82 ವರ್ಷದ ತಂದೆಯನ್ನೇ ಮನೆಯಿಂದ ಹೊರ ಹಾಕಿದ ಮಗ - ಸೊಸೆ!
ಹೆತ್ತ ಮಗನೇ ತಂದೆಯನ್ನು ಮನೆಯಿಂದ ಹೊರ ದಬ್ಬಿದ್ದು, ಇದೀಗ ತಂದೆ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಲೇರಿರುವ ಘಟನೆ ಕನಕಪುರದ ಗೆಂಡೇಕೆರೆ ಗ್ರಾಮದಲ್ಲಿ ನಡೆದಿದೆ. 82 ವರ್ಷದ ಮುದ್ದೇಗೌಡ ತನ್ನ ಮಗ - ಸೊಸೆ ಹಾಗೂ ಮೊಮ್ಮಗನಿಂದ ಅನ್ಯಾಯಕ್ಕೆ ಒಳಗಾದವರು.
ಕನಕಪುರ (ಮಾ.27): ಹೆತ್ತ ಮಗನೇ ತಂದೆಯನ್ನು ಮನೆಯಿಂದ ಹೊರ ದಬ್ಬಿದ್ದು, ಇದೀಗ ತಂದೆ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಲೇರಿರುವ ಘಟನೆ ತಾಲೂಕಿನ ಗೆಂಡೇಕೆರೆ ಗ್ರಾಮದಲ್ಲಿ ನಡೆದಿದೆ. 82 ವರ್ಷದ ಮುದ್ದೇಗೌಡ ತನ್ನ ಮಗ - ಸೊಸೆ ಹಾಗೂ ಮೊಮ್ಮಗನಿಂದ ಅನ್ಯಾಯಕ್ಕೆ ಒಳಗಾದವರು. ತಮಗೆ ಅನ್ಯಾಯವಾಗಿರುವ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಗನ ವಿರುದ್ಧ ದೂರು ನೀಡಿದ್ದಾರೆ.
ತಮಗೆ ಇಬ್ಬರು ಗಂಡು ಮಕ್ಕಳಿದ್ದು ಇಬ್ಬರಿಗೂ ಆಸ್ತಿಯಲ್ಲಿ ಭಾಗ ಮತ್ತು ಪ್ರತ್ಯೇಕ ಮನೆಯನ್ನು ಕೊಟ್ಟಿದ್ದು ಅವರೆಲ್ಲರೂ ಬೇರೆಯಾಗಿ ವಾಸಿಸುತ್ತಿದ್ದಾರೆ ಎಂದು ಮುದ್ದೇಗೌಡ ತಿಳಿಸಿದ್ದಾರೆ. ತಾವು ಒಂದು ಮನೆಯನ್ನು ಉಳಿಸಿಕೊಂಡಿದ್ದು ಪತ್ನಿ ತೀರಿಕೊಂಡಿರುವುದರಿಂದ ಒಬ್ಬಂಟಿಯಾಗಿ ರಾಮನಗರದಲ್ಲಿರುವ ಮಗಳ ಮನೆಯಲ್ಲಿ ಊಟ ಮಾಡಿಕೊಂಡು ಜೀವನ ನಡೆಸುತ್ತಿದ್ದೇನೆ. ಅದನ್ನು ಸಹಿಸದೆ ದೊಡ್ಡಮಗ ಲಿಂಗರಾಜು ಮತ್ತು ಆತನ ಪತ್ನಿ ಹಾಗೂ ಆತನ ಪುತ್ರ ಪ್ರತಿದಿನ ಚಿತ್ರಹಿಂಸೆ ಕೊಡುತ್ತಿರುವುದಾಗಿ ಅವರು ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಮಧ್ಯಸ್ಥರ ಮೂಲಕ ನ್ಯಾಯ ಪಂಚಾಯಿತಿ ಮಾಡಿ ನನ್ನ ವಿಚಾರಕ್ಕೆ ಬರುವುದಿಲ್ಲವೆಂದು ಹೇಳಿದ ಮಗ ಈಗ ಪಂಪು ಮೋಟಾರ್ ವಿಚಾರಕ್ಕೆ ಗಲಾಟೆ ಮಾಡಿ ಮನೆಯ ಬಾಗಿಲು ಒಡೆದು, ಮನೆಯಲ್ಲಿ ಚಿನ್ನಾಭರಣ, ಹಣ ತೆಗೆದುಕೊಂಡು ಬೇರೆ ಬೀಗ ಹಾಕಿಕೊಂಡು ಮನೆಗೆ ಹೋಗದಂತೆ ಮಾಡಿದ್ದಾನೆ. ವಯಸ್ಸಾದ ನನಗೆ ನೆಮ್ಮದಿಯಾಗಿ ಜೀವನ ಮಾಡಲು ಬಿಡುತ್ತಿಲ್ಲ. ಮಗನ ದೌರ್ಜನ್ಯ ಹೆಚ್ಚಾಗಿದ್ದು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಅವನಿಂದ ತಮಗೆ ರಕ್ಷಣೆ ಬೇಕಿದೆ ಎಂದು ಅವರು ತಮ್ಮ ನೋವನ್ನು ಹೇಳಿಕೊಂಡಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಗೆ ಮಾ.20ರಂದು ದೂರು ನೀಡಿದ್ದು ಅವರು ನನಗೆ ನ್ಯಾಯ ಕೊಡಿಸುತ್ತಿಲ್ಲವೆಂದು ಆರೋಪಿಸಿದ್ದಾರೆ.
Yadgir: ಬಟ್ಟೆ ಅಂಗಡಿಯಲ್ಲಿ ದಂಪತಿ ಸಜೀವ ದಹನ, ಮಕ್ಕಳು ಸೇರಿ ನಾಲ್ವರು ಪಾರು
ಬೆಟ್ಟದ ಮೇಲಿಂದ ಬಿದ್ದು ಪ್ರೇಮಿಗಳು ಆತ್ಮಹತ್ಯೆ ಯತ್ನ:
ರಾಮನಗರ: ಪ್ರೀತಿಗೆ ಪೋಷಕರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪ್ರೇಮಿಗಳಿಬ್ಬರು ರಾಮದೇವರ ಬೆಟ್ಟದ ನಿರ್ಜನ ಪ್ರದೇಶದಲ್ಲಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಶುಕ್ರವಾರ ನಡೆದಿದೆ. ಬೆಂಗಳೂರು ಕತ್ತರಿಗುಪ್ಪೆ ನಿವಾಸಿಗಳಾದ ಚೇತನ್(19), ಸಾಹಿತ್ಯ(19) ಆತ್ಮಹತ್ಯೆಗೆ ಯತ್ನಿಸಿ ಗಾಯಗೊಂಡವರು. ಇವರನ್ನು ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರವೀಂದ್ರಚಾರ್ ಪುತ್ರ ಚೇತನ್ ಮತ್ತು ಮುನಿರಾಜು ಪುತ್ರಿ ಸಾಹಿತ್ಯ ಪ್ರಥಮ ವರ್ಷದ ಬಿಎ ವ್ಯಾಸಂಗ ಮಾಡುತ್ತಿದ್ದು, ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು.
Bengaluru: ಆಶ್ಲೀಲ ವೆಬ್‌ಸೈಟ್‌ಗೆ ಮಗಳ ಫೋಟೋ ಅಪ್ಲೋಡ್ ಮಾಡುವ ಬೆದರಿಕೆ,
ಈ ಪ್ರೀತಿಯ ವಿಷಯ ತಿಳಿದ ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಮನನೊಂದ ಇಬ್ಬರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪೋಷಕರಿಗೆ ಪೋನ್ ಮಾಡಿ ತಿಳಿಸಿದ್ದಾರೆ. ಬೆಂಗಳೂರಿನಿಂದ ರಾಮನಗರದ ರಾಮದೇವರ ಬೆಟ್ಟಕ್ಕೆ ಆಗಮಿಸಿರುವ ಇಬ್ಬರು ಬೆಟ್ಟದ ನಿರ್ಜನ ಪ್ರದೇಶದಲ್ಲಿ ಬಂಡೆ ಮೇಲಿಂದ ಕೆಳಗೆ ಬಿದ್ದಿದ್ದಾರೆ. ಸ್ಥಳೀಯರು ತಕ್ಷಣ ಇಬ್ಬರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಯುವಕನ ಸ್ಥಿತಿ ಗಂಭೀರವಾಗಿದ್ದರೆ, ಯುವತಿಗೆ ಸಣ್ಣಪುಟ್ಟಗಾಯಗಳಾಗಿವೆ. ಘಟನಾ ಸ್ಥಳಕ್ಕೆ ಎಎಸ್‌ಐ ರುದ್ರೇಶ್ ಭೇಟಿ ನೀಡಿ ಪರಿಶೀಲಿಸಿದರು. ರಾಮನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.