Cheating Case : ಹಾಸನದಲ್ಲಿ ಮಾಜಿ ಸಚಿವ ಅರೆಸ್ಟ್, ಹಿಂಬಾಲಿಸಿ ಬಂಧಿಸಿದ್ರು!
* ಹಾಸನದಲ್ಲಿ ತಮಿಳುನಾಡಿನ ಮಾಜಿ ಸಚಿವರ ಬಂಧನ.
* ಕೆಲಸ ಕೊಡಿಸುವುದಾಗಿ ಮೂರು ಕೋಟಿ ವಂಚಿಸಿದ್ದ ಪ್ರಕರಣ
* ಎಐಎಡಿಎಂಕೆ ಪಕ್ಷದ ರಾಜೇಂದ್ರ ಬಾಲಾಜಿಯನ್ನು ಬಂಧಿಸಿದ ತಮಿಳುನಾಡು ಪೊಲೀಸರು.
* ಹಾಸನ ನಗರದ ಡಿಸಿ ಕಚೇರಿ ಎದುರು ಕಾರಿನಲ್ಲಿ ಹೋಗುತ್ತಿದ್ದಾಗ ಹಿಂಬಾಲಿಸಿ ಬಂಧನ
ಚೆನ್ನೈ/ ಹಾಸನ(ಜ. 05) ಕೆಲಸ ಕೊಡಿಸುವುದಾಗಿ(Fraud) ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ತಮಿಳುನಾಡಿನ (Tamilnadu) ಮಾಜಿ ಸಚಿವರನ್ನು ಕರ್ನಾಟಕದ (Karnataka) ಹಾಸನದಲ್ಲಿ (Hassan) ಬಂಧಿಸಲಾಗಿದೆ.
ಎಐಎಡಿಎಂಕೆ ಪಕ್ಷದ ರಾಜೇಂದ್ರ ಬಾಲಾಜಿಯನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. ಹಾಸನ ನಗರದ ಡಿಸಿ ಕಚೇರಿ ಎದುರು ಕಾರಿನಲ್ಲಿ ಹೋಗುತ್ತಿದ್ದಾಗ ಹಿಂಬಾಲಿಸಿ ವಶಕ್ಕೆ ಪಡೆಯಲಾಗಿದೆ.
ಸರ್ಕಾರವಿದ್ದಾಗ ಹಾಲು ಮತ್ತು ಡೈರಿ ಅಭಿವೃದ್ಧಿ ಖಾತೆಯನ್ನು ಹೊಂದಿದ್ದ ಬಾಲಾಜಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿ ಹಲವಾರು ವ್ಯಕ್ತಿಗಳಿಂದ ಭಾರಿ ಮೊತ್ತವನ್ನು ವಸೂಲಿ ಮಾಡಿದ್ದಾರೆ ಎನ್ನುವ ಆರೋಪ ಇದೆ. ಸತ್ತೂರು ನಿವಾಸಿ ಎಸ್. ರವೀಂದ್ರನ್ ನವೆಂಬರ್ 2020 ರ ವೇಳೆ ಮಾಜಿ ಸಚಿವರ ಸಂಬಂಧಿಗೆ 30 ಲಕ್ಷ ರೂ ನೀಡಿದ್ದು ವಂಚನೆಯಾಗಿದೆ ಎಂದು ಆರೋಪಿಸಿದ್ದರು.
Sexual Harassment : ಕೆಲಸ ಕೊಡಿಸುವ ನೆಪದಲ್ಲಿ ವಿವಾಹಿತೆಯನ್ನು ಹೋಟೆಲ್‌ಗೆ ಕರೆದ!
ಮಾಜಿ ಸಚಿವರ ಹೆಸರಿನಲ್ಲಿ ಆಗಿನ ಎಐಎಡಿಎಂಕೆ ಕಾರ್ಯಾಧ್ಯಕ್ಷ ವಿಜಯನ್ ನಲ್ಲತಂಬಿ ಮತ್ತು ಪಕ್ಷದ ಕಾರ್ಯಕರ್ತ ಮರಿಯಪ್ಪನ್ ಸಹಾಯಕರಾದ ಬಾಬುರಾಜ್, ಬಲರಾಮನ್ ಮತ್ತು ಮುತ್ತುಪಾಂಡಿ ಅವರ ಮೂಲಕ ಸುಮಾರು 1.60 ಕೋಟಿ ರೂ.ಗಳನ್ನು ಸಂಗ್ರಹಿಸಿದ್ದಾರೆ ಎನ್ನುವ ಆರೋಪ ಇದೆ.
ವೈದ್ಯನ ವಂಚಿಸಿದ ಆಂಟಿಯರು: ಬಾಲಕಿಯೊಬ್ಬಳನ್ನು (Girl) ಮುಂದೆ ಮಾಡಿ ವೈದ್ಯನನ್ನು(Doctor) ಬಲೆಗೆ ಕೆಡವಿದ್ದರು. ಆತನಿಂದ ಲಕ್ಚಾಂತರ ರೂ. ಸುಲಿಗೆ ಮಾಡಿದ್ದ ಆಂಟಿಯರ ಮೇಲೆ ಪ್ರಕರಣ ದಾಖಲಾಗಿತ್ತು.
ವೈದ್ಯನೊಬ್ಬನ್ನು ಬಲೆಗೆ ಬೀಳಿಸಿ ಆತನಿಂದ 60 ಲಕ್ಷ ರೂ. ವಂಚನೆಗೆ ಯತ್ನಿಸಿ ಮಾಡಿದ ಇಬ್ಬರು ಮಹಿಳೆಯರನ್ನು ಬಂಧಿಸಲಾಗಿದೆ. ಚೆಕ್ ಅಪ್ ಗೆ ಎಂದು ಬಂದವರು ವೈದ್ಯನ ನಂಬರ್ ಪಡೆದುಕೊಂಡು ನಿಧಾನವಾಗಿ ಚಾಟಿಂಗ್ ಆರಂಭಿಸಿದ್ದಾರೆ.
ನಿಮ್ಮ ಮೇಲೆ ನಮಗೆ ಪ್ರೀತಿ ಹುಟ್ಟಿದೆ ಎಂದು ವೈದ್ಯರ ಜತೆ ಮಾತನಾಡಿ ನಿಧಾನವಾಗಿ ಚಾಟಿಂಗ್ ಮಾಡುತ್ತ ಬುಟ್ಟಿಗೆ ಹಾಕಿಕೊಂಡಿದ್ದರು. ಬಂಧಿತ ಮಹಿಳೆಯರನ್ಜು ಪೂನಂ ಪಾಟೀಲ್, ಪ್ರಾಚಿ ಗಾಯಕ್ವಾಡ್ ಎಂದು ಗುರುತಿಸಲಾಗಿದೆ. ಮಹಿಳೆಯರ ಜತೆ ಅಪ್ರಾಪ್ತ ಬಾಲಕಿಯೊಬ್ಬಳ ವಿಚಾರಣೆಗೆ ಒಳಪಡಿಸಲಾಗಿದೆ.
ಮಹಿಳೆಯರ ನಾಟಕ ನಂಬಿದ ವೈದ್ಯ ಅವರೊಂದಿಗೆ ಮುಕ್ತವಾಗಿ ಮಾತನಾಡಲು ಆರಂಭಿಸಿದ್ದಾನೆ. ಇದೇ ಆತನಿಗೆ ಮುಳುವಾಗಿದೆ. ಮೆಸೇಜ್ ಗಳನ್ನೇ ಇಟ್ಟುಕೊಂಡು ನಂತರ ಬ್ಲಾಕ್ ಮೇಲ್ ಆರಂಭಿಸಿದ್ದಾರೆ.
ಮೊದಲು ಹನ್ನೆರಡು ಲಕ್ಷ ರೂ. ಗೆ ಬೇಡಿಕೆ ಇಟ್ಟಿದ್ದಾರೆ. ಬೆದರಿದ ವೈದ್ಯ ಹಣ ನೀಡಿದ್ದಾನೆ. ಇದಾದ ಮೇಲೆ 48 ಲಕ್ಷ ರೂ. ಗೆ ಬೇಡಿಕೆ ಇಟ್ಟಿದ್ದಾರೆ. ಹಣ ಕೊಡದಿದ್ದರೆ ಸೋಶಿಯಲ್ ಮೀಡಿಯಾದಲ್ಲಿ ಸ್ಕ್ರೀನ್ ಶಾಟ್ ಶೇರ್ ಮಾಡುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದರು. ಕೊನೆಗೆ ದಾರಿ ಕಾಣದ ವೈದ್ಯ ಪೊಲೀಸರ ಮೊರೆ ಹೋಗಿದ್ದರು.
400 ಮಹಿಳೆಯರ ಗುಪ್ತಾಂಗದ ವಿಡಿಯೋ ಸೆರೆ ಹಿಡಿದ ನಕಲಿ ಸ್ತ್ರೀರೋಗ ತಜ್ಞ! ನಕಲಿ ಸ್ತ್ರೀರೋಗತಜ್ಞನ ಬಣ್ಣ ಬಯಲಾಗಿದ್ದು, ಅಕ್ರಮವೆಸಗುತ್ತಿದ್ದ ಸ್ತ್ರೀರೋಗ ತಜ್ಞನನ್ನು ಪೊಲೀಸರು ಆತನನ್ನು ಬಂಧಿಸಿದ್ದರು. . ಈತ ನೂರಾರು ಮಹಿಳೆಯರ ಯೋನಿ ಪರೀಕ್ಷೆಯನ್ನು ವೆಬ್‌ಕ್ಯಾಮ್ ಮೂಲಕ ಮಾಡಿದ್ದಪ್ರಕರಣ ಇಟಲಿಯಿಂದ ವರದಿಯಾಗಿತ್ತು.