*  ಗೌಸಿಯಾ ಪಾಲಿಟೆಕ್ನಿಕ್‌ ಫಾರ್‌ ವುಮನ್‌ ಕಾಲೇಜಿನ ಮಾಜಿ ಅಧ್ಯಕ್ಷನ ಕೃತ್ಯ*  ಸುದ್ದಗುಂಟೆ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲು *  ಹಣವನ್ನು ಸ್ವಂತಕ್ಕೆ ಬಳಸಿಕೊಂಡು ನೌಕರರಿಗೆ ಮೋಸ ಮಾಡಿದ ವಂಚಕ  

ಬೆಂಗಳೂರು(ಜ.15): ಕಾಲೇಜಿಗೆ ಸರ್ಕಾರದಿಂದ ಅನುದಾನಿತ ಅನುಮೋದನೆ ಪಡೆದು ಸರ್ಕಾರದಿಂದ ವೇತನ ಕೊಡಿಸುವುದಾಗಿ ಕಾಲೇಜಿನ 70 ನೌಕರರಿಂದ ಸುಮಾರು 78 ಲಕ್ಷ ಪಡೆದು ವಂಚಿಸಿದ(Fraud) ಆರೋಪದಡಿ ನಗರದ ಗೌಸಿಯಾ ಪಾಲಿಟೆಕ್ನಿಕ್‌ ಫಾರ್‌ ವಿಮೆನ್‌ ಕಾಲೇಜಿನ ಆಡಳಿತ ಸಮಿತಿಯ ಮಾಜಿ ಅಧ್ಯಕ್ಷ ಸುಭಾನ್‌ ಶರೀಫ್‌ ವಿರುದ್ಧ ಸುದ್ದಗುಂಟೆ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌(FIR) ದಾಖಲಾಗಿದೆ.

ಗೌಸಿಯಾ ಇಂಡಸ್ಟ್ರಿಯಲ್‌ ಎಂಜಿನಿಯರಿಂಗ್‌ ಟ್ರಸ್ಟ್‌ ಚೇರ್ಮನ್‌ ಡಾ. ಅಹಮದ್‌ ಶರೀಫ್‌ ಸಿರಿಜ್‌ ಅವರು ನೀಡಿದ ದೂರಿನ ಮೇರೆಗೆ ಎಫ್‌ಐಆರ್‌ ದಾಖಲಿಸಲಾಗಿದೆ. ಗೌಸಿಯಾ ಇಂಡಸ್ಟ್ರಿಯಲ್‌ ಎಂಜಿನಿಯರಿಂಗ್‌ ಟ್ರಸ್ಟ್‌ ಅಡಿಯಲ್ಲಿ ಗೌಸಿಯಾ ಪಾಲಿಟೆಕ್ನಿಕ್‌ ಫಾರ್‌ ವಿಮೆನ್‌ ಕಾಲೇಜು ಕಾರ್ಯ ನಿರ್ವಹಿಸುತ್ತಿದೆ. ಈ ಕಾಲೇಜಿನ ಆಡಳಿತ ಸಮಿತಿಗೆ ಸುಭಾನ್‌ ಶರೀಫ್‌ 2013ರಿಂದ 2018ರ ವರೆಗೆ ಅಧ್ಯಕ್ಷರಾಗಿದ್ದರು. ಈ ವೇಳೆ ಅವರು ಈ ಕಾಲೇಜಿಗೆ ಸರ್ಕಾರದಿಂದ ಅನುದಾನಿತ ಕಾಲೇಜಿನ ಅನುಮೋದನೆ ಪಡೆಯುತ್ತಿದ್ದೇವೆ. ಇದರಿಂದ ಸರ್ಕಾರದಿಂದಲೇ ವೇತನ(Salary) ಸಿಗಲಿದೆ ಎಂದು ಕಾಲೇಜಿನ 70 ನೌಕರಿಗೆ(Employees) ನಂಬಿಸಿದ್ದಾರೆ.

Anand Appugol Arrest: ಬಹುಕೋಟಿ ವಂಚನೆ ಇಡಿಯಿಂದ ನಿರ್ಮಾಪಕ ಆನಂದ್ ಅಪ್ಪುಗೋಳ್ ಅರೆಸ್ಟ್

ಅಂತೆಯೆ 2013ರಿಂದ 2016ರ ವರೆಗೆ ಈ ನೌಕರರಿಗೆ ವೇತನ ನೀಡದೆ, ಸರ್ಕಾರದಿಂದ ವೇತನ ಸಿಗಲಿದೆ ಎಂದು ಹೇಳಿಕೊಂಡು ನೌಕರರಿಂದಲೇ ಸುಮಾರು 78 ಲಕ್ಷ ಸಂಗ್ರಹಿಸಿದ್ದಾರೆ. ಈ ಹಣವನ್ನು(Money) ಸ್ವಂತಕ್ಕೆ ಬಳಸಿಕೊಂಡು ನೌಕರರಿಗೆ ಮೋಸ ಹಾಗೂ ವಂಚನೆ ಮಾಡಿದ್ದಾರೆ. ಈ ಹಣವನ್ನು ವಾಪಾಸ್‌ ಕೇಳಲು ಹೋಗುವ ನೌಕರರಿಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ. ಹೀಗಾಗಿ ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಕೋರಿದ್ದಾರೆ. ಈ ದೂರು ಆಧರಿಸಿ ಪೊಲೀಸರು(Police) ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಇನ್ಫೋಸಿಸ್‌ನಲ್ಲಿ ಉದ್ಯೋಗದ ಆಸೆ ತೋರಿಸಿ ರೂ. 4.32 ಲಕ್ಷ ವಂಚನೆ!

ಬೆಂಗಳೂರು: ಇನ್ಫೋಸಿಸ್ ಕಂಪನಿ (Infosys) ಹೆಸರಿನಲ್ಲಿ ಕರೆ ಮಾಡಿ ಕೆಲಸ ಕೊಡಿಸುವುದಾಗಿ ವ್ಯಕ್ತಿಯಯೊಬ್ಬರನ್ನು ನಂಬಿಸಿ ₹4.32 ಲಕ್ಷ ಪಡೆದು ವಂಚಿಸಲಾಗಿದೆ. ಗೊರಗುಂಟೆ ಪಾಳ್ಯದ ಎಂ.ವಿನಿತ್‌(24) ಎಂಬುವವರು ಸೈಬರ್‌ ಚೋರರಿಂದ (Cyber Crime) ವಂಚನೆಗೆ ಒಳಗಾಗಿದ್ದಾರೆ. ಇವರು ನೀಡಿದ ದೂರಿನ ಮೇರೆಗೆ ಉತ್ತರ ಸಿಇಎನ್‌ ಸೈಬರ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿ ಸೈಬರ್‌ ಕಳ್ಳನ ಪತ್ತೆಗೆ ಬಲೆ ಬೀಸಿದ್ದಾರೆ.

Cheating Case : ಹಾಸನದಲ್ಲಿ ಮಾಜಿ ಸಚಿವ ಅರೆಸ್ಟ್, ಹಿಂಬಾಲಿಸಿ ಬಂಧಿಸಿದ್ರು!

ಇತ್ತೀಚೆಗೆ ವಿನೀತ್‌ ಅವರ ಮೊಬೈಲ್‌ಗೆ ಕರೆ ಮಾಡಿರುವ ಅಪರಿಚಿತ ವ್ಯಕ್ತಿಯೊಬ್ಬ, ತಾನು ಇಸ್ಫೋಸಿಸ್‌ ಕಂಪನಿಯಿಂದ ಮಾತನಾಡುತ್ತಿರುವುದಾಗಿ ಪರಿಚಯಿಸಿಕೊಂಡಿದ್ದಾನೆ. ಕಂಪನಿಯಲ್ಲಿ ಕೆಲಸ ಖಾಲಿ ಇದ್ದು, ನಿಮಗೆ ಕೆಲಸ ನೀಡುವುದಾಗಿ ಹೇಳಿ ನಂಬಿಸಿದ್ದಾನೆ. ಈತನ ಮಾತು ನಂಬಿದ ವಿನೀತ್‌ ಕೆಲಸ ಮಾಡಲು ತಾವು ಸಿದ್ಧರಿರುವುದಾಗಿ ಹೇಳಿದ್ದಾರೆ. ಈ ವೇಳೆ ಅಪರಿಚಿತ ವ್ಯಕ್ತಿಯು ಕೆಲಸ ಸೇರಲು ಕೆಲ ಶುಲ್ಕಗಳನ್ನು (Fee) ಪಾವತಿಸಬೇಕು ಎಂದು ವಿವಿಧ ಹಂತಗಳಲ್ಲಿ ವಿನೀತ್‌ ಅವರಿಂದ ಬರೋಬ್ಬರಿ 4.30 ಲಕ್ಷ ವರ್ಗಾವಣೆ ಮಾಡಿಸಿಕೊಂಡಿದ್ದಾನೆ.

ಬಳಿಕ ವಿನೀತ್‌ ಕರೆ ಮಾಡಿದಾಗ ಅಪರಿಚಿತ ತನ್ನ ಮೊಬೈಲ್‌ ಸ್ವಿಚ್‌ಆಫ್‌ ಮಾಡಿದ್ದಾನೆ. ಹಲವು ಬಾರಿ ಪ್ರಯತ್ನಿಸಿದರೂ ಸಂಪರ್ಕಕ್ಕೆ ಸಿಕ್ಕಿಲ್ಲ. ಬಳಿಕ ವಿನೀತ್‌ಗೆ ತಾನು ಸೈಬರ್‌ ಖದೀಮರ ಬಲೆಗೆ ಬಿದ್ದಿರುವುದು ಅರಿವಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ವಂಚಕನ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾಡಲಿಂಗ್‌ ಹೆಸರಿನಲ್ಲಿ ಯುವತಿಯರಿಗೆ ವಂಚಿಸಿದ್ದ ವಿದ್ಯಾರ್ಥಿ ಸೆರೆ!

ಇನ್ಸ್‌ಸ್ಟಾಗ್ರಾಂನಲ್ಲಿ (Instagram) ಯುವತಿಯ ಹೆಸರಿನಲ್ಲಿ ನಕಲಿ ಖಾತೆ ತೆರೆದು ತಾನು ಮಾಡೆಲಿಂಗ್‌ಗೆ ಅವಕಾಶ ಕೊಡಿಸುವುದಾಗಿ ಯುವತಿಯರ ಬೋಲ್ಡ್‌ ಲುಕ್‌ನ ಫೋಟೋ ಪಡೆದು ಬಳಿಕ ಅಶ್ಲೀಲವಾಗಿ ಮಾರ್ಫಿಂಗ್‌ ಮಾಡಿ ಹಣಕ್ಕೆ ಬ್ಲ್ಯಾಕ್‌ ಮೇಲ್‌ ಮಾಡುತ್ತಿದ್ದ ಆರೋಪಿಯನ್ನು ಹಲಸೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.