ಕೆ ಇಳಿಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ದರೋಡಗೆ ಸಂಚು ರೂಪಿಸಿದ್ದ ಐವರನ್ನು ಬಂಧಿಸಿದ ಸಿಸಿಬಿ

ಸಾರ್ವಜನಿಕರ ದರೋಡೆಗೆ(Robbery) ಸಂಚು ರೂಪಿಸಿದ್ದ ಐವರನ್ನು ಕೇಂದ್ರ ಅಪರಾಧ ದಳ (CCB) ಪೊಲೀಸರು ಬಂಧಿಸಿದ್ದಾರೆ.

ಸುಬ್ರಹ್ಮಣ್ಯ ನಗರ ಪೊಲೀಸ್‌ ಠಾಣೆಯ ವ್ಯಾಪ್ತಿಯ ಮಿಲ್ಕ್‌ ಕಾಲೋನಿ ರಸ್ತೆಯ ಸಂಗೊಳ್ಳಿ ರಾಯಣ್ಣ ಪಾರ್ಕ್ ಸಮೀಪ ಶನಿವಾರ 9 ಮಂದಿ ದರೋಡೆಗೆ ಹೊಂಚು ಹಾಕಿ ಕುಳಿತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಐವರನ್ನು ಬಂಧಿಸಲಾಗಿದೆ. ಇವರು ವೈಯಾಲಿಕಾವಲ್‌, ಸುಬ್ರಹ್ಮಣ್ಯ ನಗರ ಹಾಗೂ ಪೀಣ್ಯ ಠಾಣೆ ರೌಡಿ ಶೀಟರ್‌ಗಳು. ಆರೋಪಿಗಳಿಂದ ಲಾಂಗ್‌, ಖಾರದ ಪುಡಿ, ಕಬ್ಬಿಣದ ಪೈಪ್‌ಗಳನ್ನು ಜಪ್ತಿ ಮಾಡಲಾಗಿದೆ. ಕಾರ್ಯಾಚರಣೆ ವೇಳೆ ನಾಲ್ವರು ಆರೋಪಿಗಳು ಪರಾರಿಯಾಗಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Drugs Mafia| ಬೆಂಗಳೂರಿಂದ ತಿರುವನಂತಪುರ, ವೆಲ್ಲೂರಿಗೆ ಕೊರಿಯರ್‌ನಲ್ಲಿ ಡ್ರಗ್ಸ್‌..!

ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಹಲ್ಲೆ: ರೌಡಿಶೀಟರ್‌ ಸೆರೆ

ಕದ್ದ ಮೊಬೈಲ್‌ ಫೋನ್‌ ಖರೀದಿಸಿ ಬಳಿಕ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ ಆರೋಪದಡಿ ಬಂಧಿಸಲು ತೆರಳಿದ್ದ ಪೊಲೀಸರ ಮೇಲೆಗೆ ಹಲ್ಲೆಗೈದ(Assault) ರೌಡಿ ಶೀಟರ್‌ನನ್ನು(Rowdysheeter) ಮಾಗಡಿ ರಸ್ತೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಜಗಜೀವನ್‌ ರಾಮ್‌ನಗರ ಪೊಲೀಸ್‌ ಠಾಣೆಯ ರೌಡಿಶೀಟರ್‌ ಅಸ್ಲಾಂ ಪಾಷಾ (50) ಬಂಧಿತ. ಮೊಬೈಲ್‌ ಕಳವು ಪ್ರಕರಣ ಸಂಬಂಧ ವ್ಯಕ್ತಿಯೊಬ್ಬನನ್ನು ಬಂಧಿಸಿ ವಿಚಾರಣೆ ಮಾಡಿದಾಗ ಕದ್ದ ಮೊಬೈಲ್‌ಗಳನ್ನು ಅಸ್ಲಾಂ ಪಾಷಾಗೆ ಮಾರಾಟ ಮಾಡಿರುವುದಾಗಿ ಹೇಳಿದ್ದ. ಈ ಮಾಹಿತಿ ಮೇರೆಗೆ ಅಸ್ಲಾಂ ಪಾಷಾನನ್ನು ಬಂಧಿಸಲು ಪೊಲೀಸರು ಮನೆಗೆ ತೆರಳಿದ್ದಾಗ ಅಸ್ಲಾಂ ಪಾಷಾ ಕುಟುಂಬಸ್ಥರು ಅಡ್ಡಿಪಡಿಸಿದ್ದಾರೆ. ಆರೋಪಿ ಸಹ ಕರ್ತವ್ಯನಿರತ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದೇನೆ. ಹೀಗಾಗಿ ಆತನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.