ಮೊಬೈಲ್ ಸಿಮ್‌ಕಾರ್ಡ್ ನಿಷ್ಕಿ್ರಯಗೊಳಿಸಿದ್ದನೆಂಬ ಕಾರಣಕ್ಕೆ ಮಲಗಿದ್ದವನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ದಾರುಣ ಘಟನೆ ತಾಲೂಕಿನ ಕಾಳ ಮಂದರ್ಗಿ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ.
ಕಮಲಾಪುರ (ಮಾ.1): ಮೊಬೈಲ್ ಸಿಮ್‌ಕಾರ್ಡ್ ನಿಷ್ಕಿ್ರಯಗೊಳಿಸಿದ್ದನೆಂಬ ಕಾರಣಕ್ಕೆ ಮಲಗಿದ್ದವನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ದಾರುಣ ಘಟನೆ ತಾಲೂಕಿನ ಕಾಳ ಮಂದರ್ಗಿ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ.
ಕೊಲೆಯಾದವನನ್ನು ಭರತ ಸುಭಾಶ್ಚಂದ್ರ ವಾಡಿ(Bharata Subhashchandra Wadi) (24) ಎಂದು ಗುರುತಿಸಲಾಗಿದ್ದು, ಈತನ ಸಂಬಂಧಿ ಮಲ್ಲಿಕಾರ್ಜುನ ಶಿವಶರಣಪ್ಪ ವಾಡಿ ಎಂಬಾತನೇ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಮಲ್ಲಿಕಾರ್ಜುನನ ಮೊಬೈಲ್‌ನಲ್ಲಿದ್ದ ಸಿಮ್ ಕಾರ್ಡ್ ಹೊರತೆಗೆದು ಇದ್ದಕ್ಕಿದ್ದ ಹಾಗೆ ಕಲ್ಲಿಗೆ ತಿಕ್ಕಿ ಭರತ ಹಾಳುಮಾಡಿದ್ದ. ಇದೇ ಕಾರಣಕ್ಕೆ ಕುಡಿದ ಮತ್ತಿನಲ್ಲಿದ್ದ ಮಲ್ಲಿಕಾರ್ಜುನ, ಭರತನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆಗೈದು, ಅಲ್ಲಿಂದ ಕಾಲ್ಕಿತ್ತಿದ್ದಾನೆ.
Karnataka election: ತನ್ವೀರ್ ರಾಜಕೀಯ ನಿವೃತ್ತಿ: ಆತ್ಮಹತ್ಯೆಗೆ ಯತ್ನಿಸಿದ ಅಭಿಯಾನಿ!
ಹಾಸ್ಟೆಲ್ ಕಟ್ಟಡದ ಮೇಲಿಂದ ಬಿದ್ದು ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆ
ಬೀದರ್: ಇಲ್ಲಿನ ಬ್ರಿಮ್ಸ್ ವೈದ್ಯಕೀಯ ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿ ಶ್ರೀರಾಮ ರಾಮದಾಸ ಕಾಡಿಗಿ (23) ಹಾಸ್ಟೆಲ್ ಮಹಡಿಯಿಂದ ಹಾರಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ಬೆಳಗಿನ ಜಾವ ಜರುಗಿದೆ.
ಜಿಲ್ಲೆಯ ಚಿಟಗುಪ್ಪ ಮೂಲದ ಶ್ರೀರಾಮ ಕಾಲೇಜಿ(Chituguppe sriram collage)ನಲ್ಲಿ ಪ್ರತಿಭಾನ್ವಿತ ವೈದ್ಯ ವಿದ್ಯಾರ್ಥಿಯಾಗಿದ್ದಾನೆ. ಅಂತಿಮ ವರ್ಷದ ಪರೀಕ್ಷೆಗಳು ನಡೆಯುತ್ತಿದ್ದು ಒಂದು ವಿಷಯದ ಪರೀಕ್ಷೆ ಸರಿಯಾಗಿಲ್ಲ ಬರೆದಿಲ್ಲ ಎಂದು ಮಾನಸಿಕ ಖಿನ್ನತೆಗೆ ಒಳಗಾಗಿ ಈ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬಸ್ಥರು ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿದೆ.
ಕಳೆದ ಒಂದು ವರ್ಷದ ಹಿಂದೆ ತಂದೆ ರಾಮದಾಸ ಹೃದಯಾಘಾತದಿಂದ ಸಾವಿಗೀಡಾಗಿದ್ದರು. ಎಂಬಿಬಿಎಸ್ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದ ಶ್ರೀರಾಮ ಎಲ್ಲ ಸೆಮಿಸ್ಟರ್‌ಗಳಲ್ಲಿ ಟಾಪರ್ ವಿದ್ಯಾರ್ಥಿ ಎಂದು ಗುರುತಿಸಿಕೊಂಡಿದ್ದ. ಅಂತಿಮ ವರ್ಷದ ಪರೀಕ್ಷೆಯ ಒಂದು ವಿಷಯದ ಪರೀಕ್ಷೆ ಸರಿಯಾಗಿ ಹೋಗಿಲ್ಲವೆಂದು ಖಿನ್ನತೆಗೆ ಒಳಗಾಗಿ ತಾಯಿ ಹಾಗು ಸಹೋದರನೊಂದಿಗೆ ನೋವು ತೋಡಿಕೊಂಡಿದ್ದ. ಇದಾದ ಮರುದಿನವೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಹಾಸ್ಟೆಲ್ ಕೊಠಡಿಯಲ್ಲಿದ್ದ ಶ್ರೀರಾಮ ಸಹಪಾಠಿ ನಾಗರಾಜ ಜೊತೆಗೂ ಪರೀಕ್ಷೆ ಸರಿಯಾಗಿ ಆಗಿಲ್ಲ ಎಂದು ನೋವು ತೋಡಿಕೊಂಡು ತಡರಾತ್ರಿವರೆಗೆ ನಿದ್ದೆಯೇ ಮಾಡಿರಿಲಿಲ್ಲ ಎಂಬ ಮಾಹಿತಿ ಪೊಲೀಸರ ವಿಚಾರಣೆ ಸಂದರ್ಭದಲ್ಲಿ ತಿಳಿದುಬಂದಿದೆ.
ಪ್ರೇಯಸಿ ಜತೆಗೆ ಓಡಿಹೋಗಿದ್ದ ವ್ಯಕ್ತಿ ನೇಣಿಗೆ ಶರಣು: ಪತ್ನಿ ತೊರೆದು ಪ್ರೇಯಸಿ ಹಿಂದೆ ಹೋಗಿದ್ದ ಭೂಪ..!
ಮಂಗಳವಾರ ಬೆಳಗಿನ ಜಾವ ಮಹಡಿ ಮೇಲೆ ಹೋಗಿ ಅಲ್ಲಿಂದ ಹಾರಿಬಿದ್ದು ಆತ್ಮಹತ್ಯೆಗೆ ಮುಂದಾಗಿದ್ದಾನೆ. ಹಿರಿಯ ಸಹೋದರ ಸಾಫ್ಟವೇರ್ ಎಂಜಿನಿಯರ್ ಆಗಿದ್ದು, ಶ್ರೀರಾಮ ಆತ್ಮಹತ್ಯೆಯ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪಾಲಕರು ಹಾಗೂ ಸಹಪಾಠಿಗಳ ಆಕ್ರಂದನ ಮುಗಿಲು ಮುಟ್ಟಿತ್ತು. ಆತ್ಮಹತ್ಯೆಯ ಕುರಿತಂತೆ ಇಲ್ಲಿನ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
