ಹೈದರಾಬಾದ್( ಡಿ. 06 ) ಇಲ್ಲೊಬ್ಬ ಪಾಪಿ ಗಂಡ ಸರಿಯಾದ ಸಮಯಕ್ಕೆ ಹೆಂಡತಿ ಅಡುಗೆ ಮಾಡಿಲ್ಲ ಎಂದು ಪತ್ನಿಯನ್ನೇ ಹತ್ಯೆ ಮಾಡಿದ್ದಾರೆ.  ಹೈದರಾಬಾದ್ ಬಳಿಯ ತೆಲಂಗಾಣದ ಮೀರ್‌ಪೇಟ್‌ನಲ್ಲಿರುವ ಮನೆಯಲ್ಲೇ ಘಟನೆ ನಡೆದಿದೆ.

40 ವರ್ಷದ ಹೆಂಡತಿಯನ್ನು ಕೊಲೆ ಮಾಡಿದ ಆರೋಪದ ಮೇಲೆ  ಲಾರಿ ಚಾಲಕನಾಗಿರುವ 45 ವರ್ಷದ ವ್ಯಕ್ತಿಯ ವಿರುದ್ಧ ಎಫ್‌ಐಆರ್  ದಾಖಲಿಸಲಾಗಿದೆ. 

ಮದುವೆಗೆ 3  ದಿನ ಇದ್ದಾಗ ಯುವಕನ ಮರ್ಮಾಂಗಕ್ಕೆ ಕತ್ತರಿ, ಎಂಥಾ ಫ್ರೆಂಡ್ಸ್!

ಆರೋಪಿ ಶ್ರೀನು ಪತ್ನಿ ಬಿ ಜಯಮ್ಮರನ್ನು ಹತ್ಯೆ ಮಾಡಿದ್ದಾನೆ., 20 ವರ್ಷಗಳ ಹಿಂದೆ ಇಬ್ಬರು ಮದುವೆಯಾಗಿದ್ದರು.  ಕಳೆದ  ಶುಕ್ರವಾರ, ಜಯಮ್ಮ ತನ್ನ ಮಗನೊಂದಿಗೆ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ತೆರಳಿದ್ದರು.  ಇನ್ನೊಂದು ಕಡೆ ಆರೋಪಿ ತೆರಳಿದ್ದ. ಮನೆಗೆ ಬಂದ ವೇಳೆ ಊಟಕ್ಕೆ ಅಡುಗೆ ತಯಾರು ಇಲ್ಲದ್ದನ್ನು ಕಂಡು ಕೆಂಡಾಮಂಡಲವಾಗಿದ್ದಾನೆ.

ಗಂಡ ಹೆಂಡತಿ ನಡುವೆ ಜಗಳ ಆರಂಭವಾಗಿದೆ.  ಕೋಪದಲ್ಲಿ ಪತ್ನಿಯನ್ನು ಸೀರೆಯಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.  ತಾಯಿ ಮನೆಯಲ್ಲಿ ಸತ್ತು ಬಿದ್ದಿರುವುದನ್ನು ಮಗ ಕಂಡಿದ್ದಾನೆ. ಇನ್ನೊಂದು ಕಡೆ ತಂದೆ ನಾಪತ್ತೆಯಾಗಿದ್ದ. ಪ್ರಕರಣ ದಾಖಲಿಸಿದ್ದು ಆರೋಪಿ ಪತ್ತೆಗೆ ಬಲೆ ಬೀಸಲಾಗಿದೆ.