ಚಿಕನ್, ರೊಟ್ಟಿ ತಿಂದ ಮನೆಯಲ್ಲೇ 2 ಹೆಣ ಉರುಳಿಸಿದ ಆಳು, ಬೆಚ್ಚಿಬಿದ್ದ ಗ್ರಾಮ

* ಚಿಕನ್ ಸಾರು, ರೊಟ್ಟಿ ತಿಂದ ಮನೆಯಲ್ಲೆ ಎರಡು ಹೆಣ ಉರುಳಿಸಿದ.. 
* ಅಣ್ತಮ್ಮ ಅಂದವರ ಕೊಲೆಗೈದ ಮನೆ ಆಳು..!
* ಕೆರೆಹಳ್ಳಿ ಗ್ರಾಮಸ್ಥರನ್ನ ಬೆಚ್ಚಿ ಬೀಳಿಸಿದ ಡಬಲ್ ಮರ್ಡರ್ 

A Man Arrested By Police For Who Killed  two Youth In Gadag District rbj

ಗದಗ, (ಜುಲೈ.01): ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕೆರೆಹಳ್ಳಿಯಲ್ಲಿ ನಡೆದ ಡಬಲ್ ಮರ್ಡರ್ ಗ್ರಾಮದ ಜನರನ್ನ ಬೆಚ್ಚಿ ಬೀಳಿಸಿದೆ.. ರಾತ್ರಿ ಹೊಟ್ಟೆತುಂಬ ಚಿಕನ್ ಊಟ ಮಾಡಿ ಮನೆ ಮಾಳಿಗೆ ಮೇಲೆ ಮಲಗಿದ್ದ ಇಬ್ಬರು ಯುವಕರನ್ನು ಮನೆ ಕೆಲಸದವನೇ ದೊಣ್ಣೆಯಿಂದ ಹೊಡೆದು ಹತ್ಯೆ ಮಾಡಿರೋ ಘಟನೆ ನಡೆದಿದೆ.. 

ಫಕ್ಕಿರೇಶ್ ಮಾಚೇನಹಳ್ಳಿ(17) ಮಹಾಂತೇಶ್ ಮಾಚೇನಹಳ್ಳಿ (28) ಕೊಲೆಗೀಡಾದ ಯುವಕರು.. ಶಿರಹಟ್ಟಿ ತಾಲೂಕಿನ ಅಲಗಿಲವಾಡ ಗ್ರಾಮದ ನಿವಾಸಿ ಮಂಜುನಾಥ್(40) ಕೊಲೆ ಮಾಡಿದ ವ್ಯಕ್ತಿ ಎಂದು ಪೊಲೀಸರು ತಿಳಿಸಿದ್ದು, ಸದ್ಯ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

Crime News: ವರದಕ್ಷಿಣೆಗಾಗಿ ಸೊಸೆಯನ್ನು ವಿದ್ಯುತ್‌ ತಂತಿಗೆ ಕಟ್ಟಿ ಕೊಂದ ಅತ್ತೆ-ಮಾವ

ಮುಂಡರಗಿ ತಾಲೂಕಿನ ಹಲಗಿಲವಾಡದಲ್ಲಿದ್ದ ಮಂಜುನಾಥ್ ನನ್ನ ಮಹಾಂತೇಶ್ ನಿನ್ನೆ ಸಂಜೆ ಗ್ರಾಮಕ್ಕೆ ಕರೆದುಕೊಂಡು ಬಂದಿದ್ರು.. ಹುಷಾರಿಲ್ಲ ಅನ್ನೋ ಕಾರಣಕ್ಕೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿತಿತ್ಸೆ ಕೊಡೆಸಿದ್ರು. ಮಹಾಂತೇಶ್ ನ  ತಾಯಿ ಪಕ್ಕೀರವ್ವ ಮೂವರಿಗೆ ಚಿಕನ್ ಸಾರು, ರೊಟ್ಟಿ ಮಾಡಿ ಹೊಟ್ಟೆತುಂಬಾ ಊಟ ಮಾಡಿಸಿದ್ದಾಳೆ..ಊಟ ಮಾಡಿದ ಮಹಂತೇಶ್, ಫಕ್ಕೀರೇಶ್, ಮಂಜುನಾಥ್ ಮನೆ ಮಾಳಿಗೆ ಮೇಲೆ ಮಲ್ಕೊಳೋದಕ್ಕೆ ಹೋಗಿದ್ರು.. ಆರೋಪಿ ಮಂಜುನಾಥ್ ಇಬ್ಬರು ಮಲಗುವವರೆಗೆ ಕಾಯ್ದು ಕೂತಿದ್ದ.. ಮೂರು ಗಂಟೆಗೆ ಸುಮಾರಿಗೆ ನಿದ್ದೆಗೆ ಜಾರಿದ್ದ ಮಹಾಂತೇಶ್ ನ ತಲೆಗೆ ಅಲ್ಲೇ ಇದ್ದ ದೊಣ್ಣೆಯಿಂದ ಹೊಡೆದು ಗಾಯಗೊಳಿಸಿದ್ದ.. ಮಹಾಂತೇಶ್ ಚೀರುತ್ತಿದ್ದಂತೆಯೇ ಪಕ್ಕದಲ್ಲಿಯೇ ಮಲಗಿದ್ದ ಫಕ್ಕೀರೇಶ್ ಎಚ್ಚರವಾಗಿ ಕೂಗುತ್ತಿದ್ದಂತೆಯೇ ಆತನ ಮೇಲೂ ಬಡಿಗೆಯಿಂದ ತಲೆ, ಭುಜದ ಭಾಗಕ್ಕೆ ಬಲವಾಗಿ ಹೊಡಿದಿದ್ದಾನೆ. ಮಲಗಿದಲ್ಲೇ ಇಬ್ಬರು ಯುವಕರ ಉಸಿರು ಚೆಲ್ಲಿದ್ರು..

ಹತ್ಯೆ ಮಾಡಿ ಮೆಟ್ಟಲು ಮೇಲೆ ಕೂತಿದ್ದ ಹಂತಕ..!
ಹತ್ಯೆ ಮಾಡಿದ್ದ ಆರೋಪಿ ಬರೋಬ್ಬರಿ ಒಂದು ಗಂಟೆಗಳ ಕಾಲ ಮೆಟ್ಟಿಲ ಮೇಲೆ ಕೂತಿದ್ದ.. ದೊಣ್ಣೆಯಿಂದ ನೆಲಕ್ಕೆ ಕುಟ್ಟುತ್ತ ಕೂತಿದ್ನಂತೆ.. ಮಹಡಿ ಮೇಲೆನ ಸಪ್ಪಳ ಮಹಾಂತೇಶ್ ನ ತಾಯಿ ಪಕ್ಕೀರವ್ವನಿಗೆ ಕೇಳಿದೆ.. ಮೇಲೆ ಹೋಗಿ ಏನಾಗಿದೆ ಅಂತಾ ನೋಡಲು ಹೋಗ್ಬೇಕೆನ್ನುಷಟ್ಟರಲ್ಲಿ ಮೆಟ್ಟಿಲ ಮೇಲಿದ್ದ ಹಂತಕ ಮಂಜುನಾಥ್, ಮೇಲೆ ಬಂದ್ರೆ ಮತ್ತೊಂದು ಜೀವ ತುಗೋತೇನಿ ಅಂತಿದ್ನಂತೆ.. ನಂತ್ರ ಗ್ರಾಮಸ್ಥರು ಆತನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.‌..

ಹಣದ ವಿಚಾರಕ್ಕೆ ನಡೆಯಿತಾ ಕೊಲೆ..?
ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ.. ಆದ್ರೆ, ಹಣದ ವಿಚಾರಕ್ಕೆ ಕೊಲೆ ನಡೆದಿದ್ಯಾ ಅನ್ನೋ ವಿಚಾರ ಚರ್ಚೆಯಲ್ಲಿದೆ.. ಮಹಾಂತೇಶ್ ಕುರಿ ಸಾಕಾಣಿಕೆ ಮಾಡ್ಕೊಂಡಿದ್ದ.. ಕುರಿ ದೊಡ್ಡಿಯಲ್ಲಿ ಕೆಲಸ ಮಾಡೋದಕ್ಕೆ ಅಂತಾ ಮಂಜುನಾಥ್ ನನ್ನ ಕರೆದುಕೊಂಡು ಬಂದಿದ್ದ.. ಸುಮಾರು ಎರಡು ವರ್ಷದ ಹಿಂದಿನಿಂದಲೂ ಮಂಜುನಾಥ್ ಕೆಲಸ ಮಾಡ್ಕೊಂಡು ಬಂದಿದ್ದ.. ತಿಂಗಳಿಗೆ 15 ಸಾವಿರ ರೂಪಾಯಿಯಂತೆ ನಿಗದಿಯಾಗಿತ್ತು.. ಹಣದ ವಿಚಾರವಾಗಿ ಏನಾದ್ರೂ ಗಲಾಟೆ ನಡೆದಿತ್ತಾ ಅನ್ನೋ ಅನುಮಾನವೂ ಇದೆ.. ಇದಲ್ದೆ, ಬೇರೆ ಕಾರಣಗಳೂ ಇವೆ ಈ ಬಗ್ಗೆ ತನಿಖೆ ನಡೀತಿದೆ ಅಂತಾ ಎಸ್ ಪಿ ಶಿವಪ್ರಕಾಶ್ ದೇವರಾಜು ಮಾಹಿತಿ ನೀಡಿದ್ದಾರೆ..  

ಸದ್ಯ ಶಿರಹಟ್ಟಿ ಪೊಲೀಸರ ವಶದಲ್ಲಿರುವ ಮಂಜುನಾಥ್ ನ ವಿಚಾರಣೆ ನಡೀತಿದೆ... ಕೊಲೆಗೆ ನಿಖರವಾದ ಕಾರಣ ಪತ್ತೆ ಹಚ್ಚಲಾಗ್ತಿದೆ..

ಘಟನಾ ಸ್ಥಳಕ್ಕೆ ಎಸ್ಸಿ ಶಿವಪ್ರಕಾಶ್ ದೇವರಾಜ್, ಇನ್ಸ್‌ಪೆಕ್ಟರ್ ವಿಕಾಸ್ ಲಮಾಣಿ ಭೇಟಿ ನೀಡಿ ಪರಿಶೀಲನೆನ್ನೂ ನಡೆಸಿದ್ದು ಪ್ರಕರಣದ ಸ್ಪಷ್ಟತೆಗೆ ಖಾಕಿ ಟೀಮ್ ಫುಲ್ ಅಲರ್ಟ್ ಆಗಿದೆ...

Latest Videos
Follow Us:
Download App:
  • android
  • ios