Asianet Suvarna News Asianet Suvarna News

ಟ್ಯೂಷನ್‌ಗೆ ಹೋಗಿದ್ದ 12 ವರ್ಷದ ಬಾಲಕ ನಿಗೂಢವಾಗಿ ನಾಪತ್ತೆ!

ಟ್ಯೂಷನ್‌ಗೆ ಹೋಗಿದ್ದ 12 ವರ್ಷದ ಬಾಲಕ ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ಬೆಂಗಳೂರಿನ ವಿಜಯನಗರದಲ್ಲಿ ನಡೆದಿದೆ. ಪರಿನವ್ (12) ಟ್ಯೂಷನ್ ನಿಂದ ನಾಪತ್ತೆಯಾದ  ಬಾಲಕ.

A student who went for tuition has gone missing in vijayanagar at bengaluru rav
Author
First Published Jan 22, 2024, 11:21 PM IST

ಬೆಂಗಳೂರು (ಜ.22): ಟ್ಯೂಷನ್‌ಗೆ ಹೋಗಿದ್ದ 12 ವರ್ಷದ ಬಾಲಕ ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ಬೆಂಗಳೂರಿನ ವಿಜಯನಗರದಲ್ಲಿ ನಡೆದಿದೆ.

ಪರಿನವ್ (12) ಟ್ಯೂಷನ್ ನಿಂದ ನಾಪತ್ತೆಯಾದ  ಬಾಲಕ. ವಿಜಯನಗರದ ಸುಖೇಶ್ ಹಾಗೂ ನಿವೇದಿತಾ ದಂಪತಿ ಪುತ್ರನಾಗಿರು ಬಾಲಕ. ಗುಂಜೂರಿನ ಡೆನ್ ಅಕಾಡೆಮಿ ಶಾಲೆಯಲ್ಲಿ 6 ನೇ ತರಗತಿ ಓದುತ್ತಿದ್ದ ಬಾಲಕ. ವೈಟ್ ಫೀಲ್ಧ್ ನ ಅಲೆನ್ ಎಂಬ ಟ್ಯೂಷನ್ ಸೆಂಟರ್‌ಗೆ ಹೋಗುತ್ತಿದ್ದ. ನಿನ್ನೆ ಬೆಳಗ್ಗೆ ಎಂದಿನಂತೆ ತಂದೆ ಮಗನನ್ನು ಅಲೆನ್ ಟ್ಯೂಷನ್ ಸೆಂಟರ್‌ಗೆ ಡ್ರ‍ಾಪ್ ಮಾಡಿ ಬಂದಿದ್ರು. ಆದರೆ ಮಧ್ಯಾಹ್ನ ಮತ್ತೆ ಪಿಕ್ ಮಾಡೋಕೆ ತಡವಾಗಿದ್ದು, ಅಷ್ಟರಲ್ಲಿ ನಾಪತ್ತೆಯಾಗಿರುವ ಬಾಲಕ. ನಿನ್ನೆ ಮಧ್ಯಾಹ್ನ 12.15 ರ ಸುಮಾರಿಗೆ ನಾಪತ್ತೆಯಾಗಿರುವ ಬಾಲಕ ಇದುವರೆಗೆ ಸುಳಿವು ಸಿಕ್ಕಿಲ್ಲ.

ಗಾಯಗೊಂಡ ವಿಷಪೂರಿತ ಹಾವಿಗೆ ಶಸ್ತ್ರಚಿಕಿತ್ಸೆ; ಬರೊಬ್ಬರಿ 40 ಕ್ಕೂ ಹೆಚ್ಚು ಹೊಲಿಗೆ ಹಾಕಿ ರಕ್ಷಿಸಿದ ವೈದ್ಯರು!

ಸಿಸಿಟಿವಿಯಲ್ಲಿ ಕಾಣಿಸಿಕೊಂಡಿರುವ ಬಾಲಕ:

ಟ್ಯೂಷನ್ ಮುಗಿಸಿಕೊಂಡು ಮಾರತ್ತಳ್ಳಿಯವರೆಗೂ ನಡೆದುಕೊಂಡು ಬಂದಿರುವ ಬಾಲಕ. ನಂತರ ಬಿಎಂಟಿಸಿ ಬಸ್ ಹತ್ತಿರೋದು ಸಿಸಿಟಿವಿ ದಾಖಲಾಗಿದೆ. ಆ ನಂತರ ಬಾಲಕ ಎಲ್ಲೂ ಪತ್ತೆಯಾಗಿಲ್ಲ.

ಘಟನೆ ಸಂಬಂಧ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಾಗಿದ್ದು, ನಾಪತ್ರೆಯಾಗಿರುವ ಬಾಲಕನಿಗಾಗಿ ವೈಟ್‌ಫಿಲ್ಡ್ ಪೊಲೀಸರಿಂದ ಶೋಧ ಕಾರ್ಯ ಮುಂದುವರಿದಿದೆ.

ರಾಯಚೂರು: ಫೋನ್ ಪೇ ಮಾಡಿಸಿಕೊಂಡು ಲೋಕಾಯುಕ್ತ ಬಲೆಗೆ ಬಿದ್ದ ಜೆಸ್ಕಾಂ ಎಇಇ!

Follow Us:
Download App:
  • android
  • ios