ವೆಲ್ಡಿಂಗ್ ಶಾಪ್ ಮಾಲೀಕರ ಕಾರ್ಯಕ್ಕೆ ಒಂದು ಅಮಾಯಕ ಮಗುವಿನ ಜೀವ ಹೋಗಿದೆ. ರಸ್ತೆಯಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದಾಗ ಮಗುವಿನ ಮೇಲೆ ಕಬ್ಬಿಣದ ಗ್ರಿಲ್ ಬಿದ್ದಿದೆ.

ಶಿವಮೊಗ್ಗ, [ಜ.04]: ಕಬ್ಬಿಣದ ಗ್ರಿಲ್ ಬಿದ್ದು 8 ವರ್ಷದ ಮಗು ಮೃತಪಟ್ಟ ಘಟನೆ ಶನಿವಾರ ಶಿವಮೊಗ್ಗ ನಗರದಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶಿವಮೊಗ್ಗ ನಗರದ ಲಕ್ಷ್ಮೀ ಚಲನಚಿತ್ರ ಮಂದಿರದ ಎದುರಿನ ಹೊಸಮನೆ ಚಾನಲ್ ರಸ್ತೆಯಲ್ಲಿ ಆಟವಾಡುತ್ತಿರುವ ಬಾಲಕನ ಮೇಲೆ ದೊಡ್ಡದಾದ ಕಬ್ಬಿಣದ ಗ್ರಿಲ್ ಬಿದ್ದಿದೆ. ಪರಿಣಾಮ ಯುವರಾಜ್ (8 ) ಎಂಬ ಬಾಲಕ ಸಾವನ್ನಪ್ಪಿದ್ದಾನೆ.

 ಬೇರೆಯವರ ಮನೆಯಲ್ಲಿ ಕೆಲಸ ಮಾಡುತ್ತ ಜೀವನ ಸಾಗಿಸುತ್ತಿದ್ದ ಅಂಬಿಕ ಇದೀಗ ಪುತ್ರನನ್ನು ಕಳೆದುಕೊಂಡು ಕಂಗಾಲಾಗಿದ್ದಾಳೆ. ರಸ್ತೆಯಲ್ಲೇ ವೆಲ್ಡಿಂಗ್ ಶಾಪ್ ಗಳ ಕೆಲಸಗಳು ನಡೆಯುವುದರಿಂದ ಯುವರಾಜ್ ನ ಮೇಲೆ ಕಬ್ಬಿಣದ ಗ್ರಿಲ್ ಬಿದ್ದಿದೆ ಎಂದು ತಿಳಿದುಬಂದಿದೆ.

 ಶಿವಮೊಗ್ಗದ ವಿನೋಬನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವೆಲ್ಡಿಂಗ್ ಶಾಪ್ ನವರ ಮನೆ ಹಾಳು ಕೆಲಸಕ್ಕೆ ಇನ್ನು ಬಾಳಿ ಬದುಕಬೇಕಿದ್ದ ಪುಟ್ಟ ಬಾಲಕ ಬಲಿಯಾಗಿದ್ದು, ಈ ಸಾವಿಗೆ ಹೊಣೆ ಯಾರು..?