ಫ್ರಿಸ್ಕೂಲ್ ಕಟ್ಟಡದ ಮೂರನೇ ಮಹಡಿಯಿಂದ ಬಿದ್ದಿದ್ದ ನಾಲ್ಕು ವರ್ಷದ ಮಗು ಚಿಕಿತ್ಸೆ ಫಲಿಸದೇ ಸಾವು!
ಫ್ರಿಸ್ಕೂಲ್ ಕಟ್ಟಡದ ಮೂರನೇ ಮಹಡಿಯಿಂದ ಬಿದಿದ್ದ ನಾಲ್ಕು ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಚೆಳ್ಳೆಕೆರೆಯಲ್ಲಿ ನಡೆದಿದೆ. ಜನವರಿ 22 ರಂದು ಆಟವಾಡುತ್ತಿದ್ದಾಗ ಮೂರನೇ ಮಹಡಿಯಿಂದ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ಬಾಲಕಿ ಗಿಯನ್ನಾ ಆನ್ ಜಿಟೊವನ್ನು ಹೆಬ್ಬಾಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಮೃತಪಟ್ಟಿರುವುದಾಗಿ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಬೆಂಗಳೂರು: ಫ್ರಿಸ್ಕೂಲ್ ಕಟ್ಟಡದ ಮೂರನೇ ಮಹಡಿಯಿಂದ ಬಿದಿದ್ದ ನಾಲ್ಕು ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಚೆಳ್ಳೆಕೆರೆಯಲ್ಲಿ ನಡೆದಿದೆ. ಜನವರಿ 22 ರಂದು ಆಟವಾಡುತ್ತಿದ್ದಾಗ ಮೂರನೇ ಮಹಡಿಯಿಂದ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ಬಾಲಕಿ ಗಿಯನ್ನಾ ಆನ್ ಜಿಟೊವನ್ನು ಹೆಬ್ಬಾಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಮೃತಪಟ್ಟಿರುವುದಾಗಿ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಗಿಯಾನ್ನಾ ಕೇರಳದ ಜಿಟೋ ಟೋಮಿ ಜೋಸೆಫ್ ಮತ್ತು ಬಿನಿಟ್ಟಾ ಥಾಮಸ್ ದಂಪತಿಯ ಪುತ್ರಿ. ದಂಪತಿ ಸಾಫ್ಟ್‌ವೇರ್ ವೃತ್ತಿಪರರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಷಕರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡಲಾಗಿದೆ ಎಂದು ಶಾಲಾ ಆಡಳಿತ ಮಂಡಳಿ ವಿರುದ್ಧ ತನಿಖೆ ನಡೆಸಲಾಗುತ್ತಿದೆ.
ನಮ್ಮ ಕ್ಲಿನಿಕ್ ಬಗ್ಗೆ ಸರ್ಕಾರದ ದಿವ್ಯ ನಿರ್ಲಕ್ಷ್ಯ..!
ಬಾಲಕಿ ಗೋಡೆ ಹತ್ತಿ ಕೆಳಗೆ ಬಿದ್ದ ನಂತರವೂ ಶಾಲೆಯ ಅಧಿಕಾರಿಗಳು ಗಮನಕ್ಕೆ ಬಂದಿಲ್ಲ ಎಂದು ಮೂಲಗಳು ತಿಳಿಸಿವೆ. ಘಟನೆಗೆ ನಿಜವಾದ ಕಾರಣವನ್ನು ಅಧಿಕಾರಿಗಳು ಮುಚ್ಚಿಡಲು ಪ್ರಯತ್ನಿಸಿದ್ದಾರೆ. ಬಾಲಕಿ ಡೇಕೇರ್‌ನಲ್ಲಿ ಗೋಡೆಗೆ ಡಿಕ್ಕಿ ಹೊಡೆದು ಕೆಳಗೆ ಬಿದಿದ್ದು, ವಾಂತಿ ಮಾಡಿಕೊಂಡಿದ್ದಾಳೆ. ನಂತರ ಶಾಲೆಯವರು ಮೂರನೇ ಮಹಡಿಯಿಂದ ಬಿದ್ದಿದ್ದಾಳೆ ಎಂದು ಒಪ್ಪಿಕೊಳ್ಳಲು ಮುಂದೆ ಬಂದರು ಎಂದು ಕುಟುಂಬದವರು ಪೊಲೀಸರಿಗೆ ತಿಳಿಸಿದ್ದಾರೆ.
ಎನ್‌ಆರ್‌ಐಗಳು ದತ್ತು ಪಡೆಯಲು ನೆಲೆಸಿದ ದೇಶದ ಒಪ್ಪಿಗೆ ಕಡ್ಡಾಯ: ಹೈಕೋರ್ಟ್
ಗಿಯಾನಾ ಪ್ರತಿಭಾನ್ವಿತ ಬಾಲಕಿಯಾಗಿದ್ದು, ಚಿಕ್ಕ ವಯಸ್ಸಿನಲ್ಲಿಯೇ ಸಂಗೀತ ಸಂಯೋಜನೆ, ಗಾಯನದಲ್ಲಿ ತುಂಬಾ ಆಸಕ್ತಿ ಹೊಂದಿದ್ದಳು. ಆಕೆ ಎತ್ತರ ಪ್ರದೇಶ ಹೋಗಲು ಹೆದರುತ್ತಿದ್ದಳು. ಟೆರೇಸ್‌ಗೆ ಹೋಗಿರುವ ಸಾಧ್ಯತೆಯಿಲ್ಲ ಎಂದು ಕುಟುಂಬದವರು ಹೇಳಿಕೊಂಡಿದ್ದಾರೆ. ಈ ಸಂಬಂಧ ಶಾಲೆ ಹಾಗೂ ಪ್ರಾಂಶುಪಾಲರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಐಪಿಸಿ ಸೆಕ್ಷನ್ 304ಎ ಅಡಿಯಲ್ಲಿ ತನಿಖೆ ಕೈಗೊಂಡಿದ್ದಾರೆ. ಸ್ಕೂಲ್ ನಲ್ಲಿ ಬಾಲಕಿ ಕೆಳಗೆ ಬಿದ್ದಾಗ ಶಾಲೆಯ ಮಹಿಳಾ ಸಹಾಯಕರು ಇತರ ಮಕ್ಕಳಿಗೆ ಆಹಾರ ಮತ್ತು ಆರೈಕೆಯಲ್ಲಿ ನಿರತರಾಗಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.