Asianet Suvarna News Asianet Suvarna News

ಸಿಎಂ ತವರು ಜಿಲ್ಲೆಯಲ್ಲೇ ಅನಿಷ್ಟ ಪದ್ಧತಿ ಜೀವಂತ; ಬಹಿಷ್ಕಾರಕ್ಕೆ ಬೇಸತ್ತು ವ್ಯಕ್ತಿ ಸಾವು!

ಕ್ಷುಲ್ಲಕ ಕಾರಣಕ್ಕೆ ಸಮಾಜದಿಂದ ಬಹಿಷ್ಕಾರಕ್ಕೆ ಒಳಗಾಗಿದ್ದ ವ್ಯಕ್ತಿ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಘಟನೆ ಮುಖ್ಯಮಂತ್ರಿ ಸಿದ್ದರಾಮಯ್ಯರ ತವರು ಜಿಲ್ಲೆ ಮೈಸೂರಿನ ನಂಜನಗೂಡು ತಾಲೂಕಿನ ಚನ್ನಪಟ್ಟಣ ಗ್ರಾಮದಲ್ಲಿ ನಡೆದಿದೆ.

a man commits suicide due to social exclusion in channapattan mysuru rav
Author
First Published Sep 24, 2024, 10:34 PM IST | Last Updated Sep 24, 2024, 10:42 PM IST

ಮೈಸೂರು (ಸೆ.24): ಕ್ಷುಲ್ಲಕ ಕಾರಣಕ್ಕೆ ಸಮಾಜದಿಂದ ಬಹಿಷ್ಕಾರಕ್ಕೆ ಒಳಗಾಗಿದ್ದ ವ್ಯಕ್ತಿ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಘಟನೆ ಮುಖ್ಯಮಂತ್ರಿ ಸಿದ್ದರಾಮಯ್ಯರ ತವರು ಜಿಲ್ಲೆ ಮೈಸೂರಿನ ನಂಜನಗೂಡು ತಾಲೂಕಿನ ಚನ್ನಪಟ್ಟಣ ಗ್ರಾಮದಲ್ಲಿ ನಡೆದಿದೆ.

ಸ್ವಾಮಿ (48), ಬಹಿಷ್ಕಾರದಿಂದ ನೊಂದು ಸಾವಿಗೆ ಶರಣಾದ ವ್ಯಕ್ತಿ. ಮಗನ ಸಾವಿಗೆ ಚನ್ನಪಟ್ಟಣ ಗ್ರಾಮದ ಶಿವರಾಜು, ತಾಯಮ್ಮ, ತಿಮ್ಮ ಬೋವಿ, ಲಿಂಗರಾಜು ಕಾರಣರು ಎಂದು ಮೃತರ ತಾಯಿ ಆರೋಪಿಸಿದ್ದಾರೆ. 

ಯಾದಗಿರಿಯಲ್ಲಿ ಅನಿಷ್ಟ ಪದ್ಧತಿ ಇನ್ನೂ ಜೀವಂತ! ರೇಪ್ ಕೇಸ್ ಹಾಕಿದ್ದಕ್ಕೆ ದಲಿತರಿಗೆ ಬಹಿಷ್ಕಾರ! ಆಡಿಯೋ ವೈರಲ್

ಘಟನೆ ಹಿನ್ನೆಲೆ:

ಕಳೆದ ಗ್ರಾಮ ಪಂಚಾಯತಿ ಚುನಾವಣೆ ವೇಳೆ ಕ್ಷುಲ್ಲಕ ಕಾರಣಕ್ಕೆ ಗಲಾಟೆಯಾಗಿತ್ತು. ಈ ವೇಳೆ ಸ್ವಾಮಿ ಕುಟುಂಬದ ಮೇಲೆ ಸಮುದಾಯ ಹಾಗೂ ಗ್ರಾಮಸ್ಥರು ಬಹಿಷ್ಕಾರ ಹಾಕಿದ್ದರು. ಒಂದು ಲಕ್ಷ ರೂಪಾಯಿ ದಂಡ ಕಟ್ಟಿದರೆ ಬಹಿಷ್ಕಾರ ತೆರವುಗೊಳಿಸಿದಾಗಿ ಷರತ್ತು ವಿಧಿಸಿದ್ದ ಗ್ರಾಮಸ್ಥರು. ಬಡ ಕುಟುಂಬಕ್ಕೆ ಒಂದು ಲಕ್ಷ ರೂ ದಂಡ ಕಟ್ಟಲಾಗದೆ ಊರು ತೊರೆದು ಹೊರವಲಯದ ಜಮೀನಿನಲ್ಲಿ ವಾಸ ಮಾಡುತ್ತಿದ್ದರು. ಗ್ರಾಮಸ್ಥರು ಸಂಪರ್ಕ ಕಡಿದುಕೊಂಡ ಬಳಿಕ ದಿನನಿತ್ಯದ ದಿನಸಿ ತರಕಾರಿ, ಸಿಗದೆ ನರಕ ಅನುಭವಿಸಿದ್ದ ಕುಟುಂಬ. ಬಹಿಷ್ಕಾರ ತೆರವುಗೊಳಿಸುವಂತೆ ಸಮುದಾಯ ಹಾಗೂ ಗ್ರಾಮಸ್ಥರನ್ನು ಪರಿಪರಿಯಾಗಿ ಬೇಡಿಕೊಂಡರು ಬಹಿಷ್ಕಾರ ತೆರವುಗೊಳಿಸದ ಗ್ರಾಮಸ್ಥರು. ಒಂದು ಲಕ್ಷ ರೂಪಾಯಿ ದಂಡ ಕಟ್ಟಿದರೆ ತೆರವುಗೊಳಿಸುವುದಾಗಿ ಹೇಳಿದ್ದರು. ಇದರಿಂದ ಇದರಿಂದ ತೀವ್ರ ಮನನೊಂದಿದ್ದ ಸ್ವಾಮಿ ಕೊನೆಗೆ ಬೇಸತ್ತು ಸಾವಿಗೆ ಶರಣಾಗಿದ್ದಾನೆ.

ಅಂತ್ಯಸಂಸ್ಕಾರಕ್ಕೂ ಬಾರದ ಸಂಬಂಧಿಕರು!

ಇತ್ತ ತಾಯಿ ತಿಮ್ಮವ್ವಳ ಸಂಕಷ್ಟ ಶತ್ರುವಿಗೂ ಬೇಡ. ಒಂದೆಡೆ ಮಗನ ಶವ, ಇನ್ನೊಂದೆಡೆ ಮಗನ ಸಾವಿನ ಅಂತ್ಯಸಂಸ್ಕಾರಕ್ಕೂ ಸಂಬಂಧಿಕರು, ಸಮುದಾಯದ ಜನ. ಗ್ರಾಮಸ್ಥರು ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಮಗನ ಅಂತ್ಯ ಸಂಸ್ಕಾರ ಮಾಡಲಾಗದೆ ತಾಯಿ ತಿಮ್ಮಮ್ಮ ಮನೆಯಲ್ಲೇ ಮಗನ ಕಳೇಬರ ಇಟ್ಟುಕೊಂಡು ಇಟ್ಟುಕೊಂಡು ಕಣ್ಣೀರು ಸುರಿಸುತ್ತ ಕುಳಿತಿದ್ದು ನೋಡುವವರ ಕರುಳು ಕಿತ್ತುಬರುತ್ತದೆ.

ನಿಷೇಧಿಸಿದ್ರೂ ಅನಿಷ್ಟಪದ್ಧತಿ ಜೀವಂತ; ಮಲ ಹೊರಿಸಿದರೆ ಮುಲಾಜಿಲ್ಲದೆ ಕ್ರಮ: ಸಿಎಂ

ನ್ಯಾಯಕ್ಕಾಗಿ ತಾಯಿ ಆಗ್ರಹ:

ನನ್ನ ಮಗನ ವಿರುದ್ಧ ವಿನಾ ಕಾರಣ ದ್ವೇಷ ಸಾಧಿಸಿದ್ದಾರೆ. ಚನ್ನಪಟ್ಟಣ ಗ್ರಾಮಪಂಚಾಯ್ತಿ ಚುನಾವಣೆ  ವೇಳೆ ನೆಪ ಮಾಡಿಕೊಂಡು ನನ್ನ ಮಗನ ಮೇಲೆ ಆರೋಪ ಹೊರಿಸಿ ಬಹಿಷ್ಕಾರ ಹಾಕಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿರುವ ತಾಯಿ. ನನ್ನ ಮಗನ ಸಾವಿಗೆ ನ್ಯಾಯ ಕೊಡಿ ಸ್ವಾಮಿ ಸರ್ಕಾರಕ್ಕೆ ಪೊಲೀಸರಿಗೆ ಮನವಿ ಮಾಡಿದ್ದಾರೆ

Latest Videos
Follow Us:
Download App:
  • android
  • ios