Asianet Suvarna News Asianet Suvarna News

ಮಾಡೆಲ್ ಆಗಬೇಕೆಂಬ ಕನಸಿನೊಂದಿಗೆ ನಗರಕ್ಕೆ ಬಂದ ಯುವತಿ ಮೇಲೆ ಅತ್ಯಾಚಾರ

ಮಾಡೆಲ್ ಆಗಬೇಕೆಂಬ ಮಹತ್ವಕಾಂಕ್ಷೆಯೊಂದಿಗೆ ತನ್ನ ಸ್ವಂತ ರಾಜ್ಯ ಬಿಟ್ಟು ಗುಜರಾತ್‌ನ ಅಹ್ಮದಾಬಾದ್‌ಗೆ ತೆರಳಿದ್ದ ಯುವತಿ ಮೇಲೆ ಹವ್ಯಾಸಿ ಛಾಯಾಚಿತ್ರಗ್ರಾಹಕನೋರ್ವ ಅತ್ಯಾಚಾರವೆಸಗಿದ್ದಾನೆ.ನವೆಂಬರ್ 10ರಂದು ಘಟನೆ ನಡೆದಿದ್ದು, ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ.

A young woman from Madhya Pradesh, who came to the city with the dream of becoming a model, was raped by photographer in Ahmedabad akb
Author
First Published Dec 26, 2022, 7:30 PM IST

ಅಹಮದಾಬಾದ್: ಮಾಡೆಲ್ ಆಗಬೇಕೆಂಬ ಮಹತ್ವಕಾಂಕ್ಷೆಯೊಂದಿಗೆ ತನ್ನ ಸ್ವಂತ ರಾಜ್ಯ ಬಿಟ್ಟು ಗುಜರಾತ್‌ನ ಅಹ್ಮದಾಬಾದ್‌ಗೆ ತೆರಳಿದ್ದ ಯುವತಿ ಮೇಲೆ ಹವ್ಯಾಸಿ ಛಾಯಾಚಿತ್ರಗ್ರಾಹಕನೋರ್ವ ಅತ್ಯಾಚಾರವೆಸಗಿದ್ದಾನೆ. ನವೆಂಬರ್‌ನಲ್ಲಿ  ಮಾಡೆಲಿಂಗ್‌ನಲ್ಲಿ ಅವಕಾಶ ನೀಡುವುದಾಗಿ ಆಮಿಷವೊಡ್ಡಿ ತನ್ನ ಮೇಲೆ ಫೋಟೋಗ್ರಾಫರ್ ಅತ್ಯಾಚಾರವೆಸಗಿದ್ದಾನೆ ಎಂದು ಮಹಿಳೆ ದೂರು ನೀಡಿದ್ದು, ಗುಜರಾತ್ ವಿಶ್ವವಿದ್ಯಾಲಯ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಕಳೆದ ತಿಂಗಳು ಈ ಘಟನೆ ನಡೆದಿದ್ದು, ಈಗ ದೂರು ದಾಖಲಿಸಲಾಗಿದೆ.  ಗುಜರಾತ್‌ನ (Gujarat) ರಾಜಧಾನಿ ಅಹಮದಾಬಾದ್‌ನ ನವರಂಗ್‌ಪುರ (Navrangpura) ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಬಲೆ ಬೀಸಿದ್ದಾರೆ. ಅತ್ಯಾಚಾರಕ್ಕೊಳಗಾದ ಮಹಿಳೆ ಆರು ತಿಂಗಳ ಹಿಂದಷ್ಟೇ ಮಧ್ಯಪ್ರದೇಶದ (Madhya Pradesh) ತನ್ನ ಸ್ಥಳೀಯ ಪಟ್ಟಣದಿಂದ ಗುಜರಾತ್‌ನ ಅಹಮದಾಬಾದ್‌ಗೆ (Ahmedabad) ಬಂದಿದ್ದಳು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಯುವತಿ ಮೇಲೆ ಅತ್ಯಾಚಾರವೆಸಗಿದ ಆರೋಪಿಯನ್ನು 35 ವರ್ಷದ ಪ್ರಶಾಂತ್ ಧನಕ್ (Prashant Dhanak) ಎಂದು ಗುರುತಿಸಲಾಗಿದೆ. ಆತ ನವರಂಗ್‌ಪುರದ ಈಶಾವರ್ ಭುವನ್ (Ishawar Bhuvan)ಬಳಿಯ ದೀಪ್‌ಕುಂಜ್ (Deepkunj) ಫ್ಲಾಟ್‌ನಲ್ಲಿ ವಾಸ ಮಾಡುತ್ತಿದ್ದ. ಸಾಮಾಜಿಕ ಜಾಲತಾಣದ (social media) ಮೂಲಕ ಮಹಿಳೆಗೆ ಆರೋಪಿ ಧನಕ್ ಜೊತೆ ಸ್ನೇಹ ಬೆಳೆದಿತ್ತು. ಶೀಘ್ರದಲ್ಲೇ ಅವರು ತಮ್ಮ ಫೋನ್ ನಂಬರ್‌ಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡಿದ್ದರು. ನಂತರ ಆರೋಪಿ ಈ ಮಾಡೆಲಿಂಗ್ (modelling) ಕನಸಿನಲ್ಲಿದ್ದ ಯುವತಿಯ ಜೊತೆ ತನ್ನ ಬಳಿ ಮಾಡೆಲಿಂಗ್‌ಗೆ ಸಂಬಂಧಿಸಿದ ದೊಡ್ಡದಾದ ಪ್ರಾಜೆಕ್ಟ್ ಇದೆ ಎಂದು ಹೇಳಿದ್ದಲ್ಲದೇ ಆಕೆಗೆ ಹಣಕಾಸಿನ ನೆರವು ನೀಡುವ ಭರವಸೆ ನೀಡಿದ್ದ. ಇದಾದ ಬಳಿಕ ಯುವತಿ ಈತನನ್ನು ನಂಬಿ ನಗರಕ್ಕೆ ಬಂದಿದ್ದಳು. ಇದಾದ ಬಳಿಕ ನವರಂಗಪುರದಲ್ಲಿ(Navrangpura) ಆಕೆಯನ್ನು ಭೇಟಿಯಾಗಲು ಕರೆ ಮಾಡಿದ ಆತ ಗ್ರಾಹಕರನ್ನು ಭೇಟಿ ಮಾಡುವ ನೆಪದಲ್ಲಿ ಆಕೆಯನ್ನು ಹೊಟೇಲ್‌ಗೆ ಕರೆದೊಯ್ದು ಅಲ್ಲಿ ಅತ್ಯಾಚಾರವೆಸಗಿದ್ದಾನೆ. ನವೆಂಬರ್ 10 ರಂದು ಈ ಘಟನೆ ನಡೆದಿದೆ. 

50ನೇ ವಯಸ್ಸಿನಲ್ಲಿ ನಾನು ಒಳ ಉಡುಪು ಮಾಡೆಲ್ ಆದೆ!

ಹೊಟೇಲ್ ರೂಮ್‌ನಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿದ ಆರೋಪಿ ಘಟನೆಯ ಬಗ್ಗೆ ಯಾರಿಗೂ ಹೇಳದಂತೆ ಮಹಿಳೆಗೆ ಬೆದರಿಕೆ ಹಾಕಿದ್ದಾನೆ. ಮಹಿಳೆಯ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಗುಜರಾತ್‌ನ ವಿಶ್ವವಿದ್ಯಾಲಯ ಠಾಣೆ ಪೊಲೀಸರು ಆರೋಪಿ ಧನಕ್ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ.

Udupi: ಮಾಡೆಲಿಂಗ್‌ ಆಸೆಯಿಂದ ಲಕ್ಷಾಂತರ ರೂ. ಕಳ್ಕೊಂಡು ಬಕ್ರಾ ಆದ ಟೆಕ್ಕಿ..!

Follow Us:
Download App:
  • android
  • ios