* ಪತ್ನಿ ಜತೆ ಮೊಬೈಲ್‌ನಲ್ಲಿ ಚಾಟ್‌ ಮಾಡ್ತಿದ್ದ ಸ್ನೇಹಿತನ ಕೊಲೆ*ತನ್ನ ಪತ್ನಿಯ ಜತೆಯೇ ಸ್ನೇಹಿತ ಅನೈತಿಕ ಸಂಬಂಧ ಹೊಂದಿದ್ದ ಎಂದು ಶಂಕಿಸಿ ಹತ್ಯೆ* ಗೌರಿಬಿದನೂರು ತಾಲ್ಲೂಕಿನ ಕಂಬಾಲಪಲ್ಲಿ ಗ್ರಾಮದ ನೀಲಗಿರಿ ಬಳಿ ನಡೆದ ಘಟನೆ

ಚಿಕ್ಕಬಳ್ಳಾಪುರ, (ಜ.23): ತನ್ನ ಪತ್ನಿಯ ಜೊತೆ ವಾಟ್ಸಪ್ (.Whatsapp) ಚಾಟಿಂಗ್ ಮಾಡುತ್ತಿದ್ದ ಎನ್ನುವ ಕಾರಣಕ್ಕೆ ಸ್ನೇಹಿತನನ್ನೇ ಕೊಂದು ಸುಟ್ಟು ಹಾಕಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ತನ್ನ ಪತ್ನಿಯ ಜತೆಯೇ ಸ್ನೇಹಿತ ಅನೈತಿಕ ಸಂಬಂಧ (Illicit Relationship) ಹೊಂದಿದ್ದ ಎಂದು ಶಂಕಿಸಿರುವ ಅಶೋಕ ಎಂಬಾತ ತನ್ನ ಇತರ ಸ್ನೇಹಿತರ ಜತೆಗೂಡಿ ಈ ಕೃತ್ಯ ಎಸಗಿದ್ದಾನೆ.

Illicit Relationship: ಮೇಸ್ತ್ರಿ ಜತೆ ಲವ್ವಿ-ಡವ್ವಿ, ಪತ್ನಿಯನ್ನು ಕೊಂದು ಪೊಲೀಸ್‌ ಠಾಣೆಗೆ ಹೋದ ಪತಿ

ಮುತ್ತಕದಹಳ್ಳಿ ಗ್ರಾಮದ ಶಂಕರ್(28) ಮೃತ ವ್ಯಕ್ತಿಯಾಗಿದ್ದು ಈ ಘಟನೆ ಗೌರಿಬಿದನೂರು ತಾಲ್ಲೂಕಿನ ಕಂಬಾಲಪಲ್ಲಿ ಗ್ರಾಮದ ನೀಲಗಿರಿ ತೋಪಿನ ಬಳಿ ನಡೆದಿದೆ.

ಹಲವು ತಿಂಗಳಿಂದ ಶಂಕರ್‌ ಅಶೋಕನ ಪತ್ನಿಯನ್ನು ಚುಡಾಯಿಸುತ್ತಿದ್ದ. ಪದೇಪದೆ ತಿಳಿ ಹೇಳಲಾಗಿದ್ದರೂ ತನ್ನ ಚಾಳಿ ಮುಂದುವರೆಸಿದ್ದ. ಇದರಿಂದ ಕೆರಳಿದ ಅಶೋಕ್ ಈ ಕೊಲೆ ಮಾಡಿದ್ದಾನೆ ಎಂದೂ ಹೇಳಲಾಗುತ್ತಿದೆ. ಇನ್ನು ಈ ಬಗ್ಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಮಂಚೇನಹಳ್ಳಿ ಪೊಲೀಸ್ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಫೋಟೋಶೂಟ್​ ಹುಚ್ಚಿನಿಂದ ಪ್ರಾಣ ಕಳೆದುಕೊಂಡ ಯುವಕ
ದಾವಣಗೆರೆ: ಫೋಟೋಶೂಟ್​ ಹುಚ್ಚಿನಿಂದಾಗಿ ರೈಲ್ವೆ ಹಳಿ ಮೇಲೆ ನಿಂತು ಫೋಟೋ ತೆಗೆದುಕೊಳ್ಳಲು ಮುಂದಾದ ಯುವಕನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ.

.ದಾವಣಗೆರೆಯ ಡಿಸಿಎಂ ಟೌನ್‌ಶಿಪ್‌ನ ಬಳಿ ಈ ದುರಂತ ಸಂಭವಿಸಿದೆ.ಸಚಿನ್ (16) ಎಂಬಾತ ಸಾವಿಗೀಡಾದ ಯುವಕ

ಫೋಟೋಶೂಟ್​ಗೆಂದು ಈ ಯುವಕ ಗೆಳೆಯರೊಂದಿಗೆ ಇಲ್ಲಿಗೆ ಬಂದಿದ್ದಾನೆ. ಒಳ್ಳೆಯ ಬ್ಯಾಕ್​ಗ್ರೌಂಡ್​​ ಸಿಗುತ್ತದೆ ಎಂದು ಹಳಿ ಮೇಲೆ ನಿಂತವ ಈಗ ಮರಳಿ ಬಾರದ ಲೋಕಕ್ಕೆ ತೆರಳಿದ್ದಾನೆ.

ರೈಲು ಬರುವಾಗ ಹಳಿ ಮೇಲೆ ನಿಂತು ಫೋಟೋ ತೆಗೆದುಕೊಂಡರೆ ಚೆನ್ನಾಗಿ ಕಾಣಿಸುತ್ತದೆ ಎಂದು ಫೋಟೋ ತೆಗೆಸಿಕೊಳ್ಳಲು ಮುಂದಾಗಿದ್ದಾನೆ. ರೈಲು ಪಕ್ಕದ ಹಳಿ ಮೇಲೆ ಸಾಗುತ್ತದೆ ಎಂದುಕೊಂಡಿದ್ದ. ಆದರೆ ರೈಲು ಸಾಗುವ ಹಳಿ ಮೇಲೇ ಆತ ನಿಂತಿದ್ದು, ಆತ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ.