*   ವಿದೇಶದಲ್ಲಿ ಪ್ರಕರಣ ದಾಖಲಾಗಿದೆ ಎಂದು ಬೆದರಿಸಿ ಹಣ ಸುಲಿಗೆ*  13 ದೇಶಗಳಿಗೆ ಆರೋಪಿ ಭೇಟಿ*  ಪೊಲೀಸರನ್ನು ಭೇಟಿ ಮಾಡಿದ್ದ ಆರೋಪಿ 

ಬೆಂಗಳೂರು(ಮೇ.01):  ನಿಮ್ಮ ವಿರುದ್ಧ ವಿದೇಶದಲ್ಲಿ ದಾಖಲಾಗಿರುವ ಉಗ್ರ ಚಟುವಟಿಕೆ ಪ್ರಕರಣವನ್ನು ಹಿಂಪಡೆಯಲು ಸಹಕರಿಸುವುದಾಗಿ ಎಂದು ಸುಳ್ಳು ಹೇಳಿ ಪ್ರಧಾನ ಮಂತ್ರಿ ಕಚೇರಿ ಹಾಗೂ ರಾ ಅಧಿಕಾರಿ ಸೋಗಿನಲ್ಲಿ ಸಾಫ್ಟ್‌ವೇರ್‌ ಮಹಿಳಾ ಉದ್ಯೋಗಿಯೊಬ್ಬರಿಂದ 89 ಲಕ್ಷ ಸುಲಿಗೆ ಮಾಡಿದ್ದ ಚಾಲಾಕಿ ನಕಲಿ ಅಧಿಕಾರಿ ಬೆಳ್ಳಂದೂರು ಠಾಣೆ ಪೊಲೀಸರ(Police) ಬಲೆಗೆ ಬಿದ್ದಿದ್ದಾನೆ.

ರಾಜಾಜಿನಗರದ ನಿವಾಸಿ ಅರಹಂತ್‌ ಮೋಹನ್‌ ಕುಮಾರ್‌ ಲಕ್ಕವಳ್ಳಿ ಅಲಿಯಾಸ್‌ ಆನಂದ್‌ ಬಂಧಿತನಾಗಿದ್ದು(Arrest), ಆರೋಪಿಯಿಂದ(Accused) ಕೆಲ ದಾಖಲೆಗಳು, ಪಾಸ್‌ ಪೋರ್ಟ್‌ ಹಾಗೂ ಹಣ ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಸಾಫ್ಟ್‌ವೇರ್‌ ಉದ್ಯೋಗಿ ಸುನಾಲ್‌ ಸಕ್ಸೆನಾ ಅವರಿಗೆ ವಿದೇಶದಲ್ಲಿ ಪ್ರಕರಣ ದಾಖಲಾಗಿದೆ ಎಂದು ಬೆದರಿಸಿ ಆರೋಪಿ ಹಣ ಸುಲಿಗೆ ಮಾಡಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.

ಚಿಕ್ಕಬಳ್ಳಾಪುರ: ಗೀತಂ ಯುನಿವರ್ಸಿಟಿಯಲ್ಲಿ ಉಗಾಂಡ ಮೂಲದ ವಿದ್ಯಾರ್ಥಿನಿ ಸಾವು

ವಿಮಾನದಲ್ಲಿ ಸಿಕ್ಕಿದ ಸ್ನೇಹಿತ ತಂದ ಆಪತ್ತು

ಶಿವಮೊಗ್ಗ(Shivamogga) ಜಿಲ್ಲೆಯ ಅರಹಂತ್‌, ರಾಜಾಜಿನಗರದಲ್ಲಿ ತನ್ನ ಸೋದರನ ಜತೆ ನೆಲೆಸಿದ್ದ. ಸರ್ಕಾರಿ ಉದ್ಯೋಗ ಕೊಡಿಸುವುದು ಸೇರಿದಂತೆ ಜನರಿಗೆ ನಾನು ರೀತಿ ಸುಳ್ಳು ಹೇಳಿ ವಂಚಿಸಿ ಹಣ ಸಂಪಾದಿಸುವುದು ಆತನ ಕೃತ್ಯವಾಗಿತ್ತು. ಆಗಾಗ್ಗೆ ವಿದೇಶಕ್ಕೆ ತೆರಳಿ ಮೋಜು ಮಸ್ತಿ ಮಾಡುವುದು ಅರಹಂತ್‌ ಖಯಾಲಿಯಾಗಿತ್ತು. ಹೀಗೆ 2019ರಲ್ಲಿ ಮಲೇಷಿಯಾದ ಕೌಲಾಲಂಪುರಕ್ಕೆ ತೆರಳುವಾಗ ವಿಮಾನದಲ್ಲಿ ಆರೋಪಿಗೆ ಸುನಾಲ್‌ ಸಕ್ಸೆನಾ ಸ್ನೇಹವಾಗಿದೆ. ಆಗ ತಾನು ಪಿಎಂಓ ಕಚೇರಿ(PMO Office), ರಾ(RAW) ಹಾಗೂ ಐಬಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ಆರೋಪಿ ಪರಿಚಯಿಸಿಕೊಂಡಿದ್ದ. ಅದೇ ವರ್ಷ ಇಟಲಿ ಮತ್ತು ಚೆಕ್‌ ಗಣ್ಯರಾಜ್ಯಗಳಿಗೆ ತೆರಳಲು ವೀಸಾಗೆ ಸುನಾಲ ಅರ್ಜಿ ಸಲ್ಲಿಸಿದ್ದರು. ಆದರೆ ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಅವರ ವೀಸಾ ಅರ್ಜಿ ತಿರಸ್ಕೃತವಾಗಿತ್ತು. ಆಗ ತನ್ನ ಸ್ನೇಹಿತ ಅರಹಂತ್‌ನನ್ನು ಸಂಪರ್ಕಿಸಿ ಆಕೆ ವೀಸಾ ಪಡೆಯಲು ನೆರವು ಕೋರಿದ್ದರು. 2020ರ ಜನವರಿಯಲ್ಲಿ ಸೂಕ್ತ ಮಾರ್ಗದಲ್ಲಿ ಅರ್ಜಿ ಸಲ್ಲಿಸಿದ್ದರಿಂದ ಸುನಾಲಗೆ ವೀಸಾ ಸಿಕ್ಕಿತ್ತು. ಆದರೆ ಆರೋಪಿ, ತಾನು ಪಿಎಂಓ ಅಧಿಕಾರಿಯಾಗಿರುವ ಕಾರಣ ನಿನಗೆ ಈ ಮೊದಲು ಯಾಕೆ ವೀಸಾ ತಿರಸ್ಕೃತವಾಯಿತು ಎಂಬುದನ್ನು ವಿಚಾರಿಸುತ್ತೇನೆ ಎಂದಿದ್ದ. ಕೆಲ ದಿನಗಳ ಬಳಿಕ ಸಂತ್ರಸ್ತೆಗೆ ಕರೆ ಮಾಡಿದ ಆರೋಪಿ, ‘ಇಟಲಿ, ಚೆಕ್‌ ಗಣರಾಜ್ಯ, ಫ್ರಾನ್ಸ್‌, ಆಸ್ಟ್ರಿಯಾ, ನೆದರ್‌ಲ್ಯಾಂಡ್‌ ದೇಶಗಳು ಅನುಮಾನದ ಮೇರೆಗೆ ನಿಮ್ಮ ಪಾಸ್‌ ಪೋರ್ಚ್‌ ಅನ್ನು ಕಪ್ಪು ಪಟ್ಟಿಗೆ ಸೇರಿಸಿದ್ದಾರೆ. ಅಲ್ಲದೆ ನಿನ್ನ ಮೇಲೆ ಶಂಕಿತ ಉಗ್ರಗಾಮಿ ಚಟುವಟಿಕೆಗಳ ನಿಗ್ರಹ ಕಾಯ್ದೆಯಡಿ ಪ್ರಕರಣ ಕೂಡ ದಾಖಲಿಸಿವೆ ಎಂದು ಬೆದರಿಸಿದ್ದ. ಅಲ್ಲದೆ ನಾನು ನನ್ನ ಅಧಿಕಾರ ಬಳಸಿ ಸಂಬಂಧಿಸಿದ ವಿದೇಶದ ಅಧಿಕಾರಿಗಳ ಜತೆ ಮಾತುಕತೆ ನಡೆಸಿ ಪ್ರಕರಣ ಹಿಂಪಡೆಯಲು ಸಹಕರಿಸುವುದಾಗಿ ಸುನಾಲ್‌ಗೆ ಆರೋಪಿ ಭರವಸೆ ಕೊಟ್ಟಿದ್ದ. ಆದರೆ ಇದಕ್ಕೆ ಆಸ್ಟ್ರಿಯಾ ಹಾಗೂ ಚೆಕ್‌ ಗಣರಾಜ್ಯ ದೇಶಗಳ 5 ಲಕ್ಷ ಯುರೋ (ಭಾರತದ ರೂಪಾಯಿಗೆ .4 ಕೋಟಿ) ಹಾಗೂ ಇಟಲಿಯ 2 ಲಕ್ಷ ಯುರೋ (.2 ಕೋಟಿ) ಕೊಡುವಂತೆ ಬೇಡಿಕೆ ಇಟ್ಟಿದ್ದ. ಹೀಗೆ ಸುಳ್ಳು ಹೇಳಿ ಹಂತ ಹಂತವಾಗಿ .89 ಲಕ್ಷ ಹಣವನ್ನು ಆತ ಸುಲಿಗೆ ಮಾಡಿದ್ದ. ಇತ್ತೀಚಿಗೆ ಗೆಳೆಯನ ನಡವಳಿಕೆ ಮೇಲೆ ಅನುಮಾನಗೊಂಡ ಸಂತ್ರಸ್ತೆ, ಉತ್ತರಪ್ರದೇಶದಲ್ಲಿರುವ ತನ್ನ ಸಂಬಂಧಿ ಪೊಲೀಸ್‌ ಅಧಿಕಾರಿಯನ್ನು ಸಂಪರ್ಕಿಸಿದರು. ಆಗ ಅವರು ಈ ರೀತಿಯ ಯಾವುದೇ ಅಧಿಕಾರಿಗಳು ಇಲ್ಲ. ನೀನು ಮೋಸ ಹೋಗಿದ್ದೀಯಾ ಎಂದಿದ್ದರು. ಕೊನೆಗೆ ಬೆಳ್ಳಂದೂರು ಠಾಣೆ ತೆರಳಿ ಸಂತ್ರಸ್ತೆ ದೂರು ದಾಖಲಿಸಿದರು. ಅದರಂತೆ ಆರೋಪಿ ಬಂಧನವಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.

ಯುವತಿ ಸಾವಿನ ಸುತ್ತ ಅನುಮಾನದ ಹುತ್ತ, ಆತ್ಮಹತ್ಯೆಯೋ? ಮರ್ಯಾದಾ ಹತ್ಯೆಯೋ?

ಪೊಲೀಸರನ್ನು ಭೇಟಿ ಮಾಡಿದ್ದ ಆರೋಪಿ

ತನ್ನ ಗೆಳತಿಗೆ ತಾನು ಪಿಎಂಓ ಅಧಿಕಾರಿ ಎಂದು ನಂಬಿಸಲು ಆರೋಪಿ, ನಗರದ ಕೆಲ ಠಾಣೆಗಳಿಗೆ ಸಹ ಸಂತ್ರಸ್ತೆಯನ್ನು ಕರೆದೊಯ್ದಿದ್ದ. ಆ ವೇಳೆ ನಿನ್ನ ಮೇಲಿನ ಪ್ರಕರಣ ಹಿಂಪಡೆಯಲು ಪೊಲೀಸರ ಜತೆ ಮಾತುಕತೆ ನಡೆಸಿದ್ದೇನೆ ಎಂದಿದ್ದ. ಇದರಿಂದ ಆಕೆಗೆ ಆರೋಪಿ ಮೇಲೆ ವಿಶ್ವಾಸ ಮೂಡಿತ್ತು ಎನ್ನಲಾಗಿದೆ.

13 ದೇಶಗಳಿಗೆ ಆರೋಪಿ ಭೇಟಿ

ಸಾಫ್ಟ್‌ವೇರ್‌ ಉದ್ಯೋಗದಲ್ಲಿರುವ ತನ್ನ ಅಣ್ಣನ ಜತೆ ತಾನು ರಿಯಲ್‌ ಎಸ್ಟೇಟ್‌ ವ್ಯವಹಾರ(Real Estate Business) ನಡೆಸುವುದಾಗಿ ಹೇಳಿಕೊಂಡಿದ್ದ ಆರೋಪಿ, 13 ವಿದೇಶಳಲ್ಲಿ ಸುತ್ತಾಡಿ ಬಂದಿದ್ದಾನೆ. ಈ ವಿದೇಶ ಯಾತ್ರೆ ಬಗ್ಗೆ ಕೂಡಾ ತನಿಖೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.