ಭೋಪಾಲ್ ( ಡಿ. 06 )  ಈ ಕಲಿಯುಗದಲ್ಲಿ ಎಂತೆಂಥಾ ಸುದ್ದಿಗಳನ್ನು ನೋಡಬೇಕೋ.. ಹೆತ್ತ ತಾಯಿಯನ್ನೇ ಪಾಪಿ ಪುತ್ರರು  ವಯಸ್ಸಾದ ಹೊತ್ತಲ್ಲಿ ಬೀದಿಗೆ ಬಿಟ್ಟಿದ್ದಾರೆ.

ನಾಲ್ಕು ಜನ ಗಂಡುಮಕ್ಕಳು ಇಂಥ ಕೆಲಸ ಮಾಡಿದ್ದಾರೆ.  99 ವರ್ಷದ ತಾಯಿಯನ್ನು ರಸ್ತೆಗೆ ಬಿಟ್ಟಿದ್ದು ವೃದ್ಧೆಯ  ಹೋರಾಟ ಎಂಥವರ ಕಣ್ಣಲ್ಲಿಯೂ ನೀರು ತರಿಸಿದೆ.

ಅಶೋಕ್ ನಗರ ನಗರದ ನಿವಾಸಿಯಾದ ವೃದ್ಧ ಮಹಿಳೆ ಕಳೆದ ವಾರ ಭೋಪಾಲ್ ಜಿಲ್ಲಾ ನ್ಯಾಯಾಲಯಕ್ಕೆ ಮೊಕದ್ದಮೆ ಹೂಡಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ, ತನ್ನ ಪುತ್ರರಿಂದ 10,000 ರೂ. ಮಾಸಿಕ ನಿರ್ವಹಣಾ ಭತ್ಯೆ ಮತ್ತು ಸಾವಿನವರೆಗೂ ಗೌರವಯುತವಾಗಿ ಬದುಕು ಸಾಗಿಸಲು ಅವಕಾಶ ಮಾಡಿಕೊಡಬೇಕು ಎಂದು ವೃದ್ಧೆ ಕೋರಿಕೊಂಡಿದ್ದಾರೆ.

ಸಮಯಕ್ಕೆ ಸರಿಯಾಗಿ ಸಿದ್ಧವಾಗದ ಅಡುಗೆ, ಪತ್ನಿ ಹತ್ಯೆ ಮಾಡಿ ಗಂಡ ಎಸ್ಕೇಪ್!

ಮಹಿಳೆಗೆ ಆರು ಜನ ಗಂಡು ಮಕ್ಕಳಿದ್ದು. ಹಿರಿಯ ಮಗ ಮೃತಪಟ್ಟಿದ್ದಾರೆ. ಉಳಿದ ನಾಲ್ಕು ಮಕ್ಕಳೊಂದಿಗೆ ತಾಯಿ ಜೀವನ ಸಾಗಿಸುತ್ತಿದ್ದರು. ಇಬ್ಬರು ಮಕ್ಕಳು ಸರ್ಕಾರಿ ನೌಕರರು ಮತ್ತು ಇಬ್ಬರು ಕೃಷಿಯಿಂದ ಜೀವನ ಸಾಗಿಸುತ್ತಾರೆ. ಕೊನೆಯ ಪುತ್ರ ಮಾನಸಿಕವಾಗಿ ಸಮಸ್ಯೆಯಿಂದ ಬಳಲುತ್ತಿದ್ದ.  2001 ರಲ್ಲಿ ಅವರ ಪತಿಯ ಮರಣದ ನಂತರ ಮಹಿಳೆ ಒಂಟಿಯಾಗಿದ್ದರು.

2001 ರಲ್ಲಿ ನನ್ನ ಗಂಡನ ಮರಣದ ನಂತರ, ನನ್ನ ನಾಲ್ಕು ಗಂಡು ಮಕ್ಕಳು 8 ಎಕರೆ ಕೃಷಿ ಭೂಮಿ ಮತ್ತು ಅಶೋಕ್ ನಗರದಲ್ಲಿ ಒಂದು ಮನೆ ಸೇರಿದಂತೆ ಇಡೀ ಆಸ್ತಿಯನ್ನು ಅತಿಕ್ರಮಿಸಿಕೊಂಡರು. ಅಲ್ಲಿಂದ ನನಗೆ ಕಿರುಕುಳ ನೀಡಲು ಆರಂಭಿಸಿದರು. ಮಾನಸಿಕವಾಗಿ  ನನ್ನನ್ನು  ತುಂಬಾ ನೋಯಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

ಎರಡು ತಿಂಗಳ ಹಿಂದೆ ಮಕ್ಕಳು ನನ್ನನ್ನು ಮನೆಯಿಂದ ಹೊರಹಾಕಿದರು. ಅವಳನ್ನು ಮನೆಯಿಂದ ಹೊರಹಾಕಿದರು. ಮಹಿಳೆ  ಬೀದಿಯಲ್ಲೇ ಎರಡು ದಿನ ಕಳೆದಿದ್ದಾರೆ. ಆದರೆ ಮಾನಸಿಕವಾಗಿ ಸರಿ ಇಲ್ಲ ಎಂದು ಭಾವಿಸಿರುವ ಕೊನೆ ಮಗ  ತಾಯಿಯನ್ನು ಕರೆದುತಂದಿದ್ದಾನೆ.

ಈ ಆರೋಪವನ್ನು ಮಕ್ಕಳು ತಳ್ಳಿಹಾಕಿದ್ದು ತಾಯಿಗೆ ವಯಸ್ಸಾಗಿರುವ ಕಾರಣ ಸ್ಥಿಮಿತ ಕಳೆದುಕೊಂಡು ಮಾತನಾಡುತ್ತಿದ್ದಾರೆ ಎಂದಿದ್ದಾರೆ .