ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ರಘುನಾಥ್ ಪಾಸ್ವಾನ್‌ನನ್ನ ಬಂಧಿಸುವಲ್ಲಿ ಯಶಸ್ವಿಯಾದ ಹಲಸೂರು ಗೇಟ್ ಸಂಚಾರಿ ಪೊಲೀಸರು 

ಬೆಂಗಳೂರು(ನ.29): 13 ವರ್ಷಗಳ ನಂತರ ಹಿಟ್ ಆಂಡ್ ರನ್ ಪ್ರಕರಣದ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಹಲಸೂರು ಗೇಟ್ ಸಂಚಾರಿ ಪೊಲೀಸರು ಕಾರ್ಯಾಚರಣೆ ನಡೆಸಿ ರಘುನಾಥ್ ಪಾಸ್ವಾನ್‌ನನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

2009 ರ ನವಂಬರ್ 17ರಂದು ಎನ್.ಆರ್. ರಸ್ತೆಯಲ್ಲಿ ಅಪಘಾತವೆಸಗಿ ಆರೋಪಿ ರಘುನಾಥ್ ಪರಾರಿಯಾಗಿದ್ದ, ಸುಮಾರು 13 ವರ್ಷಗಳಿಂದ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು. 

ಬೆಂಗಳೂರು: ಬೈಕ್‌ ಕಳ್ಳರ ಸುಳಿವು ಕೊಟ್ಟ ಜಿಪಿಎಸ್‌..!

ಹಲಸೂರು ಗೇಟ್ ಪೊಲೀಸರು ಕೊನೆಗೂ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಗೆ 6 ತಿಂಗಳು ಜೈಲು 5 ಸಾವಿರ ದಂಡ ವಿಧಿಸಿ 5ನೇ ಸಂಚಾರಿ ನ್ಯಾಯಾಲಯ ಆದೇಶಿಸಿದೆ.