ಸೀಬರ್ಡ್ ಯುಎಸ್‌ಎಲ್‌ನಲ್ಲಿ ಕೆಲಸ ಕೊಡಿಸುವುದಾಗಿ ಯುವಕನಿಗೆ 2 ಲಕ್ಷ ರೂಪಾಯಿ ಪಂಗನಾಮ!
ಸೀಬರ್ಡ್ ಯುಎಸ್‌ಎಲ್‌ನಲ್ಲಿ ಕೆಲಸ ಕೊಡಿಸುವುದಾಗಿ ಆಮಿಷವೊಡ್ಡಿ ಯುವಕನೋರ್ವನಿಗೆ ಲಕ್ಷಾಂತರ ರೂಪಾಯಿ ಪಂಗನಾಮ ಹಾಕಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ.
ಕಾರವಾರ, ಉತ್ತರಕನ್ನಡ (ಜು.2): ಸೀಬರ್ಡ್ ಯುಎಸ್‌ಎಲ್‌ನಲ್ಲಿ ಕೆಲಸ ಕೊಡಿಸುವುದಾಗಿ ಆಮಿಷವೊಡ್ಡಿ ಯುವಕನೋರ್ವನಿಗೆ ಲಕ್ಷಾಂತರ ರೂಪಾಯಿ ಪಂಗನಾಮ ಹಾಕಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ.
ರಾಘವೇಂದ್ರ ರಮೇಶ್ ನಾಯ್ಕ್, ಮೋಸಗೊಂಡ ಯುವಕ. ಕಾರವಾರದ ನಂದನಗದ್ದಾ ನಿವಾಸಿಯಾಗಿರುವ ರಾಘವೇಂದ್ರ ರಮೇಶ್ ನಾಯ್ಕ್ ಸೀಬರ್ಡ್ ಯುಎಸ್‌ಎಲ್‌ನಲ್ಲಿ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದರು. ಇದನ್ನೇ ಬಂಡಾವಳ ಮಾಡಿಕೊಂಡ ಆರೋಪಿಗಳಾದ ಪ್ರಸಾದ್ ಮಹಾದೇವ ಪೆಡ್ನೇಕರ್ ಎಂಬುವವನು ನನಗೆ ಕಮಾಂಡರ್ ಪರಿಚಯವಿದೆ. ಅವರು ಸೀಬರ್ಡ್‌ನಲ್ಲೇ ಕೆಲಸ ಮಾಡ್ತಿರೋದು ಎಂದು ಯುವಕನನ್ನ ನಂಬಿಸಿದ್ದಾನೆ. ಅಲ್ಲಿ ಕೆಲಸ ಕೊಡಿಸುವ ಜವಾಬ್ದಾರಿ ನಮಗೆ ಬಿಡು ಆದರೆ 5 ಲಕ್ಷ ರೂ. ಬೇಕು ಎಂದಿದ್ದಾರೆ. ಅದಕ್ಕೆ ಯುವಕ, 'ನನ್ನಲ್ಲಿ ಅಷ್ಟು ಹಣವಿಲ್ಲ ಎಂದಾಗ ಯುವಕನಿಂದ 2 ಲಕ್ಷ ರೂಪಾಯಿ ಪಡೆದಿರುವ ವಂಚಕರು.
ಕಡಿಮೆ ಬೆಲೆ ಅಂತಾ ಸೆಕೆಂಡ್ ಹ್ಯಾಂಡ್ ಬೈಕ್ ಕೊಳ್ಳುವ ಮುನ್ನ ಎಚ್ಚರ ಎಚ್ಚರ!
ಯುವಕ ಕೆಲಸದ ಆಸೆಗೆ ವಂಚಕರಿಗೆ 2 ಲಕ್ಷ ರೂಪಾಯಿ ನೀಡಿದ್ದಾನೆ. ಅಷ್ಟಕ್ಕೆ ಸಾಲದ ಆರೋಪಿಗಳು ಆರ್ಡರ್ ಕಾಪಿ ಬಂದ ಬಳಿಕ 3 ಲಕ್ಷ ರೂಪಾಯಿ ನೀಡಬೇಕೆಂದು ಬೇಡಿಕೆ ಇಟ್ಟಿದ್ದ ಆರೋಪಿ ಪ್ರಸಾದ್. ಆರೋಪಿ ಪ್ರಸಾದ್ ಜೊತೆಗೆ ಸೂಚನೆಯಂತೆ ಇನ್ನೋರ್ವ ಆರೋಪಿ ಸಿದ್ದೇಶ ಪ್ರಕಾಶ್ ಪೆಡ್ನೇಕರ್ ಎಂಬುವವನ ಖಾತೆಗೆ 2020ರ ಡಿ.11ರಂದು 2 ಲಕ್ಷ ರೂಪಾಯಿ ಖಾತೆಗೆ ವರ್ಗಾವಣೆ ಮಾಡಿದ್ದ ಯುವಕ. ಆದರೆ ಅವತ್ತಿನಿಂದ ಇಂದಿನವರೆಗೂ ನಾಳೆ ಇವತ್ತು ಅನ್ನುತ್ತಾ ಬಂದಿರುವ ಆರೋಪಿಗಳು. ಅತ್ತ ಕೆಲಸವೂ ಸಿಗದೇ ಇತ್ತ ಹಣವೂ ಹಿಂತಿರುಗಿಸದೇ ವಂಚಿಸಿರುವ ಆರೋಪಿಗಳು. ಈ ಹಿನ್ನೆಲೆ ಕೆಲಸ, ಹಾಗೂ ಹಣಕ್ಕೆ ಕಾದು ಸುಸ್ತಾಗಿ ಕೊನೆಗೆ ಪೊಲೀಸರಿಗೆ ದೂರು ನೀಡಿರುವ ಯುವಕ ರಾಘವೇಂದ್ರ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಕಾರವಾರ ನಗರ ಠಾಣೆ ಪೊಲೀಸರು ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.