ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದ ಗುತ್ತಿಗೆದಾರನಿಗೆ ಸಹಕಾರ ಬ್ಯಾಂಕ್‌ನಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿ ₹1 ಕೋಟಿ ಖೋಟಾ ನೋಟು ಕೊಟ್ಟು ಸರ್ವಿಸ್‌ ಚಾರ್ಜ್ ನೆಪದಲ್ಲಿ ₹27 ಲಕ್ಷ ಪಡೆದು ಟೋಪಿ ಹಾಕಿದ್ದ ಮೂವರು ಕಿಲಾಡಿ ವಂಚರು ಜಯನಗರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಬೆಂಗಳೂರು (ಡಿ.26) : ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದ ಗುತ್ತಿಗೆದಾರನಿಗೆ ಸಹಕಾರ ಬ್ಯಾಂಕ್‌ನಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿ ₹1 ಕೋಟಿ ಖೋಟಾ ನೋಟು ಕೊಟ್ಟು ಸರ್ವಿಸ್‌ ಚಾರ್ಜ್ ನೆಪದಲ್ಲಿ ₹27 ಲಕ್ಷ ಪಡೆದು ಟೋಪಿ ಹಾಕಿದ್ದ ಮೂವರು ಕಿಲಾಡಿ ವಂಚರು ಜಯನಗರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಆರ್‌.ಟಿ.ನಗರದ ದಿಣ್ಣೂರು ಮುಖ್ಯರಸ್ತೆ ಮನ್ನಾ ಶರಣ, ಆರ್‌.ವಿಷ್ಣುರಾಜನ್‌ ಹಾಗೂ ರಾಮಮೂರ್ತಿ ನಗರದ ಪ್ರವೀಣ್‌ಕುಮಾರ್‌ ಬಂಧಿತರಾಗಿದ್ದು, ತಲೆಮರೆಸಿಕೊಂಡಿರುವ ಇನ್ನು ಮೂವರು ಆರೋಪಿಗಳ ಪತ್ತೆಗೆ ತನಿಖೆ ನಡೆದಿದೆ. ಆರೋಪಿಗಳಿಂದ ಒಂದು ಜಾಗ್ವಾರ್‌ ಕಾರು, 1 ಮಹೇಂದ್ರ ಕಾರು, 6 ಕೇಜಿ ನಕಲಿ ಚಿನ್ನದ ಬಿಸ್ಕೆತ್‌, .1 ಕೋಟಿ ಮೌಲ್ಯದ ನಕಲಿ ನೋಟು ಹಾಗೂ .20 ಲಕ್ಷವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಇತ್ತೀಚೆಗೆ ಜಯನಗರದ ನಿವಾಸಿ ಗುತ್ತಿಗೆದಾರ ಎನ್‌.ಪಾರ್ಥಸಾರಥಿ ಅವರಿಗೆ ಆರ್ಥಿಕ ನೆರವಿನ ನೆಪದಲ್ಲಿ ಆರೋಪಿಗಳು ನಂಬಿಸಿ ವಂಚಿಸಿದ್ದರು. ಈ ಬಗ್ಗೆ ಸಂತ್ರಸ್ತ ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಕೃಷ್ಣಕಾಂತ್‌ ತಿಳಿಸಿದ್ದಾರೆ.

Railway Job Scam: ರೈಲ್ವೇಯಲ್ಲಿ ಕೆಲಸ ಕೊಡಿಸುವುದಾಗಿ 28 ನಿರುದ್ಯೋಗಿ ಯುವಕರಿಗೆ ವಂಚನೆ, 2.5 ಕೋಟಿ ರೂ ಪಂಗನಾಮ!

ಹೇಗೆ ವಂಚನೆ:

ಜಯನಗರ 4ನೇ ಟಿ ಬ್ಲಾಕ್‌ನ ನಿವಾಸಿ ಜೆ.ಎನ್‌.ಪ್ರಾಜೆಕ್ಟ್ ರಿಯಲ್‌ ಎಸ್ಟೇಟ್‌ ಪಾಲುದಾರ ಹಾಗೂ ಗುತ್ತಿಗೆದಾರ ಎನ್‌.ಪಾರ್ಥಸಾರಥಿ ಅವರು ನಾಲ್ಕು ವರ್ಷಗಳ ಹಿಂದೆ ಬಾಣಸವಾಡಿಯ ಖಾಸಗಿ ಬ್ಯಾಂಕ್‌ವೊಂದರಲ್ಲಿ .1.75 ಕೋಟಿ ಸಾಲ ಪಡೆದಿದ್ದರು. ಆದರೆ ಲಾಕ್‌ಡೌನ್‌ನಿಂದಾಗಿ ಎದುರಾದ ಆರ್ಥಿಕ ಸಮಸ್ಯೆಯಿಂದ ಅವರು ಸಾಲ ಪಾವತಿಸಲು ಸಾಧ್ಯವಾಗಿರಲಿಲ್ಲ. ಈ ಕಷ್ಟದ ದಿನಗಳಲ್ಲಿ ಅವರಿಗೆ ರಿಯಲ್‌ ಎಸ್ಟೇಟ್‌ ಏಜೆಂಟ್‌ಗಳಾದ ಶಾಂತಿ ನಗರದ ಆಶಾ ಲತಾ ಹಾಗೂ ಅನಿತಾ ಪರಿಚಯವಾಗಿದೆ. ಆಗ ಗುತ್ತಿಗೆದಾರನಿಗೆ ‘ನಮ್ಮ ಸ್ನೇಹಿತರಿಗೆ ಸಹಕಾರ ಬ್ಯಾಂಕ್‌ ಹಾಗೂ ಫೈನಾನ್ಸ್‌ಶಿಯರ್‌ಗಳು ಗೊತ್ತು. ಅವರ ಮೂಲಕ ನಿಮಗೆ ಕಡಿಮೆ ಬಡ್ಡಿಗೆ ಸಾಲ ಕೊಡಿಸುತ್ತೇವೆ’ ಎಂದಿದ್ದರು.

ಬಳಿಕ ಪಾರ್ಥಸಾರಥಿ ಅವರಿಗೆ ಶರಣ, ವಿಷ್ಣು, ಲಕ್ಷ್ಮಣ್‌ ರಾವ್‌ ಹಾಗೂ ತುಷಾರ್‌ ಪರಿಚಯವಾಗಿದ್ದಾರೆ. ತಮಗೆ ಗೊತ್ತಿರುವ ಸಹಕಾರ ಬ್ಯಾಂಕ್‌ನಲ್ಲಿ ಸುಲಭವಾಗಿ .4 ಕೋಟಿ ಸಾಲ ಕೊಡಿಸುವುದಾಗಿ ಪಾರ್ಥಸಾರಥಿಗೆ ನಂಬಿಸಿದ ಆರೋಪಿಗಳು, ಇದಕ್ಕಾಗಿ ಅವರಿಂದ ದಾಖಲೆ ಪತ್ರಗಳು ಮತ್ತು ಶೇ.6 ಸರ್ವಿಸ್‌ ಚಾಜ್‌ರ್‍ ಎಂದು ಹೇಳಿ .21 ಲಕ್ಷ ಚೆಕ್‌ ಮತ್ತು .1 ಲಕ್ಷ ನಗದು ಪಡೆದುಕೊಂಡಿದ್ದರು. ಇದಾದ ಮೇಲೆ ಪಾರ್ಥಸಾರಥಿಗೆ .13 ಕೋಟಿ ಹಣವಿದ್ದು, ಪೂರ್ತಿಯಾಗಿ ಪಡೆದುಕೊಂಡರೆ ಶೇ.5ರಷ್ಟುವಿನಾಯಿತಿ ನೀಡುವುದಾಗಿ ಆರೋಪಿಗಳು ನಂಬಿಸಿದ್ದರು. ಅಲ್ಲದೆ, ಶೇ.2 ಸ್ಟ್ಯಾಂಪ್‌ ಡ್ಯೂಟಿ ಕಟ್ಟಬೇಕೆಂದು ತಿಳಿಸಿದ್ದರು.

ಅಷ್ಟೊಂದು ಹಣ ಬೇಡ ಎಂದಾಗ ಪಾರ್ಥಸಾರಥಿಗೆ ಬೆದರಿಕೆ ಒಡ್ಡಿ ಒಪ್ಪಿಸಿದ್ದರು. ಕೊನೆಗೆ ಡಿ.21ರ ಬೆಳಗ್ಗೆ ಹಣ ಸಿದ್ಧವಾಗಿದೆ ಎಂದು ಹೇಳಿ ಆರೋಪಿಗಳು, ತಮ್ಮ ಕಚೇರಿಗೆ ಪಾರ್ಥಸಾರಥಿ ಅವರನ್ನು ಕರೆಸಿಕೊಂಡು .1 ಕೋಟಿ ಹಣದ ಬ್ಯಾಗ್‌ ಕೊಟ್ಟು ಕಳುಹಿಸಿದ್ದರು. ಇನ್ನುಳಿದ .12 ಕೋಟಿಯನ್ನು ಮನೆಗೆ ಕಳುಹಿಸುವುದಾಗಿ ಹೇಳಿದ್ದರು. ಆಗ ಪಾರ್ಥಸಾರಥಿ ಅವರಿಂದ .26 ಲಕ್ಷವನ್ನು ಆರೋಪಿಗಳು ಆರ್‌ಟಿಜಿಎಸ್‌ ಮಾಡಿಸಿಕೊಂಡಿದ್ದರು. ಮನೆಗೆ ಹೋಗಿ ಎಷ್ಟುಹೊತ್ತಾದರೂ ಹಣದ ಜತೆ ಶರಣ ಗ್ಯಾಂಗ್‌ ಬಾರದೆ ಹೋದಾಗ ಅನುಮಾನಗೊಂಡ ಪಾರ್ಥಸಾರಥಿ ಅವರು, ತಮಗೆ ಆರೋಪಿಗಳು ಕೊಟ್ಟಿದ್ದ ಬ್ಯಾಗ್‌ ತೆರೆದು ಹಣ ಪರಿಶೀಲಿಸಿದಾಗ ಅಸಲಿ ಸತ್ಯ ಬಯಲಾಗಿದೆ.

500, 100 ನೋಟಿನ ಕಲರ್‌ ಜೆರಾಕ್ಸ್‌!

ಪಾರ್ಥಸಾರಥಿ ಅವರಿಗೆ ಹಣ ಎಂದು ಹೇಳಿ 500 ಹಾಗೂ 100 ಮುಖಬೆಲೆಯ ನೋಟಿನ ಕಲರ್‌ ಜೆರಾಕ್ಸ್‌ ಮಾಡಿಸಿ ಬ್ಯಾಗ್‌ನಲ್ಲಿ ತುಂಬಿ ಆರೋಪಿಗಳು ಕೊಟ್ಟಿದ್ದರು. ಅಲ್ಲದೆ, 6 ಕೇಜಿ ನಕಲಿ ಚಿನ್ನದ ಬಿಸ್ಕೆತ್‌ ಸಹ ಸಿದ್ಧಪಡಿಸಿಕೊಂಡು ಮೋಸ ಮಾಡಲು ಹೊಂಚು ಹಾಕಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಈ ವಂಚನೆ ಬಗ್ಗೆ ಜಯನಗರ ಠಾಣೆಗೆ ತೆರಳಿ ಪಾರ್ಥಸಾರಥಿ ದೂರು ಸಲ್ಲಿಸಿದ್ದರು. ತನಿಖೆ ನಡೆಸಿದ ಇನ್‌ಸ್ಪೆಕ್ಟರ್‌ ಆರ್‌.ಮಂಜುನಾಥ್‌ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ ಎಂದು ಡಿಸಿಪಿ ಪಿ.ಕೃಷ್ಣಕಾಂತ್‌ ತಿಳಿಸಿದ್ದಾರೆ.

Bank Fraud: ಮತ್ತೊಂದು ಸಹಕಾರಿ ಹಗರಣ: 100 ಕೋಟಿ ರು. ಧೋಖಾ?

ಬಟ್ಟೆವ್ಯಾಪಾರಿಗೆ ₹30 ಲಕ್ಷ ನಾಮ

ಮೂರು ತಿಂಗಳ ಹಿಂದೆ ಇದೇ ರೀತಿ ಕೆ.ಜಿ.ನಗರದ ಬಟ್ಟೆವ್ಯಾಪಾರಿ ಶ್ರೀನಿವಾಸ್‌ ಎಂಬುವರಿಗೆ ಆರೋಪಿಗಳು .30 ಲಕ್ಷ ವಂಚಿಸಿದ್ದರು. ಆರ್ಥಿಕ ಸಂಕಷ್ಟದಲ್ಲಿರುವ ವ್ಯಾಪಾರಿಗಳು ಹಾಗೂ ಉದ್ಯಮಿಗಳಿಗೆ ಗಾಳ ಹಾಕಿ ಹೊಂಚಿಸುವುದೇ ಶರಣ ಗ್ಯಾಂಗ್‌ ಕೃತ್ಯವಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.